India Rain Alert: ಚಂಡಮಾರುತ ಪ್ರಸರಣ! ದೆಹಲಿ ಸೇರಿ ವಿವಿಧೆಡೆ ವರುಣಬ್ಬರ, 3 ದಿನ ಧಾರಾಕಾರ ಮಳೆ ಎಚ್ಚರಿಕೆ

IMD Weather Forecast: ದೇಶದ ಉಳಿದ ಭಾಗಗಳಿಂದ ನೈಋತ್ಯ ಮುಂಗಾರು (Monsoon 2026) ಮುಂದಿನ 2-3 ದಿನಗಳಲ್ಲಿ ಸಂಪೂರ್ಣವಾಗಿ ನಿರ್ಗಮಿಸಲಿದೆ. ಇದೇ ಸಮಯದಲ್ಲಿ ದಕ್ಷಿಣ ಪರ್ಯಾಯ ದ್ವೀಪದಲ್ಲಿ ಹಿಂಗಾರು ಮಳೆ (Post Monsoon 2026) ಋತು ಆರಂಭಕ್ಕೆ ಅನುಕೂಲಕರ ವಾತಾವರಣವಿದೆ. ಇತ್ತ ಮುಂಗಾರು ಮಳೆ ಅಂತ್ಯ ಬೆನ್ನಲ್ಲೆ ದೆಹಲಿ ಸೇರಿದಂತೆ ಬೇರೆ ಬೇರೆ ಭಾಗಗಳಲ್ಲಿ ಭಾರೀ ಮಳೆ ಆಗಿದೆ. ಮುಂದಿನ 5 ದಿನಗಳ ಹವಾಮಾನ ಸ್ಥಿತಿಗತಿ ಹೇಗಿದೆ ಎಂಬ ಮುನ್ಸೂಚನೆ ಇಲ್ಲಿದೆ.

ಚಂಡಮಾರುತ ಪ್ರಸರಣ, ಟ್ರಫ್ ಕಾರಣದಿಂದಾಗಿ ಇಂದು ಸೋಮವಾರ ದೆಹಲಿ, ಗುರಗಾಂವ್, ನೋಯ್ಡಾ, ಗಾಜಿಯಾಬಾದ್, ಫರಿದಾಬಾದ್ ಮತ್ತು ಇತರ ಎನ್‌ಸಿಆರ್ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಪ್ರವಾಹ ಸ್ಥಿತಿ ಎಂಬಂತೆ ಕಂಡು ಬಂದಿದೆ. ಈ ದಿಢೀರ್ ಹವಾಮಾನ ಬದಲಾವಣೆಯು ದೆಹಲಿಯತ್ತ ತಿರುಗಿ ನೋಡುವಂತೆ ಮಾಡಿದೆ. ಅದಕ್ಕೆ ಮುಖ್ಯ ಕಾರಣ, ಇದು ಅಂತಿಂಥಾ ಮಳೆಯಲ್ಲ. ಕಳೆದ 4 ವರ್ಷಗಳಲ್ಲಿಯೇ ಅಕ್ಟೋಬರ್ ತಿಂಗಳಲ್ಲಿ ಸುರಿದ ಅತ್ಯಂತ ಹೆಚ್ಚು ಮಳೆ ಎಂದು ಐಎಂಡಿ ತಿಳಿಸಿದೆ.

IMD Weather Forecast

ಸಾಮಾನ್ಯವಾಗಿ ಮುಂಗಾರು ನಿರ್ಗಮನ ಬಳಿಕ ಇಷ್ಟು ಪ್ರಮಾಣದಲ್ಲಿ ದಿಢೀರ್ ಮಳೆ ಆಗುವುದಿಲ್ಲ. ಈ ಬಾರಿ ಸಮುದ್ರ ಮೇಲಿನ ಹವಾಮಾನ ವ್ಯವಸ್ಥೆಗಳು, ಗಾಳಿಯ ಸಂಚಾರ ದಿಕ್ಕಿನಲ್ಲಿನ ಬದಲಾವಣೆಗಳು, ವಾತಾವರಣದ ತೇವಾಂಶದಂತಹ ಹಲವಾರು ಅಂಶಗಳು ಕಾರಣವಾಗಿವೆ ಎಂದು ಹವಾಮಾನ ತಜ್ಞರು ವಿವರಿಸಿದ್ದಾರೆ. ಈ ಚಂಡಮಾರುತ ಪ್ರಸರಣ, ವಾಯುಭಾರ ಕುಸಿತದ ಪ್ರಭಾವದಿಂದಾಗಿ ಮುಂದಿನ ಮೂರು ದಿನ 'ದೆಹಲಿ, ಗುರಗಾಂವ್, ನೋಯ್ಡಾ, ಫರಿದಾಬಾದ್ ಮತ್ತು ಗಾಜಿಯಾಬಾದ್' ನಲ್ಲಿ ಜೋರು ಮಳೆ ಆಗಲಿದೆ. ದೆಹಲಿ ಎನ್‌ಸಿ ಆರ್ ನಲ್ಲಿ ಗುಡುಗು ಸಹಿತ ಭಾರೀ ಮಳೆ ಆಗಲಿದೆ ಎಂದು ಮುನ್ಸೂಚನೆ ಕೊಡಲಾಗಿದೆ.

ಇನ್ನೂ ಉತ್ತರ ಭಾರತದಾದ್ಯಂತ ವ್ಯಾಪಕ ಮಳೆ ಆಗುತ್ತಿದೆ. ಸೋಮವಾರ ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಕೆಲವು ಪ್ರದೇಶಗಳು ಮಳೆ ಕಂಡಿದ್ದು, ಇಳೆ ತಂಪಾಗಿದೆ. ಶಾಖದ ಅಲೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.

ಚಂಡಮಾರುತ ಪ್ರಸರಣ ಪ್ರಭಾವ, ಭಾರೀ ಮಳೆ

ಮುಂದಿನ ಮೂರು ದಿನಗಳ ಕಾಲ ರಾಜಸ್ಥಾನದಿಂದ ಈಶಾನ್ಯ ಮಧ್ಯಪ್ರದೇಶದವರೆಗೆ ಕಡಿಮೆ ಒತ್ತಡದ ಪ್ರದೇಶ, ಸುಳಿಗಾಳಿ ನಿರ್ಮಾಣವಾಗಿದೆ. ಪಾಕಿಸ್ತಾನ ಭಾಗದಲ್ಲಿ ಚಂಡಮಾರುತದ ಪರಿಚಲನೆ (Cyclonic Circulation) ಉಂಟಾಗಿದ್ದು, ಅದು ಉತ್ತರ ಮಧ್ಯಪ್ರದೇಶದ ಕಡೆಗೆ ಚಾಚಿಕೊಂಡಿರುವ ಮತ್ತೊಂದು ಟ್ರಫ್, ಮತ್ತು ಹಿಮಾಚಲ ಪ್ರದೇಶದ ಮೇಲಿನ ವೈಪರೀತ್ಯದೊಂದಿಗೆ ಕೂಡಿದ್ದೇ ಈ ದಿಢೀರ್ ಹವಾಮಾನ ಬದಲಾವಣೆಗೆ ಕಾರಣವಾಗಿ ವಿವಿಧಡೆ ಭಾರೀ ಮಳೆ ದಾಖಲಾಗಿದೆ.

ವೈಪರೀತ್ಯದಿಂದಾಗಿ ಉತ್ತರ ಭಾರತದ ಭಾಗಗಳಿಗೆ ತೇವಾಂಶ ಭರಿತ ಗಾಳಿ ಬೀಸುವಿಕೆ ಹೆಚ್ಚಾಗಿದ್ದು, ಅಸ್ಥಿರ ಹವಾಮಾನ ಉಂಟಾಗಿದೆ. ಇದು ಮುಖ್ಯವಾಗಿ ವಾಯುವ್ಯ ಭಾರತದಲ್ಲಿ ಚಳಿ, ಮಳೆ ವಾತಾವರಣ ಕಂಡು ಬಂದಿದೆ. ಇದೆಲ್ಲ ಪರಿಣಾಮವಾಗಿ ಅಕ್ಟೋಬರ್ 11 ರಿಂದ 15 ರವರೆಗೆ ಹರಿಯಾಣ, ಚಂಡೀಗಢ, ದೆಹಲಿಯಲ್ಲಿ ಅಲ್ಲಲ್ಲಿ ಗುಡುಗು ಸಹಿತ ಭಾರೀ ಮಳೆ ಆಗುವ ಸಾಧ್ಯತೆ ಇದೆ.

ದೆಹಲಿ-ಎನ್‌ಸಿಆರ್ (NCR) ಪ್ರದೇಶದಲ್ಲಿ ಹೆಲಿಕಾಪ್ಟರ್ ಸೇವೆಗಳು ಸೇರಿದಂತೆ ಪ್ರವಾಸೋದ್ಯಮ ಮತ್ತು ಮನರಂಜನಾ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ಹವಾಮಾನ ಇಲಾಖೆ ಶಿಫಾರಸು ಮಾಡಿದೆ.

ದಕ್ಷಿಣ ಭಾರತದಲ್ಲಿ ಸಾಮಾನ್ಯ ಮಳೆ

ಅಸ್ಸಾಂ, ಮೇಘಾಲಯ, ಮಣಿಪುರ, ಜಮ್ಮು ಮತ್ತು ಕಾಶ್ಮೀರ, ಲದಾಖ್ ಸೇರಿ ವಿವಿಧ ಮಳೆ ಮುನ್ಸೂಚನೆ ನೀಡಲಾಗಿದೆ. ಪಶ್ಚಿಮ ಬಂಗಾಳದ ಕೆಲವಡೆ ಮೂರು ದಿನ ಹಗುರ ಮಳೆ ನಿರೀಕ್ಷೆ ಇದೆ. ಇನ್ನೂ ದಕ್ಷಿಣ ಭಾರತದ ಕೇರಳ, ಕರ್ನಾಟಕದ ಒಳನಾಡು, ತಮಿಳುನಾಡಿನ ಕರಾವಳಿ ಭಾಗಗಳಲ್ಲಿ ಸಾಮಾನ್ಯ ಮಳೆ ನಿರೀಕ್ಷಿಸಬಹುದು. ಈ ಭಾಗಗಳಲ್ಲಿ ಬಿಸಿಲಿನ ಆರ್ಭಟವು ಹೆಚ್ಚಾಗಿದ್ದು, ಒಣ ಹವೆಯು ನಿರ್ಮಾಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+