ಚೀನಾದ 40 app ಗಳನ್ನು ಡಿಲೀಟ್ ಮಾಡಿ: ಸೈನಿಕರಿಗೆ ರಕ್ಷಣಾ ಇಲಾಖೆ ಆದೇಶ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ನವೆಂಬರ್ 29: ಭಾರತ-ಚೀನಾ ಗಡಿಯಲ್ಲಿರುವ ಎಲ್ಲಾ ಸೈನಿಕರೂ ತಮ್ಮ ಸ್ಮಾರ್ಟ್ ಫೋನಿನಲ್ಲಿರುವ 40 ಚೀನಾ app ಗಳನ್ನು ಡಿಲೀಟ್ ಮಾಡುವಂತೆ ರಕ್ಷಣಾ ಸಚಿವಾಲಯ ಆದೇಶಿಸಿದೆ. ಇದು ಭಾರತದ ಮತ್ತು ಸೈನಿಕರ ಭದ್ರತೆಯ ದೃಷ್ಟಿಯಿಂದ ತೆಗೆದುಕೊಂಡ ಕ್ರಮ ಎಂದು ಸಚಿವಾಲಯ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.

ಬ್ರಹ್ಮಪುತ್ರದಿಂದ ಕ್ಸಿನ್ ಜಿಯಾಂಗ್ ಗೆ ನೀರು, ಸಾವಿರ ಕಿ.ಮೀ. ಸುರಂಗ!

ಚೀನಾ app ಗಳ ಸರ್ವರ್ ಗಳೆಲ್ಲ ಚೀನಾದಲ್ಲೇ ಇರುವುದರಿಂದ ಸೈನಿಕರ ಚಲನವಲನಗಳನ್ನು app ಮೂಲಕವೇ ಪತ್ತೆಮಾಡುವ ಸಾಧ್ಯತೆಯಿದೆ. ಈ ಎಲ್ಲ app ಗಳ ಸರ್ವರ್ ಕೇಂದ್ರ ಚೀನಾ. ದೇಶದೊಳಗೆ ಇವನ್ನು ಬಳಸಿದರೆ ಅಪಾಯವಿಲ್ಲ. ಆದರೆ ಗಡಿಯಲ್ಲಿ, ಸೈನಿಕರು ಬಳಸುವುದರಿಂದ ಅಪಾಯವೇ ಹೆಚ್ಚು. ಆದ್ದರಿಂದ ಇವನ್ನು ಡಿಲೀಟ್ ಮಾಡುವಂತೆ ಆದೇಶಿಸಲಾಗಿದೆ.

ರಾಜ್ಯ ಕರಾವಳಿಯ ಮೀನು ರಫ್ತಿಗೆ ತಟ್ಟಿದ ಧೋಕ್ಲಾಂ ಬಿಕ್ಕಟ್ಟಿನ ಬಿಸಿ

Immediately delete 40 Chinese apps: Defence ministry orders troops

ವಿಯ್ಬೊ, ವಿಚಾಟ್, ಬ್ಯೂಟಿಪ್ಲಸ್, ನೆಸ್ ಡಾಗ್, ಸಿಎಂ ಬ್ರೌಸರ್, ಎಂಐ ಕಮ್ಯುನಿಟಿ, ಡಿಯು ಪ್ರೈವಸಿ, ಸೆಲ್ಫಿ ಸಿಟಿ, ಮೇಲ್ ಮಾಸ್ಟರ್ ಸೇರಿದಂತೆ 40 app ಗಳನ್ನು ಅಳಿಸಿಹಾಕಲು ಸೂಚಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Indian Government has directed all troops deployed along the Indo-China border to delete 40 apps on their smartphones. All these are Chinese apps and taking into account the threat perception, these apps have been ordered to be deleted.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ