• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂಬೈನಲ್ಲಿ 48 ಗಂಟೆಗಳಲ್ಲಿ ಭಾರಿ ಮಳೆ, ಹವಾಮಾನ ಇಲಾಖೆ ಎಚ್ಚರಿಕೆ

|

ಮುಂಬೈ, ಜುಲೈ 30: ಮುಂಬೈನಲ್ಲಿ ಮುಂದಿನ 48 ತಾಸುಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮಹಾರಾಷ್ಟ್ರ, ಗುಜರಾತ್, ವಿದರ್ಭಾ, ಮಧ್ಯಪ್ರದೇಶ, ನಾಗಾಲ್ಯಾಂಡ್‌ನಲ್ಲಿ ಹೆಚ್ಚಿನ ಮಳೆಯಾಗಲಿದೆ. ತೆಲಂಗಾಣ, ಮಧ್ಯ ಮಹಾರಾಷ್ಟ್ರ, ಛತ್ತೀಸ್‌ಗಢದಲ್ಲೂ ಮಳೆಯಾಗುವ ಕುರಿತು ಮುನ್ಸೂಚನೆ ನೀಡಲಾಗಿದೆ. ಹಿಮಾಚಲ ಪ್ರದೇಶದಲ್ಲೀ ಈಗಾಗಲೇ ಮಳೆ ಆರಮಭವಾಗಿದೆ. ಅಲ್ಲಿನ ಕುಲ್ಲು,ಕಾಂಗ್ರಾ, ಬಿಲಾಸ್‌ಪುರ್, ಶಿಮ್ಲಾ, ಸೋಲನ್‌, ಮಂಡಿಯಲ್ಲಿ ಮಳೆಯಾಗಲಿದೆ. ಇನ್ನು ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರಾದಲ್ಲೂ ಕೂಡ ಮಳೆಯಾಗವ ಸಾಧ್ಯತೆ ಇದೆ ಗಾಳಿಯು ಗಂಟೆಗೆ 40-50 ಕಿ.ಮೀ ವೇಗದಲ್ಲಿ ಸಾಗುತ್ತಿದೆ.

ಚಕ್ರಾ, ಸಾವೇಹಕ್ಲುವಿನಿಂದ ಲಿಂಗನಮಕ್ಕಿಗೆ ನೀರು ಬಿಡುಗಡೆಚಕ್ರಾ, ಸಾವೇಹಕ್ಲುವಿನಿಂದ ಲಿಂಗನಮಕ್ಕಿಗೆ ನೀರು ಬಿಡುಗಡೆ

ಶನಿವಾರವಷ್ಟೇ ಮುಂಬೈ-ಕೊಲ್ಹಾಪುರ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ ರೈಲು ನೀರಿನಲ್ಲಿ ಸಿಲುಕಿ 700 ಪ್ರಯಾಣಿಕರು ಸಂಕಷ್ಟ ಎದುರಿಸಿದ್ದರು. 11ಕ್ಕೂ ಹೆಚ್ಚು ವಿಮಾನಗಳ ಮಾರ್ಗ ಬದಲಿಸಲಾಗಿದೆ. ಎನ್‌ಡಿಆರ್‌ಎಫ್, ಭಾರತೀಯ ಸೇನೆ, ನೇವಿ, ಪೊಲೀಸ್, ಮೆಡಿಕಲ್ ತಂಡವು ಎಲ್ಲಿಯೇ ಜನರ ಸೇವೆಗೆ ಸಿದ್ಧರಾಗಿ ನಿಂತಿದ್ದಾರೆ.

ಇನ್ನು ಕರ್ನಾಟಕದಲ್ಲಿ ಕೂಡ ಮಳೆ ಮುಮದುವರೆದಿದೆ. ಕರಾವಳಿ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲೂ ಮಳೆಯಾಗುತ್ತಿದೆ.

ಈಶಾನ್ಯ ಭಾಗಗಳಲ್ಲಿ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲೂ ಕೂಡ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಗುಜರಾತ್ ಕರಾವಳಿಯಲ್ಲಿ ಗಾಳಿಯ ವೇಗ ಹೆಚ್ಚಾಗುವ ಸಾಧ್ಯತೆಯಿದ್ದು, ಮುಂದಿನ ಕೆಲವು ದಿನಗಳವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸಂಸ್ಥೆ ಸಲಹೆ ನೀಡಿದೆ.

English summary
IMD predicts heavy to very heavy rainfall in Mumbai today, The Indian Meteorological Department (IMD) predicted ‘heavy to very heavy’ rainfall at isolated places in Mumbai on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X