ರಂಜಾನ್ ಆಲಿಂಗನ, ಹಿಲರಿಗೆ ಒಬಾಮಾ ಚುಂಬನ

Written By:
Subscribe to Oneindia Kannada

ನವದೆಹಲಿ, ಜುಲೈ, 07: ದೇಶದೆಲ್ಲೆಡೆ ರಂಜಾನ್ ಹಬ್ಬದ ಸಂಭ್ರಮ. ದೇಶದ ಗಡಿಯಲ್ಲಿ ಪರಸ್ಪರ ಸಿಹಿ ಹಂಚಿ ಹಬ್ಬದ ಸಂಭ್ರಮ ಹಂಚಿಕೊಂಡ ಭಾರತ ಮತ್ತು ಪಾಕಿಸ್ತಾನದ ಯೋಧರು.

ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಹಾಗೂ ಕಿಡ್ನ್ಯಾಪ್ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು ಚಿಕ್ಕಮಗಳೂರು ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಚಿಕ್ಕಮಗಳೂರಿಗೆ ಸಿಬಿಐ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ.[ವಿಶ್ವದೆಲ್ಲೆಡೆ ಈದ್ ಉಲ್ ಫಿತ್ರ್ ವಿಶೇಷ ಪ್ರಾರ್ಥನೆ]

ಬಾಬು ಜಗಜೀವನ್ ರಾಮ್ ಪುಣ್ಯ ತಿಥಿ ನಿಮಿತ್ತ ನಮನ ಬೆಂಗಳೂರಿನಲ್ಲಿ ಜಗಜೀವನ್ ರಾಮ್ ಭಾವಚಿತ್ರಕ್ಕೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ನಮನ ಸಲ್ಲಿಕೆ ಮಾಡಿದರು. ಅಸ್ಸಾಂನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು ಸಾವಿರಾರು ಜನ ವಸತಿ ಕಳೆದುಕೊಂಡಿದ್ದಾರೆ. ಹೊಸ ಆಶ್ರಯ ತಾಣ ಹುಡುಕಿ ಹೊರಟ ನಾಗರಿಕರ ನೋವಿಗೆ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ( ಪಿಟಿಐ ಚಿತ್ರಗಳು)

ಅಮೆರಿಕ ಅಧ್ಯಕ್ಷರ ಮುತ್ತಿನ ಮತ್ತು

ಅಮೆರಿಕ ಅಧ್ಯಕ್ಷರ ಮುತ್ತಿನ ಮತ್ತು

ಅಮೆರಿಕದಲ್ಲಿ ಅಧ್ಯಕ್ಷ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಚುನಾವಣಾ ಪ್ರಚಾರದ ನಂತರ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಮತ್ತು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಗುಡ್ ಬೈ ಹೇಳಿದ್ದು ಹೀಗೆ..

ಹುಬ್ಬಳ್ಳಿಯಲ್ಲಿ ರಂಜಾನ್ ಸಂಭ್ರಮ

ಹುಬ್ಬಳ್ಳಿಯಲ್ಲಿ ರಂಜಾನ್ ಸಂಭ್ರಮ

ಗುರುವಾರ ಬೆಳಗ್ಗೆ ಹುಬ್ಬಳ್ಳಿಯ ಈದ್ಗಾ ಮೈದಾನ ಸೇರಿದಂತೆ ಹಲವಾರು ಕಡೆಗಳಲ್ಲಿ ರಂಜಾನ್ ಪ್ರಾರ್ಥನೆ ಸಲ್ಲಿಸಿದ ಮುಸಲ್ಮಾನರು ಸಿಹಿ ಹಂಚಿ ಪರಸ್ಪರ ಶುಭಾಶಯ ಹಂಚಿಕೊಂಡರು.

ಹಬ್ಬದ ಶುಭಾಶಯ

ಹಬ್ಬದ ಶುಭಾಶಯ

ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಪರಸ್ಪರ ಸಿಹಿ ಹಂಚಿ ಹಬ್ಬದ ರಂಜಾನ್ ಸಂಭ್ರಮ ಹಂಚಿಕೊಂಡ ಭಾರತ ಮತ್ತು ಪಾಕಿಸ್ತಾನದ ಯೋಧರು.

ತನಿಖೆ ಚುರುಕು

ತನಿಖೆ ಚುರುಕು

ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಹಾಗೂ ಕಿಡ್ನ್ಯಾಪ್ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ತೆರಳಿ ಮಾಹಿತಿ ಕಲೆಹಾಕಿದರು.

ಮುಖ್ಯಮಂತ್ರಿ ನಮನ

ಮುಖ್ಯಮಂತ್ರಿ ನಮನ

ದಿವಂಗತ ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಮ್ ಪುಣ್ಯ ತಿಥಿ ನಿಮಿತ್ತ ಬೆಂಗಳೂರಿನಲ್ಲಿ ಜಗಜೀವನ್ ರಾಮ್ ಭಾವಚಿತ್ರಕ್ಕೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ನಮನ ಸಲ್ಲಿಕೆ ಮಾಡಿದರು.

ಪುನೀತರಾದ ಭಕ್ತರು

ಪುನೀತರಾದ ಭಕ್ತರು

ಪುರಿ ಜಗನ್ನಾಥ ದೇವಾಲಯದ ರಥಯಾತ್ರೆ ಸಂದರ್ಭ ಕಂಡು ಬಂದ ಭಕ್ತ ಸಮೂಹ.

ಮಳೆ ಆವಾಂತಾರ

ಮಳೆ ಆವಾಂತಾರ

ಅಸ್ಸಾಂನಲ್ಲಿ ಮಳೆ ಆವಾಂತರ ಸೃಷ್ಟಿ ಮಾಡಿದ್ದು ಸುರಕ್ಷಿತ ತಾಣದತ್ತ ಹೊರಟ ಗ್ರಾಮೀಣ ಜನರ ಬದುಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
News In Pics: Karnataka Chief Minister Siddaramaiah along with other ministers pay homage to former Deputy Prime Minister Babu Jagjivan Ram on the occasion of his 30th death anniversary in Bengaluru. Villagers shift to safe places from a flood-affected village in Morigaon on Wednesday, Assam.
Please Wait while comments are loading...