ಅಬ್ದುಲ್ ಕಲಾಂರ ಜೀವನ ಮತ್ತು ಸಾಧನೆ ಚಿತ್ರಗಳು

ಇಡೀ ಭಾರತ ದೇಶ ಅಗಲಿದ ಮಹಾನ್ ಚೇತನ ಅಬ್ದುಲ್ ಕಲಾಂ ಅವರಿಗೆ ನಮನ ಸಲ್ಲಿಸಿದೆ. ಭಾಷಣ ಮಾಡುತ್ತಲೇ ಕುಸಿದ ಕಲಾಂ ಇಂದು ನಮ್ಮ ನಡುವೆ ಇಲ್ಲ. ಆದರೆ ಅವರ ಸಾಧನೆಗಳು ಎಂದೆಮದಿಗೂ ಅಜರಾಮರ.

ಸಂಸತ್ ನ ಉಭಯ ಸದನಗಳು, ಪ್ರಧಾನಿ, ರಾಷ್ಟ್ರಪತಿ ಆದಿಯಾಗಿ ಎಲ್ಲರೂ ಕಲಾಂ ಅವರಿಗೆ ನಮನ ಸಲ್ಲಿಕೆ ಮಾಡಿದ್ದಾರೆ. ಕಲಾಂ ಜೀವನದ ಹೆಜ್ಜೆ ಗುರುತುಗಳನ್ನು ಅವಲೋಕಿಸಿದರೆ ಅವರ ಒಂದೊಂದೆ ಸಾಧನೆಗಳು ಅನಾವರಣಗೊಳ್ಳುತ್ತವೆ. ಭಾರತ ರತ್ನ ಕಲಾಂ ಜೀವನದ ಕೆಲ ಘಟನಾವಳಿಗಳನ್ನು ಚಿತ್ರಗಳೊಂದಿಗೆ ಮೆಲುಕು ಹಾಕುವ ಚಿಕ್ಕ ಪ್ರಯತ್ನ ಇಲ್ಲಿದೆ.[ಚಿತ್ರಗಳು : ಅಬ್ದುಲ್ ಕಲಾಂಗೆ ಅಂತಿಮ ನಮನ](ಪಿಟಿಐ, ಪಿಐಬಿ ಚಿತ್ರಗಳು)

ಪೋಕ್ರಾನ್ ಅಣು ಪರೀಕ್ಷೆ

ಪೋಕ್ರಾನ್ ಅಣು ಪರೀಕ್ಷೆ

ಎಲ್ಲ ದೇಶಗಳಿಗೆ ಸೆಡ್ಡು ಹೊಡೆದು ನಿಂತ ಭಾರತದ ಅಣು ಪರೀಕ್ಷೆ ಜಗತ್ತನ್ನೇ ನಿಬ್ಬೆರಗಾಗಿಸಿತ್ತು. ಅಬ್ದುಲ್ ಕಲಾಂ. ಅಟಲ್ ಬಿಹಾರಿ ವಾಜಪೇಯಿ ಅಣು ಪರೀಕ್ಷೆ ಜಾಗವನ್ನು ಪರಿಶೀಲಿಸಿದ ಅಪರೂಪದ ಫೋಟೋ.

ರಾಷ್ಟ್ರಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ

ರಾಷ್ಟ್ರಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ

ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಸರ್ವ ಪಕ್ಷದ ನಾಯಕರೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದ ಅಬ್ದುಲ್ ಕಲಾಂ. ಸೋನಿಯಾ ಗಾಂಧಿ, ವಾಜಪೇಯಿ, ಪ್ರಮೋದ್ ಮಹಾಜನ್ ಮುಂತಾದವರು ಚಿತ್ರದಲ್ಲಿದ್ದಾರೆ.

ಜಿ ಎಂ ಮೋದಿ ಪ್ರಶಸ್ತಿ

ಜಿ ಎಂ ಮೋದಿ ಪ್ರಶಸ್ತಿ

ಇದು 1996 ರ ಫೋಟೋ. ವೈಜ್ಞಾನಿಕ ಸಾಧನೆಗಾಗಿ ಜಿ ಎಂ ಮೋದಿ ಪ್ರಶಸ್ತಿ ಸ್ವೀಕಾರ ಮಾಡಿದ ನಂತರ ಮನೆಗೆ ತೆರಳುತ್ತಿದ್ದ ಅಬ್ದುಲ್ ಕಲಾಂ.

ಇಸ್ರೋದ ದಿನಗಳು

ಇಸ್ರೋದ ದಿನಗಳು

ಯುವಕ ಅಬ್ದುಲ್ ಕಲಾಂ ಭಾರತೀಯ ಬಾಹ್ಯಾಕಾಶ ಸಂಸ್ಥೆಯಲ್ಲಿ ಕಳೆದ ದಿನಗಳ ಚಿತ್ರ. ಇಲ್ಲಿ ಮಾಡಿದ ಸಂಶೋಧನೆಗಳೆ ಅವರನ್ನು ಕ್ಷಿಪಣಿ ಪಿತಾಮಹರನ್ನಾಗಿಸಿದ್ದು.

ಜಾರ್ಜ್ ಬುಷ್ ಗೆ ಸ್ವಾಗತ

ಜಾರ್ಜ್ ಬುಷ್ ಗೆ ಸ್ವಾಗತ

ಅಂದಿನ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಭಾರತಕ್ಕೆ ಭೇಟಿ ನೀಡಿದ್ದಾಗ ರಾಷ್ಟ್ರಪತಿ ಭವನದಲ್ಲಿ ಬರಮಾಡಿಕೊಂಡ ಅಬ್ದುಲ್ ಕಲಾಂ.

ರಾಷ್ಟ್ರಪತಿ ಭವನ ಪ್ರಯಾಣ

ರಾಷ್ಟ್ರಪತಿ ಭವನ ಪ್ರಯಾಣ

ತಮ್ಮ ಅವಧಿ ಮುಗಿದ ನಂತರ ನೂತರ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ರಾಷ್ಟ್ರಪತಿ ಭವನಕ್ಕೆ ಸಾಂಪ್ರದಾಯಿಕವಾಗಿ ಕರೆದೊಯ್ದ ಅಬ್ದುಲ್ ಕಲಾಂ.

ದೇಶಕ್ಕೆ ಸಿಂಧುಸುರಕ್ಷಾ

ದೇಶಕ್ಕೆ ಸಿಂಧುಸುರಕ್ಷಾ

ಭಾರತೀಯ ನೌಕಾದಳಕ್ಕೆ ಹೊಸ ಬಲ ತುಂಬಿದ ಸಿಂಧುಸುರಕ್ಷಾದ ಪರೀಕ್ಷೆ ವೇಳೆ ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ.

ಬೌದ್ಧ ಗುರು ದಲೈ ಲಾಮಾ ಅವರೊಂದಿಗೆ

ಬೌದ್ಧ ಗುರು ದಲೈ ಲಾಮಾ ಅವರೊಂದಿಗೆ

ಕಾರ್ಯಕ್ರಮವೊಂದರಲ್ಲಿ ಬೌದ್ಧ ಗುರು ದಲೈ ಲಾಮಾ ಅವರೊಂದಿಗೆ ಗಹನವಾದ ಚರ್ಚೆಯಲ್ಲಿ ತೊಡಗಿದ್ದ ಅಬ್ದುಲ್ ಕಲಾಂ.

ನಿಮ್ಮದೇ ಚಿತ್ರ ಕಲಾಂಜೀ

ನಿಮ್ಮದೇ ಚಿತ್ರ ಕಲಾಂಜೀ

2012 ರಲ್ಲಿ ಬನಾರಸ್ ಹಿಂದು ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ಕಲಾಂ ಅವರ ಭಾವಚಿತ್ರ ತೆಗೆದುಕೊಂಡ ವಿದ್ಯಾರ್ಥಿನಿ.

ಪೇಟ ತೊಟ್ಟ ಅಬ್ದುಲ್ ಕಲಾಂ

ಪೇಟ ತೊಟ್ಟ ಅಬ್ದುಲ್ ಕಲಾಂ

ಮುಂಬೈನ ಎಸ್ ಐಇಎಸ್ ಕಾಲೇಜಿನ ಬೆಳ್ಳಿ ಮಹೋತ್ಸವದಲ್ಲಿ ಸಾಂಪ್ರದಾಯಿಕ ಪೇಟ ತೊಟ್ಟು ಕಂಗೊಳಿಸಿದ ಕಲಾಂ.

ವಜ್ರದ ಕೈಗಾರಿಕೆಗೆ ಭೇಟಿ

ವಜ್ರದ ಕೈಗಾರಿಕೆಗೆ ಭೇಟಿ

ಸುರತ್ ನ ವಜ್ರದ ಕೈಗಾರಿಕಾ ಘಟಕಕ್ಕೆ ಭೇಟಿ ನೀಡಿದ್ದ ಕಲಾಂ ತಯಾರಿಕೆ ಮತ್ತು ಹೊಳಪು ನೀಡುವ ವಿಧಾನದ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು.

ಸ್ಕಾಟ್ ಲೆಂಡ್ ವಿವಿಯಿಂದ ಗೌರವ

ಸ್ಕಾಟ್ ಲೆಂಡ್ ವಿವಿಯಿಂದ ಗೌರವ

ಸ್ಕಾಟ್ ಲೆಂಡ್ ನ ಎಡಿನ್ ಬರ್ಗ್‌ ವಿವಿಯಿಂದ 2014ರಲ್ಲಿ ಗೌರವ ಪದವಿ ಸ್ವೀಕರಿಸಿದ ಕ್ಷಿಪಣಿ ಪಿತಾಮಹ.

ಮಕ್ಕಳೊಂದಿಗೆ ಮಗುವಾದ ಬಗೆ

ಮಕ್ಕಳೊಂದಿಗೆ ಮಗುವಾದ ಬಗೆ

ಮೇಧಾವಿ ಹುಡುಗ ಕೌಟಿಲ್ಯ ಪಂಡಿತ್ ನೊಂದಿಗೆ ಎಪಿಜೆ ಕಲಾಂ. ತಮ್ಮ ನಿವಾಸಕ್ಕೆ ಕೌಟಿಲ್ಯ ಭೇಟಿ ನೀಡಿದ ಸಂದರ್ಭ ಸಿಕ್ಕ ಅಪರೂಪದ ಚಿತ್ರ.

ಒಬಾಮಾಗೆ ಸ್ವಾಗತ

ಒಬಾಮಾಗೆ ಸ್ವಾಗತ

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಕೈ ಕುಲಕಿ ಸ್ವಾಗತ ಕೋರಿದ ಅಬ್ದುಲ್ ಕಲಾಂ.

ಸೈನಿಕರೊಂದಿಗೆ ಕಲಾಂ

ಸೈನಿಕರೊಂದಿಗೆ ಕಲಾಂ

2003ರಲ್ಲಿ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಕಲಾಂ ಸೈನಿಕರೊಂದಿಗೆ ಬೆರೆತು ಅವರ ಸಮಸ್ಯೆಗಳನ್ನು ಆಲಿಸಿ ಹಿಂದಿರುಗಿದ್ದರು.

ಮಂಡೇಲಾ ಜತೆ ಕಲಾಂ

ಮಂಡೇಲಾ ಜತೆ ಕಲಾಂ

ದಕ್ಷಿಣ ಆಫ್ರಿಕಾದ ಪಿತಾಮಹ ನೆಲ್ಸನ್ ಮಂಡೇಲಾ ಅರೊಂದಿಗೆ 2004 ರಲ್ಲಿ ಚರ್ಚೆ ಮಾಡುತ್ತಿದ್ದಾಗ ತೆಗೆದ ಫೋಟೋ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+