Get Updates
Get notified of breaking news, exclusive insights, and must-see stories!

IMD Weather Forecast: ಈ ಭಾಗಗಳಲ್ಲಿ ಮಳೆ-ಹಿಮಪಾತ, ಉಳಿದೆಲ್ಲೆಡೆ ಶೀತದ ಅಲೆ ಮುನ್ಸೂಚನೆ

India Cold Waver Alert: ದೇಶಾದ್ಯಂತ ಶೀತಭರಿತ ಗಾಳಿ ಅಬ್ಬರ ಜೋರಾಗಿದೆ. ಕರಾವಳಿ ಪ್ರದೇಶ, ಭೂಮೇಲ್ಮೈ ಸೇರಿದಂತೆ ಎಲ್ಲ ಭಾಗಗಳಲ್ಲಿ ಚಳಿ ಆವರಿಸಿದೆ. ಬೆಳಗ್ಗೆ ದಟ್ಟ ಮಂಜು ಬೀಳುತ್ತಿದೆ. ಇದೀಗ ಹವಾಮಾನ ಇಲಾಖೆ ವಿವಿಧೆಡೆ ಲಘು ಮಳೆ ಜೊತೆಗೆ ಹಿಮಪಾತದ ಮುನ್ನೆಚ್ಚರಿಕೆ ನೀಡಿದೆ. ಇದರೊಂದಿಗೆ ಹಗಲು ಹೊತ್ತು ತಾಪಮಾನ ಏರಿಕೆ ಅಗಿದ್ದು, ಒಂದೆರಡು ಭಾಗಗಳಲ್ಲಿ ಮಳೆ ಬರುವ ನಿರೀಕ್ಷೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಜಮ್ಮು-ಕಾಶ್ಮೀರ-ಲಡಾಖ್ ಸೇರಿದಂತೆ ಪಶ್ಚಿಮ ಹಿಮಾಲಯ ಪ್ರದೇಶ ಬಾಲ್ಟಿಸ್ತಾನ್, ಮುಜಫರಾಬಾದ್ ವ್ಯಾಪ್ತಿಯಲ್ಲಿ ಡಿಸೆಂಬರ್ 13 ರಿಂದ 16ರವರೆಗೆ ಪ್ರತ್ಯೇಕ ಕಡೆಗಳಲ್ಲಿ ಹಿಮಪಾತ ಉಂಟಾಗಲಿದೆ. ಇದೇ ವ್ಯಾಪ್ತಿಯ ಕೆಲವೆಡೆ ಚದರಿದಂತೆ ಮಳೆ ಆಗಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಗಂಟೆಗೆ 30-40 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಅಲ್ಲಿ ಸಹ ಮುಂದಿನ ಮೂರು ದಿನ ಜೋರು ಮಳೆ ನಿರೀಕ್ಷೆ ಇದೆ.

IMD Issues Cold Wave Fog and Rain Alert for India Heavy Snowfall Expected in Himalayan Regions

ಈ ಭಾಗಗಳಲ್ಲಿ ಒಣಹವೆಯ ಮುನ್ಸೂಚನೆ

ಮುಂದಿನ 2 ದಿನಗಳಲ್ಲಿ ವಾಯುವ್ಯ ಭಾರತದ ಬಯಲು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಗಮನಾರ್ಹ ಬದಲಾವಣೆ ಇಲ್ಲ. ಇಲ್ಲಿ ಚಳಿಗಿಂತ ಬಿಸಿಲಿನ ಆರ್ಭಟ ಹೆಚ್ಚಿರಲಿದೆ. ಗುಜರಾತ್, ಪೂರ್ವ ಮತ್ತು ಈಶಾನ್ಯ ಭಾರತದ ಹಲವೆಡೆ ಒಣಹವೆ ವಾತಾವರಣ ಕಂಡು ಬರಲಿದೆ. ಡಿಸೆಂಭರ್ 13ರ ನಂತರ ತಾಪಮಾನದಲ್ಲಿ 2ರಿಂದ 4 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗುವ ಸಾಧ್ಯತೆ ಇದೆ.

ದಟ್ಟ ಮಂಜು ಮತ್ತು ಶೀತಅಲೆ ಮುನ್ನೆಚ್ಚರಿಕೆ

ಇದಕ್ಕೆ ತದ್ವಿರುದ್ಧ ಎಂಬಂತೆ ಮಹಾರಾಷ್ಟ್ರ, ಕರ್ನಾಟಕ, ದೆಹಲಿ ಸೇರಿದಂತೆ ಒಂದೆರಡು ರಾಜ್ಯಗಳಲ್ಲಿ ಮುಂದಿನ 3 ದಿನಗಳವರೆಗೆ ಕನಿಷ್ಠ ತಾಪಮಾನ ಮತ್ತಷ್ಟು ಕುಸಿಯಲಿದೆ. ನಿರೀಕ್ಷಿತ ಸಾಮಾನ್ಯ ಉಷ್ಣಾಂಶಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಕುಸಿಯಬಹುದೆಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

ಇಂದಿನಿಂದ ಡಿಸೆಂಬರ್ 13 ರಂದು ಮಹಾರಾಷ್ಟ್ರ, ಮರಾಠವಾಡ, ತೆಲಂಗಾಣ, ಕರ್ನಾಟಕದ ಉತ್ತರ ಒಳನಾಡು, ಒಡಿಶಾದ ಪ್ರತ್ಯೇಕ ಸ್ಥಳಗಳಲ್ಲಿ, ಪಶ್ಚಿಮ ಮಧ್ಯಪ್ರದೇಶ, ವಿದರ್ಭ, ಛತ್ತೀಸ್‌ಗಢದಲ್ಲಿ ಮೈಕೊರೆವ ಚಳಿ ಹೆಚ್ಚಾಗಲಿದೆ. ಐಎಂಡಿ ಶೀತದ ಅಲೆಯ ಮುನ್ನೆಚ್ಚರಿಕೆ ನೀಡಿದೆ.

ಡಿಸೆಂಬರ್ 15ರವರೆಗೆ ಅಸ್ಸಾಂ ಮತ್ತು ಮೇಘಾಲಯ ಮತ್ತು ನಾಗಾಲ್ಯಾಂಡ್, ಉತ್ತರ ಪ್ರದೇಶ, ಅಸ್ಸಾಂ, ಮಣಿಪುರ, ಮಿಜೋರಾಂ ಮತ್ತು ತ್ರಿಪುರದ ಪ್ರತ್ಯೇಕ ಪ್ರದೇಶಗಳಲ್ಲಿ ಬೆಳಗ್ಗೆ ದಟ್ಟ ಮಂಜು ಬೀಳಲಿದೆ. ತಾಪಮಾನ ಇಳಿಕೆ ಆಗಿ ಚಳಿ ಏರಲಿದೆ. ಪಂಜಾಬ್ ಮತ್ತು ಹರಿಯಾಣ, ಚಂಡೀಗಢದ ಮೇಲೂ ಇದೇ ರೀತಿಯ ವಾತಾವರಣ ಕಂಡು ಬರಲಿದೆ ಎಂದು ಐಎಂಡಿ ತಿಳಿಸಿದೆ.

ಕಾರವಾರದಲ್ಲಿ ಅತ್ಯಧಿಕ ಬಿಸಿಲು

ಕರ್ನಾಟಕದ ಕಾರವಾರದಲ್ಲಿ ಅತ್ಯಧಿಕ ಗರಿಷ್ಠ ತಾಪಮಾನ 35.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದ ಈ ಭಾಗದಲ್ಲಿ ಬಿಸಿಲು ಹೆಚ್ಚಾಗಿದೆ. ಕಾರವಾರ ಸೇರಿದಂತೆ ಇತರ ಕಡೆಗಳಲ್ಲಿ ಒಣಹವೆ, ಜೊತೆಗೆ ಚಳಿ ಹೆಚ್ಚಲಿದೆ ಎಂದು ತಜ್ಞರು ವರದಿಯಲ್ಲಿ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+