Rain Alert: ಚಂಡಮಾರುತದ ತೀವ್ರತೆ ಹೆಚ್ಚಳ: ತಮಿಳುನಾಡಿಗೆ ಉತ್ತಮ ಮಳೆ, ಬೆಂಗಳೂರು ಮುನ್ಸೂಚನೆ?

ಬೆಂಗಳೂರು, ಮಾರ್ಚ್ 11: ಸಮುದ್ರ ಮೇಲ್ಮೈ ಮೇಲೆ ಹಲವು ದಿವಸಗಳಿಂದ ಉಂಟಾಗಿರುವ ಚಂಡಮಾರುತ ಪರಿಚಲನೆಯು ತೀವ್ರಗೊಂಡಿದೆ. ಸಮುದ್ರ ಮೇಲ್ಮೈನಿಂದ ಬೀಸುವ ತೇವಭರಿತ ಗಾಳಿಯು ತಮಿಳುನಾಡು ರಾಜ್ಯದಲ್ಲಿ ಭಾರೀ ಮಳೆ ಸುರಿಸಲಿದೆ. ಹೀಗಾಗಿ ವಿವಿಧ ಜಿಲ್ಲೆಯಗಳಿಗೆ ಐಎಂಡಿ 'ಯೆಲ್ಲೋ ಅಲರ್ಟ್' ನೀಡಿದೆ. ಈ ಮೂಲಕ ಪೂರ್ವ ಮುಂಗಾರು ಮಳೆ ಮಾರುತುಗಳ ಮುಂದಿನ ಕೇಲವೇ ದಿನಗಳಲ್ಲಿ ದೇಶಾದ್ಯಂತ ಪರಿಪೂರ್ಣವಾಗಿ ಸಕ್ರಿಯವಾಗಲಿವೆ. ಬಂಗಾಳಕೊಲ್ಲಿ ಹವಾಮಾನ ವೈಪರಿತ್ಯದ ಪ್ರಭಾವವು ಬೆಂಗಳೂರಿನ ಮೇಲೆ ಉಂಟಾಗುತ್ತಾ? ಎಂಬ ಮುನ್ಸೂಚನೆ ಇಲ್ಲಿದೆ.

ಪ್ರಸ್ತುತದಲ್ಲಿ ಹಿಂದೂ ಮಹಾಸಾಗರದ ಈಶಾನ್ಯ ಹಾಗೂ ಬಂಗಾಳ ಕೊಲ್ಲಿಯ ಆಗ್ನೇಯ ಭಾಗದ ಸಮುದ್ರ ಮೇಲ್ಭಾಗದ ವಾಯು ಚಂಡಮಾರುತದ ಪ್ರಸರಣವಿದೆ. ವಿವಿಧ ದಿಕ್ಕಿನಿಂದ ಬೀಸುವ ಗಾಳಿಯು ಈ ಭಾಗದಲ್ಲಿ ಸುತ್ತುವರಿದಿದೆ. ಈ ವೈಪರಿತ್ಯವು ಸಮುದ್ರ ಮಟ್ಟದಿಂದ 5.8 ಕಿಲೋ ಮೀಟರ್ ಎತ್ತರದಲ್ಲಿದೆ. ಆರಂಭದಲ್ಲಿ ಇದು ಕೇವಲ 0.09 ಕಿಲೋ ಮೀಟರ್ ಎತ್ತರ ಇದೆ. ಅದು ದಿನೇ ದಿನೇ ಬಲಗೊಳ್ಳುತ್ತಿರುವುದು ದೃಢವಾಗಿದೆ.

IMD Issues Heavy Rain-Yellow Alert 12 Districts of Tamil Nadu Due Cyclonic Circulation

ರಾಜ್ಯಕ್ಕೆ ಭಾರೀ ಮಳೆ: ವಿವಿಧ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್'

ತಮಿಳುನಾಡು ಕರಾವಳಿ ಭಾಗದಲ್ಲಿ ಸಮುದ್ರ ಭಾಗದಲ್ಲಿ ಸ್ಪಷ್ಟ ಚಂಡಮಾರುತ ಪರಿಚಲನೆ ಉಂಟಾಗಿದೆ. ಅದರ ತೀವ್ರತೆ ಕಳೆದ 12 ಗಂಟೆಗಳಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಉತ್ತಮ ಮಳೆ ನಿರೀಕ್ಷೆ ಇದೆ. ರಾಜ್ಯದ ವಿವಿಧ 12 ಜಿಲ್ಲೆಗಳಲ್ಲಿ ಭಾರೀ ಮಳೆಯ ನಿರೀಕ್ಷೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ 'ಆರೆಂಜ್ ಅಲರ್ಟ್' ಘೋಷಿಸಿದೆ.

ಚೆನ್ನೈ ಮಹಾನಗರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಈಗಾಗಲೇ ಮೋಡ ಕವಿದ ವಾತಾವರನ ಕಂಡು ಬಂದಿದೆ. ಮುಂದಿನ 04 ದಿನಗಳ ಕಾಲ ಗುಡುಗು, ಮಿಂಚು ಸಹಿತ ಸಾಧಾರಣದಿಂದ ಭಾರೀ ಪ್ರಮಾಣದಲ್ಲಿ ಪೂರ್ವ ಮುಂಗಾರು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಖಚಿತಪಡಿಸಿದೆ.

IMD Issues Heavy Rain-Yellow Alert 12 Districts of Tamil Nadu Due Cyclonic Circulation

ವಿರುಧುನಗರ, ಶಿವಗಂಗಾ, ತಂಜಾವೂರು, ತಿರುವರೂರು, ನಾಗಪಟ್ಟಿಣಂ, ಪುದಕೊಟ್ಟಾಯ್, ರಾಮನಾಥಪುರಂ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಭಾರೀ ಮಳೆ ಎಚ್ಚರಿಕೆ ಕೊಡಲಾಗಿದೆ. ಗಾಳಿಯ ಬೀಸುವಿಕೆ ವೇಗ ಹೆಚ್ಚಾಗಲಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ, ಸೂಕ್ತ ಮುಂಜಾಗೃತೆ ವಹಿಸುವಂತೆ ಹವಾಮಾನ ತಜ್ಞರು ತಿಳಿಸಿದ್ದಾರೆ.

ಬೆಂಗಳೂರಿಗೆ ಮಳೆ ಮುನ್ಸೂಚನೆ ಇದೆಯಾ?

ಬೆಂಗಳೂರಿಗೆ ಪೂರ್ವ ಮುಂಗಾರು ಮಳೆ ಲಗ್ಗೆ ಇಡಲಿದೆ ಎಂದು ಈಗಾಗಲೇ ಮುನ್ಸೂಚನೆ ನೀಡಲಾಗಿತ್ತು. ತೀವ್ರ ಬಿಸಿಲಿನ ಮಧ್ಯೆ ಮಳೆ ಬರುತ್ತಾ! ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದರು. ಮೊನ್ನೆಯ ಮುನ್ಸೂಚನಾ ವರದಿ ಪ್ರಕಾರ ನಗರಕ್ಕೆ ಮಳೆ ಬರುವ ಸಂಭವವಿತ್ತು. ಆದರೆ ಬದಲಾದ ಹವಾಮಾನ ಹಿನ್ನೆಲೆಯಲ್ಲಿ ಮಳೆ ಬರುವುದಿಲ್ಲ. ನಗರದಲ್ಲಿ ಶುಷ್ಕ ವಾತಾವರಣವೇ ಮುಂದುವರಿಯಲಿದೆ ಎಂದು ಮಂಗಳವಾರದ ಐಎಂಡಿ ಮುನ್ಸೂಚನಾ ವರದಿಗಳು ತಿಳಿಸಿವೆ.

ಮಾರ್ಚ್ 16 ರವರೆಗೆ ಶುಷ್ಕ ವಾತಾವರಣ

ಬೆಂಗಳೂರಿನಲ್ಲಿ ಮಾರ್ಚ್ 16ರವರೆಗೆ ಗರಿಷ್ಠ 33-32 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದ್ದು, ನಗರಾದ್ಯಂತ ಒಣಹವೆ ಕಂಡು ಬರಲಿದೆ. ಇನ್ನೂ ಕರ್ನಾಟಕ ರಾಜ್ಯಾದ್ಯಂತ ಕೆಳ ಒಣಹವೆ ಕಂಡು ಬರಲಿದೆ. ಒಳ ನಾಡು ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+