IMD Weather Forecast: ಈ ಭಾಗಗಳಲ್ಲಿ ಭಾರೀ ಮಳೆ ಮುನ್ಸೂಚನೆ, ಶಾಲೆಗಳಿಗೆ ರಜೆ ಘೋಷಣೆ

IMD Weather Forecast: ಭಾರತಾದ್ಯಂತ ವಿಸ್ತರಣೆ ಆಗಿರುವ ಮುಂಗಾರು ಮಳೆ ಆರ್ಭಟ ಮುಂದುವರಿದಿದೆ. ಮುಂದಿನ ಮೂರು ನಾಲ್ಕು ದಿನಗಳಲ್ಲಿ ಮತ್ತಷ್ಟು ಮಳೆ ಆಗುವ ನಿರೀಕ್ಷೆ ಇದೆ ಎಂದು ಹೇಳಿರುವ ಭಾರತೀಯ ಹವಾಮಾನ ಇಲಾಖೆ, ಕೆಲವು ರಾಜ್ಯಗಳಿಗೆ ಆರೆಂಜ್ ಮತ್ತು ರೆಡ್ ಅಲರ್ಟ್ ಎಚ್ಚರಿಕೆ ನೀಡಿದೆ. ದೆಹಲಿ, ಮುಂಬೈ, ಕೇರಳ, ಗುಜರಾತ್, ಜಾರ್ಖಂಡ, ತಮಿಳುನಾಡು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುವ ಮುನ್ಸೂಚನೆ ಇದೆ.

ದೇಶದ ಈ ರಾಜ್ಯಗಳು ಜೋರು ಮುಂಗಾರು ಮಳೆಗೆ ಸಾಕ್ಷಿಯಾಗಲಿವೆ. ಮುಂಬೈ ಹಾಗೂ ಗುಜರಾತ್ ಸೇರಿದಂತೆ ಇತರ ಕೆಲವು ನಗರಗಳಲ್ಲಿ ಭಾರೀ ಮಳೆ ಆಗಲಿದೆ. ದೆಹಲಿ ನೊಯ್ಡಾ ಹಾಗೂ ಎನ್‌ಸಿಆರ್ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಆಗಲಿದೆ. ದೆಹಲಿ, ನೊಯ್ಡಾ, ಗುರುಗ್ರಾಮ್‌ಗಳಿಗೆ ಇಂದು ಮತ್ತು ನಾಳೆ ಎರಡು ದಿನ 'ಯೆಲ್ಲೋ ಅಲರ್ಟ್' ನೀಡಲಾಗಿದೆ. ಇಂದು ದೆಹಲಿಯಲ್ಲಿ ಪ್ರತಿಗಂಟೆಗೆ ಗಾಳಿಯ ವೇಳೆಗೆ ಗಾಳಿಯ ವೇಗ 60 ಕಿಲೋ ಮೀಟರ್ ದಾಟಿದೆ.

IMD Predicts Heavy Rain Alert in These States of India next 3 Days Know weather forecast

ಶಾಲೆಗಳಿಗೆ ರಜೆ ಘೋಷಣೆ

ದೆಹಲಿ ಭಾಗದಲ್ಲಿ ಮುಂದಿನ ಎರಡು ದಿನ ಸಾಧಾರಣದಿಂದ ಭಾರೀ ಮಳೆಗೆ ರಸ್ತೆ ಸಂಚಾರ ಸಮಸ್ಯೆ ಇನ್ನಿತರ ಸಮಸ್ಯೆಗಳು ಎದುರಾಗಬಹುದು. ಇನ್ನೂ ಮುಂಬೈ ಮತ್ತು ಪುಣೆ ಭಾಗದಲ್ಲಿ ಮಳೆಗೆ ರೈಲು ಸಂಚಾರ ವಿಳಂಬವಾಗಿದೆ. ಮುಂಬೈ ಮತ್ತು ಪುಣೆ ಯಲ್ಲಿ ಮುಂದಿನ 24 ಗಂಟೆಗಳಲ್ಲಿ ಹೆಚ್ಚಿನ ಮಳೆ ನಿರೀಕ್ಷೆ ಇದೆ. ಮಳೆ, ಪ್ರವಾಹ ಮುಂಜಾಗ್ರತಾ ಕ್ರಮವಾಗಿ ನವಿ ಮುಂಬೈ, ಪುಣೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಕೇರಳದಲ್ಲಿ ರೆಡ್ ಅಲರ್ಟ್

ಕೇರಳ ರಾಜ್ಯದ ವಿವಿಧ ಕಡೆಗಳಲ್ಲಿ ಭಾರೀ ಮಳೆ ಆಗಲಿದೆ. ಎರ್ನಾಕುಲಂ, ತ್ರಿಶೂರ್, ಪಲಕ್ಕಾಡ್, ಪಟ್ಟಾನಂಥಿಟ್ಟ ಮತ್ತು ಇದುಕಿ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಆಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಒಟ್ಟು 20 ಸೆಂಟಿ ಮೀಟರ್‌ಗೂ ಹೆಚ್ಚಿನ ಮಳೆ ಆಗಲಿದೆ. ತಗ್ಗು ಪ್ರದೇಶ ಹಾಗೂ ಕರಾವಳಿ ಭಾಗದ ಜನರಿಗೆ ಮುಂದಿನ ಕೆಲವು ದಿನಗಳ ಕಾಲ ಸುರಕ್ಷಿತ ಸ್ಥಳದಲ್ಲಿ ಇರುವ ತಿಳಿಸಲಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಲಾಗಿದೆ.

ಗುಜರಾತ್ ಸಿಎಂ ಸೂಚನೆ ಏನು?

ಗುಜರಾತ್‌ ರಾಜ್ಯದ ಸೌರಾಷ್ಟ್ರ ಹಾಗೂ ದಕ್ಷಿಣ ಭಾಗದ ನಗರಗಳಲ್ಲಿ ಇಂದು ಮತ್ತು ನಾಳೆ ದಿಢೀರ್ ಮಳೆ ಆಗುವ ಲಕ್ಷಣಗಳು ಇವೆ. ಈ ಮುನ್ಸೂಚನೆ ಬೆನ್ನಲ್ಲೆ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಅವರು ಪ್ರವಾಹ, ನೀರು, ಆರೋಗ್ಯ ಕುರಿತು ಎಚ್ಚರಿಕೆ ವಹಿಸುವಂತೆ, ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ಕರ್ನಾಟಕ ಹವಾಮಾನ ವರದಿ

ಕರ್ನಾಟಕ ರಾಜ್ಯದಲ್ಲಿ ಮುಂದಿನ ಮೂರು ದಿನ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಒಂದೆರಡು ಜಿಲ್ಲೆಗಳಿಗೆ 'ರೆಡ್ ಅಲರ್ಟ್', ಕೆಲ ಜಿಲ್ಲೆಗಳಿಗೆ 'ಆರೆಂಜ್ ಮತ್ತು ಯೆಲ್ಲೋ' ಅಲರ್ಟ್ ನೀಡಲಾಗಿದೆ. ಮುಂದಿನ ಮೂರು ದಿನಗಳ ನಂತರ ಮಳೆ ಕಡಿಮೆ ಆಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಇಂದಿನಿಂದಲೇ ಮಳೆ ಇಳಿಕೆ ಆಗಲಿದೆ.

ವಿವಿಧ ರಾಜ್ಯಗಳಲ್ಲಿ ಬಿರುಸು ಮಳೆ

ಇನ್ನೂ ಹಿಮಾಚಲ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ, ಕೊಲ್ಕತ್ತಾ, ಅಸ್ಸಾಂ, ತಮಿಳುನಾಡು, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳ ಹಲವು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಆಗಲಿದೆ. ಒಂದಷ್ಟು ಕಡೆಗಳಲ್ಲಿ ಅತ್ಯಧಿಕ ಮಳೆ ನಿರೀಕ್ಷೆ ಇದೆ. ಹೀಗಾಗಿ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಇತ್ತೀಚೆಗೆ ಸುರಿದಿದ್ದ ಭಾರೀ ಮಳೆಗೆ ಸಾಕಷ್ಟು ಅವಘಡಗಳು ಸಂಭವಿಸಿದ್ದವು. ಅದೆಲ್ಲ ಮಾಸುವ ಮುನ್ನವೇ ಮುಂಗಾರು ಆರಂಭವಾದ ಬಳಿಕ ಎರಡನೇ ಭಾರಿಗೆ ಬಿರುಸಿನ ಮಳೆ ಸುರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+