ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲು ಪ್ರಯಾಣಿಕರಿಗೆ ಮಹತ್ವದ ಮಾಹಿತಿ: ಕೆಲಕಡೆ ಸಂಚಾರ ರದ್ದು

|
Google Oneindia Kannada News

ನವದೆಹಲಿ, ನವೆಂಬರ್ 29: ವಿವಿಧ ಕಾರ್ಯಗಳಿಂದಾಗಿ ಕೆಲ ರೈಲು ಸಂಚಾರ ರದ್ದು ಮಾಡಲಾಗಿದ್ದು ಇನ್ನೂ ಕೆಲ ರೈಲುಗಳ ಸಮಯವನ್ನು ಮುಂದೂಡಲಾಗಿದೆ ಎಂದು ನೈರುತ್ಯ ರೈಲ್ವೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.

ಕುಪ್ಪಂ ರೈಲ್ವೆ ನಿಲ್ದಾಣದ ಯಾರ್ಡ್‌ನಲ್ಲಿ ಅಸ್ತಿತ್ವದಲ್ಲಿರುವ ಫುಟ್ ಓವರ್ ಬ್ರಿಡ್ಜ್ ಬದಲಾಗಿ ಹೊಸ ಫುಟ್ ಓವರ್ ಬ್ರಿಡ್ಜ್‌ನ ಅಳವಡಿಕೆಯ ಕಾರ್ಯ ಮಾಡಲಾಗುತ್ತಿದೆ. ಹೀಗಾಗಿ ಕೆಲ ರೈಲು ಸಂಚಾರವನ್ನು ರದ್ದುಗೊಳಿಸಲಾಗುತ್ತದೆ ಎಂದು ನೈರುತ್ಯ ರೈಲ್ವೆಯಿಂದ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಕೆಲಸದ ವೇಳೆ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ಇರುವ ನಿಮಿತ್ತ ಈ ಕೆಳಗಿನ ರೈಲುಗಳ ಸೇವೆಯನ್ನು ಭಾಗಶಃ ರದ್ದು ಹಾಗೂ ನಿಯಂತ್ರಣ ಮಾಡಲಾಗುತ್ತದೆ. ಈ ರೈಲುಗಳ ವಿವರ ಹೀಗಿದೆ.

ರೈಲು ಸೇವೆಯ ಭಾಗಶಃ ರದ್ದು (PARTIAL CANCELLATION)

1. ದಿನಾಂಕ 30.11.2021, 01.12.2021 ಮತ್ತು 02.12.2021 ರಂದು ಸಂಚರಿಸಲಿರುವ ರೈಲು ಸಂಖ್ಯೆ 06551 ಕೆಎಸ್ಆರ್ ಬೆಂಗಳೂರು- ಜೋಲಾರಪೇಟೆ ವಿಶೇಷ ಮೆಮು ಸೇವೆಯು (KSR Bengaluru - Jolarpettai MEMU Special) ಬಂಗಾರಪೇಟೆ ಹಾಗೂ ಜೋಲಾರಪೇಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗುವುದು.

2. ದಿನಾಂಕ 30.11.2021, 01.12.2021 ಮತ್ತು 02.12.2021 ರಂದು ಸಂಚರಿಸಲಿರುವ ರೈಲು ಸಂಖ್ಯೆ 06552 ಜೋಲಾರಪೇಟೆ - ಕೆಎಸ್ಆರ್ ಬೆಂಗಳೂರು ವಿಶೇಷ ಮೆಮು ಸೇವೆಯನ್ನು (Jolarpettai - KSR Bengaluru MEMU Special) ಜೋಲಾರಪೇಟೆ ಹಾಗೂ ಬಂಗಾರಪೇಟೆಗಳ ನಡುವೆ ಭಾಗಶಃ ರದ್ದಾಗುವುದು ಮತ್ತು ರೈಲು ಈ ದಿನಾಂಕಗಳಂದು ಬಂಗಾರಪೇಟೆಯಿಂದ ತನ್ನ ನಿಗದಿತ ನಿರ್ಗಮನ ಸಮಯಕ್ಕೆ ಕೆಎಸ್ಆರ್ ಬೆಂಗಳೂರು ನಿಲ್ದಾಣದೆಡೆಗೆ ಹೊರಡುವುದು.

Important information for train passengers: Cancel some train traffic

ಈ ರೈಲುಗಳ ಸಮಯದಲ್ಲಿ ಬದಲಾವಣೆ (REGULATION OF TRAINS)

1. ರೈಲು ಸಂಖ್ಯೆ 22497 ಶ್ರೀಗಂಗಾನಗರ - ತಿರುಚಿನಾಪಳ್ಳಿ ಹಮ್ ಸಫರ್ ಎಕ್ಸ್ ಪ್ರೆಸ್ ರೈಲು ಸೇವೆಯನ್ನು (Shri Ganganagar - Tiruchchirappalli Humsafar Express) ದಿನಾಂಕ 29. 11. 2021 ರಂದು ಟ್ಯಾಕಲ್ ನಿಲ್ದಾಣದಲ್ಲಿ 30 ನಿಮಿಷಗಳ ಅವಧಿಗೆ ನಿಯಂತ್ರಿಸಲಾಗುವುದು.

2. ರೈಲು ಸಂಖ್ಯೆ 12577 ದರ್ಭಾಂಗ - ಮೈಸೂರು ಭಾಗಮತಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲನ್ನು (Darbhanga - Mysuru Bagmati Superfast Express) ದಿನಾಂಕ 30.11. 2021 ರಂದು ಮಲ್ಲನೂರು ನಿಲ್ದಾಣದಲ್ಲಿ 80 ನಿಮಿಷಗಳ ಅವಧಿಗೆ ನಿಯಂತ್ರಿಸಲಾಗುವುದು.

3. ರೈಲು ಸಂಖ್ಯೆ 22626 ಕೆಎಸ್ಆರ್ ಬೆಂಗಳೂರು - ಎಂಜಿಆರ್ ಚೆನ್ನೈ ಸೆಂಟ್ರಲ್ ಡಬಲ್ ಡೆಕ್ಕರ್ ಎಕ್ಸ್ ಪ್ರೆಸ್ ರೈಲನ್ನು (KSR Bengaluru - MGR Chennai Central Double Decker Express ) ದಿನಾಂಕ 30.11. 2021 ಮತ್ತು 02.12.2021 ರಂದು ಬಿಸನಟ್ಟಮ್ ನಿಲ್ದಾಣದಲ್ಲಿ 30 ನಿಮಿಷಗಳ ಅವಧಿಗೆ ಹಾಗೂ ದಿನಾಂಕ 01.12.2021 ರಂದು ವರದಪುರ ನಿಲ್ದಾಣದಲ್ಲಿ 40 ನಿಮಿಷಗಳ ಅವಧಿಗೆ ನಿಯಂತ್ರಿಸಲಾಗುವುದು.

4. ರೈಲು ಸಂಖ್ಯೆ 12640 ಕೆಎಸ್ಆರ್ ಬೆಂಗಳೂರು - ಎಂಜಿಆರ್ ಚೆನ್ನೈ ಸೆಂಟ್ರಲ್ ಬೃಂದಾವನ್ ಎಕ್ಸ್ ಪ್ರೆಸ್ ರೈಲನ್ನು ( KSR Bengaluru - MGR Chennai Central Brindavan Express ) ದಿನಾಂಕ 30.11.2021, 01.12.2021 ಮತ್ತು 02.12.2021 ರಂದು ಬಂಗಾರಪೇಟೆ ನಿಲ್ದಾಣದಲ್ಲಿ 30 ನಿಮಿಷಗಳ ಅವಧಿಗೆ ನಿಯಂತ್ರಿಸಲಾಗುವುದು.

5. ದಿನಾಂಕ 01.12.2021ರ ರೈಲು ಸಂಖ್ಯೆ 12539 ಯಶವಂತಪುರ - ಲಕ್ನೌ ಎಕ್ಸ್ ಪ್ರೆಸ್ (Yeshwanthpur - Lucknow Express) ರೈಲನ್ನು ದಿನಾಂಕ 01.12.2021ರಂದು ಬಿಸನಟ್ಟಮ್ ನಿಲ್ದಾಣದಲ್ಲಿ 75 ನಿಮಿಷಗಳ ಅವಧಿಗೆ ನಿಯಂತ್ರಿಸಲಾಗುವುದು.

English summary
The Southwest Railway has issued a press release stating that some trains have been canceled due to various activities and some trains have been postponed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X