ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನಾ ಶಕ್ತಿ ಅನಾವರಣ, ಕರ್ನಾಟಕದ ಕಾಫಿ ಕಂಪು

|
Google Oneindia Kannada News

ನವದೆಹಲಿ, ಜನವರಿ, 27: ಗಣರಾಜ್ಯೋತ್ಸವ ಸಂಭ್ರಮವನ್ನು ಹತ್ತಿರದಿಂದ ನೋಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ದೆಹಲಿಯ ರಾಜ್ ಪಥ್ ನಲ್ಲಿ ನಡೆದ ಪಥಸಂಚಲ, ಸ್ತಬ್ಧ ಚಿತ್ರಗಳ ಸಂಚಾರ, ಯುದ್ಧ ವಿಮಾನ ಗಳ ಹಾರಾಟ, ಸೈನ್ಯದ ಶಕ್ತಿ ಪ್ರದರ್ಶನ, ಸೇನಾ ಶ್ವಾನಗಳ ಹೆಜ್ಜೆ ಎಲ್ಲವನ್ನು ಕಣ್ಣು ತುಂಬಿಕೊಳ್ಳಲು ನಿಮಗೆ ಮತ್ತೊಂದು ಅವಕಾಶ ಇಲ್ಲಿದೆ.

ಕರ್ನಾಟಕದ ಕೊಡಗಿನ ಕಾಫಿ ಪರಿಮಳ ಹಂಚಿದ ಸ್ತಬ್ಧಚಿತ್ರ. ವಿಶ್ವದ ಮುಂದೆ ಸೇನಾ ಶಕ್ತಿ ತೆರೆದಿಟ್ಟ ಬ್ರಹ್ಮೋಸ್‌ ಕ್ಷಿಪಣಿ, ಆಕಾಶ್‌ ಶಸ್ತ್ರಾಸ್ತ ವ್ಯವಸ್ಥೆ,ಟಿ-90 ಭೀಷ್ಮಾ ಟ್ಯಾಂಕ್‌, ರಾಕೆಟ್‌ ಉಡಾವಣಾ ವಾಹನಗಳನ್ನು ನೋಡಿಕೊಂಡು ಬರೋಣ.[ಗಣರಾಜ್ಯೋತ್ಸವ ಸಂಭ್ರಮದ ಚಿತ್ರಗಳು]

ದೆಹಲಿಯ ರಾಜ್ ಪಥ್ ನಲ್ಲಿ ಮಂಗಳವಾರ ನಡೆದ 67ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾರತದ ನೌಕಾಪಡೆ, ವಾಯುಪಡೆ ಹಾಗೂ ಭೂಸೇನಾ ಪಡೆಗಳ ಆಕರ್ಷಕ ಪರೇಡ್ ನೊಂದಿಗೆ ದೇಶದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವರ್ಣಿಸಲು ಅಸಾಧ್ಯ. ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ವಿಶೇಷ. ಹಾಗಾದರೆ ನಾವು ಸಹ ರಾಜ್ ಪಥ್ ನಲ್ಲಿ ಒಂದು ಸುತ್ತು ಹಾಕಿಕೊಂಡು ಬರೋಣ...(ಪಿಟಿಐ ಚಿತ್ರಗಳು)

ಕರ್ನಾಟಕದ ಕಾಫಿ ಪರಿಮಳ

ಕರ್ನಾಟಕದ ಕಾಫಿ ಪರಿಮಳ

ನಮ್ಮ ರಾಜ್ಯದಿಂದ ಕೊಡಗಿನ ಕಾಫಿ ಪರಿಮಳವನ್ನು ಸೂಚಿಸುವ ಸ್ತಬ್ಧ ಚಿತ್ರ ಗಮನ ಸೆಳೆಯಿತು. ಸ್ತಬ್ಧ ಚಿತ್ರ ಎದುರಿಗೆ ಬರುತ್ತಿದ್ದಂತೆ ಕೇಂದ್ರ ಸಚಿವ ಸದಾನಂದ ಗೌಡ ದಂಪತಿ ಎದ್ದು ನಿಂತು ಗೌರವ ಸೂಚಿಸಿದ್ದು ವಿಶೇಷ.

ಯುದ್ಧ ವಿಮಾನಗಳ ಚಿತ್ತಾರ

ಯುದ್ಧ ವಿಮಾನಗಳ ಚಿತ್ತಾರ

ಬ್ರಹ್ಮೋಸ್, ಆಕಾಶ ಕ್ಷಿಪಣಿ ಸೇರಿದಂತೆ ಭಾರತದ ವಾಯುಪಡೆ, ಜಲಪಡೆ, ಸೇನಾ ಪಡೆಗಳ ಶಕ್ತಿ ಪ್ರದರ್ಶನ, ಬಾನಿನಲ್ಲಿ ಯುದ್ಧ ವಿಮಾನಗಳಿಂದ ಚಿತ್ತಾರ, ಮೋಟಾರು ಬೈಕ್ ಸಾಹಸಗಳು ಗಮನ ಸೆಳೆದವು.

17 ರಾಜ್ಯಗಳ ಪ್ರತಿಬಿಂಬ

17 ರಾಜ್ಯಗಳ ಪ್ರತಿಬಿಂಬ

ಪೆರೇಡ್​ನಲ್ಲಿ 17 ರಾಜ್ಯಗಳು, 6 ಕೇಂದ್ರಾಡಳಿತ ಪ್ರದೇಶಗಳ ಸಾಧನೆಗಳನ್ನು ಬಿಂಬಿಸುವ ಸ್ತಬ್ಧ ಚಿತ್ರಗಳು ಗಮನ ಸೆಳೆದವು.ಇದೇ ಮೊದಲ ಬಾರಿಗೆ ನಿವೃತ್ತ ಯೋಧರ ಸ್ತಬ್ಧಚಿತ್ರ ಸಹ ಪಾಲ್ಗೊಂಡಿತ್ತು

ಶಿಸ್ತಿನ ಅನಾವರಣ

ಶಿಸ್ತಿನ ಅನಾವರಣ

ಲೆಫ್ಟಿನೆಂಟ್‌ ಜನರಲ್‌ ರಾಜನ್‌ ರವೀಂದ್ರನ್‌ ನೇತೃತ್ವದಲ್ಲಿ ಭಾರತೀಯ ಸೇನೆಯ ಹಲವು ತುಕಡಿಗಳು ಮತ್ತು ಪೊಲೀಸ್‌ ತಂಡಗಳು ಒಂದರ ಹಿಂದೆ ಒಂದರಂತೆ ಹಾದು ಹೋದವು.

ಸೇನಾ ಶಕ್ತಿ ಅನಾವರಣ

ಸೇನಾ ಶಕ್ತಿ ಅನಾವರಣ

ಭಾರತದ ಸೇನೆ ಎಷ್ಟು ಬಲಿಷ್ಠ ಎಂಬುದನ್ನು ಗಣರಾಜ್ಯೋತ್ಸವದ ಪರೇಡ್ ಸಾರಿ ಸಾರಿ ಹೇಳುತ್ತಿತ್ತು. ಸೇನೆಯ ಮೂರು ದಳದ ಯೋಧರು ಹೆಜ್ಜೆ ಹಾಕಿದರು

ಬೈಕ್ ಸಾಹಸ

ಬೈಕ್ ಸಾಹಸ

ಬೈಕ್ ನಲ್ಲಿ ಸಾಹಸ ಪ್ರದರ್ಶನ ಮಾಡಿದವರು ಚಪ್ಪಾಳೆ ಗಿಟ್ಟಿಸಿಕೊಂಡರು. ದೇಶದ ಮೂಲೆ ಮೂಲೆಗಳಿಂದ ಸಾವಿರಾರು ಜನ ಕಾರ್ಯಕ್ರಮ ವೀಕ್ಷಣೆ ಮಾಡಿದರು.

ಮೋದಿ ಹಾಜರಿ

ಮೋದಿ ಹಾಜರಿ

ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಫ್ರಾನ್ಸ್‌ ಅಧ್ಯಕ್ಷ ಫ್ರಾಂಕೋಯಿಸ್‌ ಹೊಲಾಂಡೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಎಂಥಾ ಸೌಂದರ್ಯ ನೋಡು

ಎಂಥಾ ಸೌಂದರ್ಯ ನೋಡು

ಗಣರಾಜ್ಯೋತ್ಸವ ಸಂಭ್ರಮದಲ್ಲಿ ಮುಳುಗೆದ್ದ ದೆಹಲಿಯ ರಾಜ್ ಪಥ್ ನ ಸೌಂದರ್ಯ ಕಂಡುಬಂದಿದ್ದು ಹೀಗೆ.

English summary
India Celebrates Its 67th Republic Day. Republic Day Honors The Date On Which The Constitution Of India Came Into Force On 26 January 1950 Replacing The Government Of India Act (1935) As The Governing Document Of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X