ಕಳೆದ 2 ವರ್ಷಗಳಿಂದ 2 ಸಾವಿರ ಮುಖಬೆಲೆಯ ನೋಟು ಮುದ್ರಿಸಿಲ್ಲ: ಕೇಂದ್ರ ಸರ್ಕಾರ

ನವದೆಹಲಿ, ಮಾರ್ಚ್ 15: ಕಳೆದ ಎರಡು ವರ್ಷಗಳಲ್ಲಿ 2 ಸಾವಿರ ಮುಖಬೆಲೆಯ ನೋಟು ಮುದ್ರಣವಾಗಿಲ್ಲ ಎಂದು ಕೇಂದ್ರ ಸರ್ಕಾರ ಇಂದು ಲೋಕಸಭೆಗೆ ತಿಳಿಸಿದೆ.

ಲೋಕಸಭೆಯಲ್ಲಿಂದು ಈ ಕುರಿತು ಲಿಖಿತ ಉತ್ತರ ನೀಡಿದ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್, ಸಾರ್ವಜನಿಕರ ವ್ಯವಹಾರಿಕ ಬೇಡಿಕೆ ಅನುಕೂಲತೆಗಾಗಿ ಆರ್ ಬಿಐನೊಂದಿಗೆ ಸಮಾಲೋಚಿಸಿ ಕಳೆದ ಎರಡು ವರ್ಷಗಳಿಂದ ಈ ನಿರ್ಧಿಷ್ಟ ನೋಟುಗಳ ಮುದ್ರಣ ಮಾಡದಿರುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ತಿಳಿಸಿದರು. 2019-20 ಮತ್ತು 2020-21ರ ವರ್ಷದಲ್ಲಿ 2 ಸಾವಿರ ರೂ. ನೋಟ್ ಗಳನ್ನು ಮುದ್ರಣ ಮಾಡಿಲ್ಲ ಎಂದು ಅವರು ಮಾಹಿತಿ ನೀಡಿದರು.

ನಕಲಿ ನೋಟುಗಳು ಮತ್ತು ಕಪ್ಪು ಹಣವನ್ನು ತಡೆಗಟ್ಟುವ ನಿಟ್ಟಿನಲ್ಲಿ 500 ರೂ. ಮತ್ತು 1 ಸಾವಿರ ರೂ. ನೋಟುಗಳನ್ನು ಸರ್ಕಾರ ಅಮಾನ್ಯಗೊಳಿಸಿದ ನಂತರ ನವೆಂಬರ್ 2016ರಂದು 2 ಸಾವಿರ ಮುಖಬೆಲೆಯ ನೋಟುಗಳನ್ನು ಪರಿಚಯಿಸಿತ್ತು.

In Last 2 Years Rs 2,000 Notes Not Printed, Govt Tells Lok Sabha

2016-17ರ ಆರ್ಥಿಕ ವರ್ಷದಲ್ಲಿ 3,542,991 ಮಿಲಿಯನ್ 2 ಸಾವಿರ ರೂ. ನೋಟುಗಳನ್ನು ಮುದ್ರಣ ಮಾಡಲಾಗಿತ್ತು ಎಂದು ಆರ್ ಬಿಐ 2019ರಲ್ಲಿ ಹೇಳಿಕೆ ನೀಡಿತ್ತು. ಆದಾಗ್ಯೂ, 2017-18ರಲ್ಲಿ ಕೇವಲ 111.507 ಮಿಲಿಯನ್ ನೋಟುಗಳನ್ನು ಮಾತ್ರ ಮುದ್ರಣ ಮಾಡಲಾಗಿತ್ತು.

2018-19ರಲ್ಲಿ ಇವುಗಳನ್ನು 46,690 ಮಿಲಿಯನ್ ನೋಟುಗಳಿಗೆ ಇಳಿಕೆ ಮಾಡಲಾಯಿತು. ಕಪ್ಪು ಹಣ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+