ನಾಡಿಗೆ ರಾಜನಾದರೂ ತಾಯಿಗೆ ಮಗ

Written By:
Subscribe to Oneindia Kannada

ನವದೆಹಲಿ, ಮೇ 16: "ಅಮ್ಮಾ ನಿನ್ನ ತೋಳಿನಲ್ಲಿ ಕಂದಾ ನಾನು", ಅಮ್ಮಾ ಎಂದರೆ ಏನೋ ಹರುಷವೋ.. ಈ ಹಾಡುಗಳನ್ನು ಹೇಗೆ ತಾನೆ ಮರೆಯಲು ಸಾಧ್ಯ? ನಾಡಿಗೆ ರಾಜನಾದರೂ ತಾಯಿಗೆ ಮಗ... ಗಾದೆಯನ್ನು ಸಹ ಕೇಳಿಯೇ ಇರುತ್ತೇವೆ. ಇವತ್ತೇನು ಅಮ್ಮಂದಿರ ದಿನಾಚರಣೆಯೇ ಎಂಬ ಅನುಮಾನ ಬಂತೆ?

ಹಾಗೇನು ಇಲ್ಲ, ದೇಶದ ಪ್ರಧಾನಿ ನರೇಂದ್ರ ಮೋದಿ ತಮ್ಮ ತಾಯಿಯವರೊಂದಿಗೆ ದಿನ ಕಳೆದಿದ್ದಾರೆ. ಗಾಲಿ ಕುರ್ಚಿಯ ಮೇಲೆ ಕುಳಿತ ತಾಯಿಯನ್ನು ಉದ್ಯಾನವೊಂದರಲ್ಲಿ ಸ್ವತಃ ಪ್ರಧಾನಿ ಸುತ್ತಾಡಿಸಿಕೊಂಡು ಬಂದಿದ್ದಾರೆ. [ಕೇಜ್ರಿಗೆ ತಿರುಗೇಟು, ಮೋದಿ ಸರ್ಟಿಫಿಕೇಟ್ ಬಹಿರಂಗ]

modi

ಇದರಲ್ಲೇನು ವಿಶೇಷ ಅಂದುಕೊಳ್ಳಬೇಡಿ? ಮೋದಿ ಪ್ರಧಾಣಿಯಾಗಿ ದೆಹಲಿಯಲ್ಲಿ ವಾಸ ಮಾಡಲು ಆರಂಭಿಸಿದ ಸರಿ ಸುಮಾರು ಎರಡು ವರ್ಷಗಳ ನಂತರ ತಾಯಿಹೀರಾಬೆನ್ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದಾರೆ. ಮಗ ಪ್ರಧಾನಿಯಾದರೂ ಆಟೋದಲ್ಲೇ ಓಡಾಡುವ ಹೀರಾ ಬೆನ್ ಅವರಿಗೆ ನಮ್ಮಿಂದಲೂ ಒಂದು ನಮನ.

ನವದೆಹಲಿಯ ರೇಸ್ ಕೋರ್ಸ್ ರಸ್ತೆಯ ಪ್ರಧಾನಿ ನಿವಾಸಕ್ಕೆ ಹೀರಾಬೆನ್ ಅವರು ಇದೇ ಮೊದಲ ಸಾರಿ ಭೇಟಿ ನೀಡಿದ್ದರು. ಮಗನೊಂದಿಗೆ ದಿನ ಕಳೆದ ತಾಯಿ ಮತ್ತೆ ಗುಜರಾತ್ ಗೆ ವಾಪಾಸಾಗಿದ್ದಾರೆ. ಅಮ್ಮನೊಂದಿಗೆ ಕಳೆದ ಕ್ಷಣಗಳನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದಿರುವ ಮೋದಿ ತಮ್ಮ ಅನಿಸಿಕೆಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಮೋದಿ ಮತ್ತು ಅವರ ತಾಯಿಯ ಸುತ್ತಾಟದ ಕ್ಷಣಗಳನ್ನು ನೀವು ನೋಡಿಕೊಂಡು ಬನ್ನಿ....

-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi had his mother visiting him at this official Race Course Road residence, for the first time since he started living there nearly two years back. After Heeraben returned to Gujarat, PM Modi posted photographs on his Twitter account in which he is seen showing her around his 7, Race Course Road residence. "My mother returns to Gujarat. Spent quality time with her after a long time & that too on her 1st visit to RCR," he tweeted along with the photographs.
Please Wait while comments are loading...