ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಕಿಂಗ್: ಅಕ್ಟೋಬರ್ ತಿಂಗಳಿನಲ್ಲೇ ಗೂಗಲ್‌ಗೆ 2273 ಕೋಟಿ ದಂಡ!

|
Google Oneindia Kannada News

ನವದೆಹಲಿ, ಅಕ್ಟೋಬರ್ 25: ಆಲ್ಫಾಬೆಟ್ ಇಂಕ್‌ನ ಗೂಗಲ್‌ಗೆ ಒಂದೇ ತಿಂಗಳಿನಲ್ಲಿ ಎರಡನೇ ಬಾರಿ ದಂಡವನ್ನು ವಿಧಿಸಲಾಗಿದೆ. ಮಂಗಳವಾರ 113.04 ಮಿಲಿಯನ್ ಡಾಲರ್ ಅಥವಾ 936 ಕೋಟಿ ದಂಡವನ್ನು ವಿಧಿಸಿದೆ. ಭಾರತವು ಈ ತಿಂಗಳಿನಲ್ಲೇ ಮತ್ತೊಂದು ಆಂಟಿಟ್ರಸ್ಟ್ ತನಿಖೆಯನ್ನು ಮುಕ್ತಾಯಗೊಳಿಸಿದೆ.

ತನ್ನ ಪಾವತಿಗಳ ಅಪ್ಲಿಕೇಶನ್ ಮತ್ತು ಅಪ್ಲಿಕೇಶನ್‌ನಲ್ಲಿ ಪಾವತಿ ವ್ಯವಸ್ಥೆ ಉತ್ತೇಜಿಸಲು ಪ್ಲೇ ಸ್ಟೋರ್ ನಲ್ಲಿ ಅದರ ಮಾರುಕಟ್ಟೆ ಸ್ಥಾನವನ್ನು ದುರುಪಯೋಗಪಡಿಸಿಕೊಂಡ ಗೂಗಲ್‌ ತಪ್ಪಿತಸ್ಥರೆಂದು ತನಿಖೆಯಲ್ಲಿ ಕಂಡು ಬಂದಿದೆ. ಈ ರೀತಿಯ ಅನ್ಯಾಯದ ವ್ಯಾಪಾರ ಅಭ್ಯಾಸವನ್ನು ತ್ಯಜಿಸುವಂತೆ ಭಾರತವು ಕಂಪನಿಗೆ ನಿರ್ದೇಶನ ನೀಡಿದೆ.

ಭಾರತದಲ್ಲಿ ಗೂಗಲ್‌ಗೆ 1,337 ಕೋಟಿ ದಂಡ ವಿಧಿಸಿದ್ದು ಏಕೆ?ಭಾರತದಲ್ಲಿ ಗೂಗಲ್‌ಗೆ 1,337 ಕೋಟಿ ದಂಡ ವಿಧಿಸಿದ್ದು ಏಕೆ?

"ಸ್ಪರ್ಧಾತ್ಮಕ-ವಿರೋಧಿ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದನ್ನು ನಿಲ್ಲಿಸಲು ಮತ್ತು ತ್ಯಜಿಸಲು ಆಯೋಗವು ಗೂಗಲ್‌ಗೆ ಈ ಮೂಲಕ ನಿರ್ದೇಶಿಸುತ್ತದೆ," ಎಂದು ಭಾರತೀಯ ಸ್ಪರ್ಧಾತ್ಮಕ ಆಯೋಗ (CCI) ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ. ಅಪ್ಲಿಕೇಶನ್‌ಗಳನ್ನು ಖರೀದಿಸಲು ಯಾವುದೇ ಮೂರನೇ ವ್ಯಕ್ತಿಯ ಬಿಲ್ಲಿಂಗ್ ಅಥವಾ ಪಾವತಿ ಪ್ರಕ್ರಿಯೆ ಸೇವೆಗಳನ್ನು ಬಳಸುವುದರಿಂದ ಅಪ್ಲಿಕೇಶನ್ ಡೆವಲಪರ್‌ಗಳನ್ನು ಗೂಗಲ್ ನಿರ್ಬಂಧಿಸಬಾರದು ಎಂದು ಅದು ಹೇಳಿದೆ.

ಅಕ್ಟೋಬರ್ ತಿಂಗಳಿನಲ್ಲೇ ಎರಡನೇ ಬಾರಿ ದಂಡ

ಅಕ್ಟೋಬರ್ ತಿಂಗಳಿನಲ್ಲೇ ಎರಡನೇ ಬಾರಿ ದಂಡ

ಭಾರತವು ಅಕ್ಟೋಬರ್ ತಿಂಗಳಿನಲ್ಲಿ ಗೂಗಲ್‌ಗೆ ಎರಡನೇ ಬಾರಿ ಆಂಟಿ-ಟ್ರಸ್ಟ್ ದಂಡವನ್ನು ವಿಧಿಸಲಾಗಿದೆ. ಕೆಲವು ದಿನಗಳ ಹಿಂದೆ, ಆಂಡ್ರಾಯ್ಡ್‌ಗೆ ಸಂಬಂಧಿಸಿದ ಸ್ಪರ್ಧಾತ್ಮಕ ಅಭ್ಯಾಸಗಳಿಗಾಗಿ ಗೂಗಲ್‌ಗೆ ಗುರುವಾರ ಭಾರತೀಯ ಸ್ಪರ್ಧಾತ್ಮಕ ಆಯೋಗವು 1,337.76 ಕೋಟಿ ರೂಪಾಯಿ ದಂಡವನ್ನು ವಿಧಿಸಿತ್ತು. ಟೆಕ್ ಬೆಹೆಮೊಥ್ ಸ್ಥಳೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಕಮಾಂಡಿಂಗ್ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ತನಿಖೆಯ ನಂತರ ಗೂಗಲ್‌ಗೆ ದಂಡ ವಿಧಿಸಲಾಗಿತ್ತು.

ತನ್ನ ಪ್ರಬಲ ಸ್ಥಾನ ದುರುಪಯೋಗದ ಬಗ್ಗೆ ಉಲ್ಲೇಖ

ತನ್ನ ಪ್ರಬಲ ಸ್ಥಾನ ದುರುಪಯೋಗದ ಬಗ್ಗೆ ಉಲ್ಲೇಖ

ಕ್ಯಾಲಿಫೋರ್ನಿಯಾ ಮೂಲದ ಕಂಪನಿಯ ಆಂಡ್ರಾಯ್ಡ್ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಭಾರತದಲ್ಲಿ ಪ್ರಬಲ ಪ್ಲೇಯರ್ ಆಗಿದೆ. ಇದು ದೇಶದ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಶೇ.95 ಪ್ರತಿಶತದಷ್ಟು ರನ್ ಆಗುತ್ತಿದೆ ಎಂದು ಸಂಶೋಧನಾ ಸಂಸ್ಥೆ ಹೇಳಿದೆ. "ಗೂಗಲ್ ಆನ್‌ಲೈನ್ ಹುಡುಕಾಟ ಮಾರುಕಟ್ಟೆಯಲ್ಲಿ ತನ್ನ ಪ್ರಬಲ ಸ್ಥಾನವನ್ನು ಶಾಶ್ವತಗೊಳಿಸಿದೆ, ಇದರ ಪರಿಣಾಮವಾಗಿ ಕಾಯಿದೆಯ ಸೆಕ್ಷನ್ 4(2)(c) ಗೆ ವಿರುದ್ಧವಾಗಿ ಸ್ಪರ್ಧಾತ್ಮಕ ಹುಡುಕಾಟ ಅಪ್ಲಿಕೇಶನ್‌ಗಳಿಗೆ ಮಾರುಕಟ್ಟೆ ಪ್ರವೇಶವನ್ನು ನಿರಾಕರಿಸಲಾಗಿದೆ. ಕಾಯಿದೆಯ ಸೆಕ್ಷನ್ 4(2)(ಇ) ಅನ್ನು ಉಲ್ಲಂಘಿಸಿ ಆನ್‌ಲೈನ್ ಸಾಮಾನ್ಯ ಹುಡುಕಾಟದಲ್ಲಿ ತನ್ನ ಪ್ರಬಲ ಸ್ಥಾನವನ್ನು ರಕ್ಷಿಸಲು ಗೂಗಲ್ ಪ್ಲೇ ಸ್ಟೋರ್ ನಲ್ಲಿ ತನ್ನ ಪ್ರಬಲ ಸ್ಥಾನವನ್ನು ಹತೋಟಿಗೆ ತಂದಿದೆ."

ಗೂಗಲ್ ಕ್ರೋಮ್ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರಿ ನೊಂದಿಗೆ ಜೋಡಿಸುವ ಮೂಲಕ ಗೂಗಲ್ ತನ್ನ ಪ್ರಬಲ ಸ್ಥಾನವನ್ನು "ದುರುಪಯೋಗಪಡಿಸಿಕೊಂಡಿದೆ" ಎಂದು ತನಿಖೆಯು ಉಲ್ಲೇಖಿಸಿದೆ, ಇದು ಕಾಯಿದೆಯ ಸೆಕ್ಷನ್ 4(2)(e) ನ ನಿಬಂಧನೆಗಳ ಉಲ್ಲಂಘನೆಯಾಗಿದೆ.

ಗೂಗಲ್ ಬಗ್ಗೆ ಸಿಸಿಐ ಹೇಳಿಕೆ

ಗೂಗಲ್ ಬಗ್ಗೆ ಸಿಸಿಐ ಹೇಳಿಕೆ

"ಅತ್ಯಂತ ಪ್ರಮುಖವಾದ ಸರ್ಚ್ ಎಂಟ್ರಿ ಪಾಯಿಂಟ್‌ಗಳಾದ ಸರ್ಚ್ ಅಪ್ಲಿಕೇಶನ್, ವಿಜೆಟ್ ಮತ್ತು ಕ್ರೋಮ್ ಬ್ರೌಸರ್ ಅನ್ನು ಆಂಡ್ರಾಯ್ಡ್ ಸಾಧನಗಳಲ್ಲಿ ಮೊದಲೇ ಸ್ಥಾಪಿಸಲಾಗಿದೆ ಎಂದು ಮೊಬೈಲ್ ಅಪ್ಲಿಕೇಶನ್ ವಿತರಣಾ ಒಪ್ಪಂದದಲ್ಲಿ ಭರವಸೆ ನೀಡಿದೆ. ಇದು ತನ್ನ ಪ್ರತಿಸ್ಪರ್ಧಿಗಳಿಗಿಂತ ಗೂಗಲ್ ಹುಡುಕಾಟ ಸೇವೆಗಳಿಗೆ ಗಮನಾರ್ಹ ಸ್ಪರ್ಧಾತ್ಮಕ ಆದ್ಯತೆಯನ್ನು ನೀಡುತ್ತದೆ," ಎಂದು ಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

ಗೂಗಲ್ ಲೆಕ್ಕಾಚಾರದ ಅಸಲಿ ವಿಚಾರವೇನು?

ಗೂಗಲ್ ಲೆಕ್ಕಾಚಾರದ ಅಸಲಿ ವಿಚಾರವೇನು?

"ಗೂಗಲ್ ವ್ಯವಹಾರವು ಅದರ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಕೆದಾರರನ್ನು ಹೆಚ್ಚಿಸುವ ಅಂತಿಮ ಉದ್ದೇಶವನ್ನು ಹೊಂದಿರುವುದನ್ನು ಪತ್ತೆ ಮಾಡಲಾಗಿದೆ. ಇದರಿಂದಾಗಿ ಅದರ ಆದಾಯ ಗಳಿಸುವ ಸೇವೆಯೊಂದಿಗೆ ಸಂವಹನ ನಡೆಸಿದೆ, ಅಂದರೆ ಗೂಗಲ್ ಮೂಲಕ ಆನ್‌ಲೈನ್ ಹುಡುಕಾಟವು ಜಾಹೀರಾತು ಸೇವೆಗಳ ಮಾರಾಟದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ," ಎಂದು CCI ಹೇಳಿದೆ.

English summary
n India Google fined 936 crore rupees for second antitrust penalty in October month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X