ರಕ್ತಹೆಪ್ಪುಗಟ್ಟಿಸುವ ಚಳಿಯಲ್ಲಿ ಮರಗಟ್ಟಿರುವ ಶಿಮ್ಲಾ

Posted By:
Subscribe to Oneindia Kannada

ಶಿಮ್ಲಾ, ಜನವರಿ 12: ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿ ಭಾರೀ ಹಿಮಪಾತ ಹಾಗೂ ತೀವ್ರ ಶೀತಗಾಳಿಗೆ ಸಿಲುಕಿ 12ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಶಿಮ್ಲಾದ ವಿವಿಧೆಡೆ ಭಾರೀ ಹಿಮ ಮಳೆ ಮತ್ತು ರಕ್ತಹೆಪ್ಪುಗೆಟ್ಟುವ ಚಳಿಗೆ ಪ್ರವಾಸಿಗರು ಬಳಲಿದ್ದಾರೆ.

ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲೇ ಇಬ್ಬರು ಚಳಿ ತಾಳಲಾರದೆ ಮೃತಪಟ್ಟಿದ್ದಾರೆ. ಹಿಮಾಚಲದ ಚಾಯಿಲ್ ಪ್ರದೇಶದಲ್ಲಿ ತೀವ್ರ ಚಳಿಯಿಂದ ಪಾರಾಗಲು ಕಲ್ಲಿದ್ದಲು ಶಾಖದ ವ್ಯವಸ್ಥೆಯ ಕೊಠಡಿಯೊಂದರಲ್ಲಿ ಮಲಗಿದ್ದ ಐವರು ಉಸಿರುಗಟ್ಟಿ ಅಸುನೀಗಿದ್ದಾರೆ.ಮೃತಪಟ್ಟವರೆಲ್ಲರೂ ಬಿಹಾರ ಮತ್ತು ಪಶ್ವಿಮ ಬಂಗಾಳದ ಮರಗೆಲಸ ಕಾರ್ಮಿಕರು ಎಂದು ಪೊಲೀಸರು ತಿಳಿಸಿದ್ದಾರೆ.

ಕಾಶ್ಮೀರ, ದೆಹಲಿ, ಪಂಜಾಬ್, ಹರಿಯಾಣ, ಉತ್ತರಪ್ರದೇಶ, ಉತ್ತರಾಖಂಡ್, ರಾಜಸ್ತಾನ್ ಸೇರಿದಂತೆ ಭಾರತದ ಕೆಲವೆಡೆ ಹಿಮಪಾತ ಮತ್ತು ವರ್ಷಧಾರೆ ಮುಂದುವರಿದಿದ್ದು ಸಾರ್ವಜನಿಕ ಜೀವನ ಅಸ್ತವ್ಯಸ್ತವಾಗಿದೆ.

ಹಿಮಾಚಲ ಪ್ರದೇಶದಲ್ಲಿ ಚಳಿ ಜಾಸ್ತಿಯಾಗುತ್ತಿದ್ದು, ವಿಪರೀತ ಹಿಮಪಾತ ಆಗುತ್ತಿರುವ ಬಗ್ಗೆ ಎಲ್ಲೆಡೆ ಎಚ್ಚರಿಕೆ ನೀಡಲಾಗುತ್ತಿದೆ. ಈಗಾಗಲೇ ಪ್ರವಾಸಕ್ಕೆಂದು ಬಂದಿರುವವರು ಎಲ್ಲೂ ಹೋಗಲು ಆಗದಂತೆ ಚಳಿ, ಗಾಳಿ ಹೊಡೆತಕ್ಕೆ ಸಿಲುಕಿ ತತ್ತರಿಸಿದ್ದಾರೆ.

ರಸ್ತೆಗಳ ಮೇಲೆ, ವಾಹನಗಳ ಮೇಲೆ ಒಂದು ಅಡಿಯಷ್ಟು ಹಿಮ ಬಿದ್ದಿರುವುದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಕಳೆದ 24 ಗಂಟೆಗಳಲ್ಲಿ ಉಷ್ಣಾಂಶ 1ಡಿಗ್ರಿ ಸೆಲ್ಸಿಯಸ್​ಗಿಂತ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳು, ಪ್ರವಾಸಿಗರು ಚಳಿಗೆ ಕಂಗಾಲಾಗಿದ್ದಾರೆ.

ಪ್ರವಾಸಿಗರನ್ನು ಕಾಡುತ್ತಿದೆ.

ಪ್ರವಾಸಿಗರನ್ನು ಕಾಡುತ್ತಿದೆ.

ಶಿಮ್ಲಾದಲ್ಲಿ ಬುಧವಾರ ಮೈನಸ್ 3.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತು. ಪ್ರವಾಸಿ ತಾಣ ಮನಾಲಿಯಲ್ಲಿ ಮೈನಸ್ 6.6, ಹೀಗೆ ಹಿಮಾಚಲ ಪ್ರದೇಶ ಹೆಸರಿಗೆ ತಕ್ಕಂತೆ ಹಿಮದಿಂದ, ಚಳಿಯಿಂದ ಆವರಿಸಿಕೊಂಡು ಪ್ರವಾಸಿಗರನ್ನು ಕಾಡುತ್ತಿದೆ.

ಚಳಿಯನ್ನು ಲೆಕ್ಕಿಸದ ಪ್ರವಾಸಿಗರು

ಚಳಿಯನ್ನು ಲೆಕ್ಕಿಸದ ಪ್ರವಾಸಿಗರು

ರಸ್ತೆಗಳ ಮೇಲೆ, ವಾಹನಗಳ ಮೇಲೆ ಒಂದು ಅಡಿಯಷ್ಟು ಹಿಮ ಬಿದ್ದಿರುವುದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಆದರೆ, ಚಳಿಯನ್ನು ಲೆಕ್ಕಿಸದ ಪ್ರವಾಸಿಗರು ರಸ್ತೆಗಿಳಿದು ಹಿಮದಲ್ಲಿ ಆಟವಾಡುತ್ತಿದ್ದ ದೃಶ್ಯ ಕಂಡು ಬಂದಿದೆ.

ಪ್ರಮುಖ ಪ್ರವಾಸಿ ತಾಣ

ಪ್ರಮುಖ ಪ್ರವಾಸಿ ತಾಣ

ಪ್ರಮುಖ ಪ್ರವಾಸಿ ತಾಣಗಳಾದ ಶಿಮ್ಲಾ, ಮನಾಲಿ, ಚಂಬಾ, ಡಾಲ್ ಹೌಸಿ ಎಲ್ಲವೂ ಪರಸ್ಪರ ಸಂಚಾರ ಸಂಪರ್ಕ ಕಳೆದುಕೊಂಡಿವೆ. ಫೋನ್, ಇಂಟರ್ನೆಟ್ ವ್ಯವಸ್ಥೆ ಕೂಡಾ ವ್ಯತ್ಯಯವಾಗಿದೆ. ಆಗತ್ಯ ವಸ್ತುಗಳ ಪೂರೈಕೆ ಮಾಡುವಲ್ಲಿ ಆಡಳಿತ ವಿಫಲವಾಗಿದೆ ಎಂದು ಸಂಸದ ಅನುರಾಗ್ ಠಾಕೂರ್ ಬೇಸರ ವ್ಯಕ್ತಪಡಿಸಿದ್ದಾರೆ.

ಹಿಮಮಳೆಯ ಆನಂದ

ಹಿಮಮಳೆಯ ಆನಂದ

ಹಿಮಮಳೆಯ ಆನಂದವನ್ನು ಕಿನಾರ್, ಲಾಹಾಲ್, ಸ್ಪಿತಿ, ಶಿಮ್ಲಾ, ಕುಲು, ಚಂಬಾ ಜಿಲ್ಲೆಯ ಜನರು ಅನುಭವಿಸುತ್ತಿದ್ದರೆ, ಪ್ರವಾಸಿಗರಿಗೆ ಹೊಸ ಅನುಭವ ಸಿಗುತ್ತಿದೆ. ಕಳೆದ ಒಂದು ವಾರದಿಂದ ಪರಿಸ್ಥಿತಿ ಹೀಗೆ ಮುಂದುವರೆದಿದೆ.

ಉತ್ತರ ಭಾರತದಲ್ಲೂ ಚಳಿಯ ಕೊರೆತ

ಉತ್ತರ ಭಾರತದಲ್ಲೂ ಚಳಿಯ ಕೊರೆತ

ಉತ್ತರ ಭಾರತ, ಈಶಾನ್ಯ ಭಾರತ, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಗಡಿ ಭಾಗದ ಗ್ರಾಮಗಳಲ್ಲಿ ಚಳಿ ಆವರಿಸುತ್ತಿದ್ದು, ಜನತೆ ತತ್ತರಿಸುತ್ತಿದ್ದಾರೆ. ನೋಯ್ಡಾ ಹಾಗೂ ದೆಹಲಿಯ ಶಾಲೆಗಳಿಗೆ ಜನವರಿ 15ರ ತನಕ ರಜೆ ಘೋಷಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Popular tourist destinations Shimla, Manali, Chamba and Dalhousie remained cut off from the rest of Himachal Pradesh due to heavy snowfall. The supply of essential commodities and transportation was hampered
Please Wait while comments are loading...