'ಡ್ರಾಗನ್' ಫಸ್ಟ್‌ ಗ್ಲಿಂಪ್ಸ್ ಔಟ್: ಪ್ರಶಾಂತ್ ನೀಲ್ ನಿರ್ದೇಶನದ ಬಿಗ್ ಬಜೆಟ್ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್ ಅಬ್ಬರ

ಬಹುನಿರೀಕ್ಷಿತ 'ಡ್ರಾಗನ್' ಚಿತ್ರದ ಮೊದಲ ಗ್ಲಿಂಪ್ಸ್ (Frist Glimpse) ಇಂದು ಬಿಡುಗಡೆಯಾಗಿದ್ದು, ನಟ ಜೂನಿಯರ್ ಎನ್‌ಟಿಆರ್ (ತಾರಕ್‌) ಅವರ ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದೆ. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಮತ್ತು ಮ್ಯಾನ್‌ ಆಫ್‌ ಮಾಸಸ್‌ ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್‌ನ ಈ ಆಕ್ಷನ್ ಡ್ರಾಮಾ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.

ಎನ್‌ಟಿಆರ್ ಅವತಾರಕ್ಕೆ ಫ್ಯಾನ್ಸ್ ಫಿದಾ

ಗ್ಲಿಂಪ್ಸ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಇಂಟರ್ನೆಟ್‌ನಲ್ಲಿ ತಲ್ಲಣ ಸೃಷ್ಟಿಸಿದೆ. ಪ್ರಶಾಂತ್ ನೀಲ್ ಅವರು ಈ ಹಿಂದೆ 'ಕೆಜಿಎಫ್'ನಲ್ಲಿ ಯಶ್ ಮತ್ತು 'ಸಲಾರ್'ನಲ್ಲಿ ಪ್ರಭಾಸ್ ಅವರನ್ನು ತೋರಿಸಿದ್ದಕ್ಕಿಂತಲೂ ಹೆಚ್ಚು ವೈಲೆಂಟ್‌ ಆಗಿ ಜೂನಿಯರ್ ಎನ್‌ಟಿಆರ್ ಅವರನ್ನು ಪ್ರಸ್ತುತಪಡಿಸಿದ್ದಾರೆ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. "ಇದು ಜೂನಿಯರ್ ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಇಬ್ಬರ ಕೆರಿಯರ್‌ನಲ್ಲೂ 'ಆರ್‌ಆರ್‌ಆರ್' ಮತ್ತು 'ಕೆಜಿಎಫ್ 2' ನಂತರ ಮತ್ತೊಂದು 1000 ಕೋಟಿ ರೂಪಾಯಿ ಕ್ಲಬ್ ಸೇರುವ ಸಿನಿಮಾ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ" ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು, "ಪ್ರಶಾಂತ್ ನೀಲ್ ಸಿನಿಮಾಗಳ ಮೇಕಿಂಗ್ ಶೈಲಿ ಒಂದೇ ತರ ಇರುತ್ತದೆ, ಆದರೂ ಎನ್‌ಟಿಆರ್ ಲುಕ್ ಅದ್ಭುತವಾಗಿದೆ" ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

Dragon First Glimpse

'ಡ್ರಾಗನ್' ಗ್ಲಿಂಪ್ಸ್ ಕಥೆಯೇನು?

ಈ ಚಿತ್ರವು ಜಾಗತಿಕ ಅಫೀಮು (Opium War) ದಂಧೆಯ ಹಿನ್ನೆಲೆಯನ್ನು ಒಳಗೊಂಡಿರುವ ಆಕ್ಷನ್ ಡ್ರಾಮಾ ಆಗಿದೆ. ಬ್ರಿಟಿಷರು ಭಾರತಕ್ಕೆ ಬಂದಿದ್ದರ ಮುಖ್ಯ ಉದ್ದೇಶ ಹಾಗೂ ಅವರು ಹೋದ ನಂತರ ಅಫೀಮು ದಂಧೆಯನ್ನು ವಶಪಡಿಸಿಕೊಂಡ 'ಅಫ್ಘಾನ್ ಟ್ರೇಡಿಂಗ್ ಕಂಪನಿ' ಮತ್ತು 'ಗೋಲ್ಡನ್ ಟ್ರಯಾಂಗಲ್' ನಡುವಿನ ಯುದ್ಧದ ಕಥೆ ಇದು ಎಂದು ಗ್ಲಿಂಪ್ಸ್‌ನಲ್ಲಿ ವಿವರಿಸಲಾಗಿದೆ.

ಜೂನಿಯರ್ ಎನ್‌ಟಿಆರ್ ಪಾತ್ರ

ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ 'ಲುಗರ್' (Luger) ಅಲಿಯಾಸ್ 'ಡ್ರಾಗನ್' ಎಂಬ ಅಫ್ಘಾನ್ ಟ್ರೇಡಿಂಗ್ ಕಂಪನಿಯ ಮುಖ್ಯ ಹಂತಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಲಿಂಪ್ಸ್ ಕೊನೆಯಲ್ಲಿ ಎನ್‌ಟಿಆರ್ ಹೇಳುವ, "ನಾನು ಕಣ್ಣು ಮುಚ್ಚಿ ಮಲಗಿದಾಗ ಕೊಂದವರ ಮುಖ ನೆನಪಾಗಲ್ಲ, ಇನ್ನುಳಿದಿರೋ ಶತ್ರುಗಳ ಮುಖ ಮಾತ್ರ ಕಾಣಿಸುತ್ತೆ. ತಪ್ಪು ತಿಳುವಳಿಕೆಯಿಂದಲೂ ನನ್ನ ಕನಸಿನಲ್ಲಿ ಬರಬೇಡಿ" ಎಂಬ ಖಡಕ್ ಡೈಲಾಗ್ ಮೈರೋಮಾಂಚನಗೊಳಿಸುವಂತಿದೆ.

Drishyam 3: ದೃಶ್ಯಂ 3 ಚಿತ್ರದ ವಿಮರ್ಶೆ ಮತ್ತು ಬಿಡುಗಡೆ ಅಪ್ಡೇಟ್ಸ್‌: ದೃಶ್ಯಂ 3 ಸಿನಿಮಾದ ಕಥೆಯ ಬಗ್ಗೆ ಹೊಸ ವಿಷಯ ರಿವೀಲ್
Drishyam 3: ದೃಶ್ಯಂ 3 ಚಿತ್ರದ ವಿಮರ್ಶೆ ಮತ್ತು ಬಿಡುಗಡೆ ಅಪ್ಡೇಟ್ಸ್‌: ದೃಶ್ಯಂ 3 ಸಿನಿಮಾದ ಕಥೆಯ ಬಗ್ಗೆ ಹೊಸ ವಿಷಯ ರಿವೀಲ್

ಬಾಲಿವುಡ್ ನಟ ಅನಿಲ್ ಕಪೂರ್ ಅವರು ನಾರ್ಕೋಟಿಕ್ಸ್ ಬ್ಯೂರೋ ಮುಖ್ಯಸ್ಥ 'ರಘುವೀರ್ ರಾಥೋಡ್' ಪಾತ್ರದಲ್ಲಿ ಮತ್ತು ಮಲಯಾಳಂ ನಟ ಬಿಜು ಮೆನನ್ ಅವರು ಅಫ್ಘಾನಿಸ್ತಾನ್ ಲಾಜಿಸ್ಟಿಕ್ಸ್ ಹೆಡ್ 'ಜಲೀಲ್ ರೆಹಮಾನ್' ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೊದಲು ಇದೇ ವರ್ಷ ಜೂನ್ 25ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಈಗ ಚಿತ್ರದ ಬಿಡುಗಡೆಯನ್ನು ಮುಂದಿನ ವರ್ಷ ಜೂನ್ 11ಕ್ಕೆ ಮುಂದೂಡಲಾಗಿದೆ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.

ಈಗಾಗಲೇ ಬಿಡುಗಡೆಯಾಗಿರುವ ಗ್ಲಿಂಪ್ಸ್ ವಿಡಿಯೋ ಸಿನಿಮಾದ ಮೇಕಿಂಗ್ ಎಷ್ಟು ಬೃಹತ್ ಆಗಿರಲಿದೆ ಎಂಬುದನ್ನು ಸಾಬೀತುಪಡಿಸಿದೆ. ಪ್ರಶಾಂತ್ ನೀಲ್ ಎಂದಿನಂತೆ ತಮ್ಮದೇ ವಿಶಿಷ್ಟ ಶೈಲಿಯ ಡಾರ್ಕ್ ಥೀಮ್ ಹಾಗೂ ಆಳವಾದ ಹಿನ್ನೆಲೆ ಕಥೆಯೊಂದಿಗೆ ಪ್ರೇಕ್ಷಕರನ್ನು ಹೊಸದೇ ಲೋಕಕ್ಕೆ ಕರೆದೊಯ್ದಿದ್ದಾರೆ. ಜೂನಿಯರ್ ಎನ್‌ಟಿಆರ್ ಅವರ ವೃತ್ತಿಜೀವನದಲ್ಲೇ ಇದು ಅತ್ಯಂತ ವೈಲೆಂಟ್‌ ಸಿನಿಮಾವಾಗಲಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸುವುದು ಖಚಿತ ಎನ್ನುತ್ತಿದ್ದಾರೆ ಸಿನಿಪ್ರೇಕ್ಷಕರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+