ಜುಲೈವರೆಗೂ ಮುಂಗಾರು ಚುರುಕಾಗುವುದಿಲ್ಲ ಎಂದ ಹವಾಮಾನ ಇಲಾಖೆ
ನವದೆಹಲಿ,
ಜೂನ್ 25: ದೇಶದಲ್ಲಿ ಜೂನ್ 18ರ ನಂತರ ಮುಂಗಾರು ಮಳೆ ಆರ್ಭಟ ತಗ್ಗಿದೆ. ಹಲವು ಭಾಗಗಳಲ್ಲಿ ಮಳೆ ಕ್ಷೀಣವಾಗಿದೆ. ಜುಲೈ ಮೊದಲ ವಾರದಲ್ಲಷ್ಟೇ ಮತ್ತೆ ಮುಂಗಾರು ಚುರುಕಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. id="toptextpromo"> id='are-slot-1' class='oiad oi-axt oiadv'>ದೇಶದಲ್ಲಿ
ಜೂನ್ 18ರವರೆಗೂ ಸಾಮಾನ್ಯಕ್ಕಿಂತ 40% ಹೆಚ್ಚು ಮಳೆಯಾಗಿದೆ. ಆದರೆ ನಂತರ ಮಳೆ ಪ್ರಮಾಣ ಗಣನೀಯವಾಗಿ ತಗ್ಗಿದೆ. ಕಳೆದ ಒಂದು ವಾರದಿಂದ ಬಿಸಿಲು ಕಾಣಿಸಿಕೊಳ್ಳುತ್ತಿದೆ. ಜೂನ್ 1ರ ನಂತರ ಕೇರಳ ಪ್ರವೇಶಿಸಿದ ಮುಂಗಾರು ಜೂನ್ ಮುಗಿದ ನಂತರ ಮತ್ತೆ ಚುರುಕು ಪಡೆಯಲಿದೆ ಎಂದು ಹೇಳಿದೆ. ಮುಂದೆ ಓದಿ... id='are-slot-2' class='oiad oi-axt oiadv'>
ಜೂನ್ ಕಳೆದ ನಂತರ ಮಳೆ ಚುರುಕು
ಜೂನ್ ತಿಂಗಳಿನಲ್ಲಿ ದೇಶದಲ್ಲಿ ಸಾಮಾನ್ಯಕ್ಕಿಂತ 26% ಹೆಚ್ಚು ಮಳೆಯಾಗಿದ್ದು, ಜುಲೈ ಮೊದಲ ವಾರದವರೆಗೂ ಮಳೆ ಹೆಚ್ಚಾಗುವ ಯಾವುದೇ ಸೂಚನೆಯಿಲ್ಲ ಎಂದು ಇಲಾಖೆ ತಿಳಿಸಿದೆ. ಗುರುವಾರದವರೆಗೂ ಭಾರತದಲ್ಲಿ 152 ಎಂಎಂ ಮಳೆ ದಾಖಲಾಗಿದೆ. ರಾಜಸ್ಥಾನ, ದೆಹಲಿ, ಹರಿಯಾಣ ಹಾಗೂ ಪಂಜಾಬ್ ಹೊರತುಪಡಿಸಿ ದೇಶದ ಎಲ್ಲಾ ಭಾಗಗಳನ್ನೂ ನೈಋತ್ವ ಮುಂಗಾರು ಆವರಿಸಿದೆ. ಇನ್ನುಳಿದ ಭಾಗಗಳಲ್ಲಿ ಜೂನ್ ಕಳೆದ ನಂತರ ಮುಂಗಾರು ಮಳೆ ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹೆಚ್ಚಿನ ಮಳೆ ದಾಖಲು
ದೇಶದ ಎಲ್ಲಾ ಭಾಗಗಳಲ್ಲಿಯೂ ಇಲ್ಲಿಯವರೆಗೆ ಸಾಮಾನ್ಯಕ್ಕಿಂತ ಮಳೆ ಪ್ರಮಾಣ ಹೆಚ್ಚಾಗಿದೆ. ಜೂನ್ 23 ವರದಿ ಪ್ರಕಾರ, ಪೂರ್ವ ಹಾಗೂ ಈಶಾನ್ಯ ಭಾರತದಲ್ಲಿ 8%, ವಾಯವ್ಯ ಭಾರತದಲ್ಲಿ 58%, ಮಧ್ಯ ಭಾರತದಲ್ಲಿ 46% ಮತ್ತು ದಕ್ಷಿಣ ಭಾಗಗಳಲ್ಲಿ 15% ಹೆಚ್ಚಿಗೆ ಮಳೆ ದಾಖಲಾಗಿದೆ.

ಈಶಾನ್ಯ ಭಾರತದಲ್ಲಿ ವ್ಯಾಪಕ ಮಳೆ
ದೇಶದ ಹಲವು ಭಾಗಗಳಲ್ಲಿ ಜುಲೈ ಮೊದಲ ವಾರದಲ್ಲಿ ಮಳೆ ಹೆಚ್ಚಾಗಲಿದೆ. ಅದರಲ್ಲೂ ಮಧ್ಯ ಭಾರತದಲ್ಲಿ ಜುಲೈ ಮೊದಲ ವಾರದ ನಂತರ ಅತಿ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದೇಶದ ಈಶಾನ್ಯ ಭಾಗಗಳಲ್ಲಿ ಜುಲೈ 1ರಿಂದ 7ರವರೆಗೆ ವ್ಯಾಪಕ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
Recommended Video

ಹವಾಮಾನ ಇಲಾಖೆ ಮುಂಗಾರು ಮುನ್ಸೂಚನೆ
ನೈಋತ್ಯ ಮುಂಗಾರು ದಕ್ಷಿಣ ಭಾರತ ಹಾಗೂ ಉತ್ತರ ಭಾರತದಲ್ಲಿ ಸಾಮಾನ್ಯ ರೀತಿಯಲ್ಲಿ ಇರಲಿದ್ದು ಕೇಂದ್ರ ಪ್ರದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ. ಆದರೆ ಭಾರತ ಪೂರ್ವ ಭಾಗದಲ್ಲಿ ಮತ್ತು ಈಶಾನ್ಯ ಭಾರತದಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಕಡಿಮೆ ಮಟ್ಟದಲ್ಲಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿತ್ತು. ನೈಋತ್ಯ ಮುಂಗಾರಿನ ಕಾಲಾವಧಿಯಲ್ಲಿ(ಜೂನ್‌ನಿಂದ-ಸೆಪ್ಟೆಂಬರ್) ದೇಶಾದ್ಯಂತ ಮಳೆಯ ಪ್ರಮಾಣ ಸಾಮಾನ್ಯ ಪ್ರಮಾಣದಲ್ಲಿ ಇರಲಿದೆ. 96-104 ಶೇಕಡಾ ಪ್ರಮಾಣದ ಮಳೆಯಾಗಬಹುದು. ದೀರ್ಘಾವಧಿಯ ಸರಾಸರಿಯಲ್ಲಿ ಮಳೆಯ ಪ್ರಮಾಣ ನೈಋತ್ಯ ಮುಂಗಾರಿನಲ್ಲಿ 101 ಶೇಕಡಾದಷ್ಟು ಬೀಳುವ ಸಾಧ್ಯತೆಯಿದೆ ಎಂದು ತಿಳಿಸಿತ್ತು.












Click it and Unblock the Notifications