IMD Cyclone Alert: ಚಂಡಮಾರುತ ಪ್ರಭಾವ! ಇಲ್ಲಿನ 50 ಮಾರ್ಗಗಳ ರೈಲುಗಳು, 30ಕ್ಕೂ ಅಧಿಕ ವಿಮಾನಗಳು ರದ್ದು
IMD Cyclone Alert: ದಕ್ಷಿಣ ಭಾರತದ ಕರಾವಳಿ ರಾಜ್ಯಗಳನ್ನು 'ಅರ್ನಾಬ್ ಚಂಡಮಾರುತ' ಸಮೀಪಿಸಿದೆ. ಈಗಾಗಲೇ ಈ ಭಾಗದಲ್ಲೇ ಬಿರುಗಾಳಿ ಅಬ್ಬರ ಉಂಟಾಗಿದ್ದು, ವಿವಿಧೆಡೆ ಭಾರೀ ಮಳೆ ಸುರಿಯುತ್ತಿದೆ. ಗಾಳಿಯ ವೇಗವು ಗಂಟೆಗೆ 125-135 ಕಿ.ಮೀ.ನಷ್ಟಿದೆ. ಇದರ ವೇಗ ಬುಧವಾರ ಬೆಳಗ್ಗೆಗೆ ಗಂಟೆಗೆ 150 ಕಿ.ಮೀ.ವರೆಗೆ ತಲುಪಬಹುದು. ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್‌ಗಢ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರಿ ಅಥವಾ ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮುನ್ನೆಚ್ಚರಿಕಾ ಕ್ರಮವಾಗಿ 50 ಮಾರ್ಗಗಳ ರೈಲುಗಳು, 40ಕ್ಕೂ ಅಧಿಕ ವಿಮಾನ ಸಂಚಾರ ರದ್ದುಗೊಳಿಸಲಾಗಿದೆ.
ಹಲವು ರೈಲುಗಳು ಮತ್ತು ವಿಮಾನಗಳ ಸಂಚಾರ ರದ್ದು
ಸೈಕ್ಲೋನ್ ಮಂಗಳವಾರ ಆಂಧ್ರಪ್ರದೇಶ ಕರಾವಳಿ ಸಮೀಪಿಸಿದೆ. ಹೀಗಾಗಿ ಇಲ್ಲಿನ ಕನಿಷ್ಠ 65 ರೈಲುಗಳು ಮತ್ತು 21 ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಇನ್ನೂ ದಕ್ಷಿಣ ಕರಾವಳಿ ಪ್ರದೇಶದಲ್ಲಿ ಮಂಗಳವಾರ ಮತ್ತು ಬುಧವಾರದಂದು 53 ಮಾರ್ಗಗಳಲ್ಲಿ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಪೂರ್ವ ಭಾಗದಲ್ಲಿ ಕನಿಷ್ಠ 12 ರೈಲುಗಳ ಸೇವೆ ರದ್ದಾಗಿದೆ ಎಂದು ಪ್ರಾದೇಶಿಕ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಟಿವಿಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಚಂಡಮಾರುತ ಮುನ್ಸೂಚನೆ ಆಲಿಸಿ ಹಾಗೂ ಕರಾವಳಿಯಲ್ಲಿ ಸಮುದ್ರಕ್ಕೆ ಅಪ್ಪಳಿಸುವ ಅಲೆಗಳನ್ನು ಕಂಡೇ ಅದೆಷ್ಟೋ ಕರಾವಳಿ ತೀರ ಪ್ರದೇಶಗಳ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಹಿಂದೆಂದೂ ಇಂತಹ ಪರಿಸ್ಥಿತಿ, ಈ ರೀತಿಯ ಚಂಡಮಾರುತ ಪ್ರಭಾವ ಕಂಡಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ವಿಜಯವಾಡ ಮತ್ತು ವಿಶಾಖಪಟ್ಟಣಂ ವಿಮಾನ ನಿಲ್ದಾಣಗಳಲ್ಲಿ ಕನಿಷ್ಠ 21 ವಿಮಾನಗಳ ಸಂಚಾರ ರದ್ದಾಗಿದೆ. ವಿಜಯವಾಡದಲ್ಲಿ ಇಂದು 5 ಐದು ವಿಮಾನ ಕಾರ್ಯಾಚರಣೆಗೆ ಬ್ರೇಕ್ ಬಿದ್ದಿದೆ. ಅದರಲ್ಲಿ ಇಂಡಿಗೋ (IndiGo) ಸಂಸ್ಥೆಯ ನಾಲ್ಕು ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ (Air India Express) ಒಂದು ವಿಮಾನ ಸೇವೆ ರದ್ದಾಗಿದೆ. ಇದರಿಂದ ಬೆಂಗಳೂರು, ವಿಶಾಖಪಟ್ಟಣಂ, ಚೆನ್ನೈ, ಕಡಪ ಸೇರಿ ವಿವಿಧೆಡೆ ಸಂಚರಿಸುವ ವೈಮಾನಿಕ ಸೇವೆಯಲ್ಲಿ ಅಡಚಣೆ ಉಂಟಾಯಿತು ಎಂದು ಪಿಟಿಐ ವರದಿ ಮಾಡಿದೆ.
ಇಂಡಿಗೋ ಸಂಸ್ಥೆಯ ಮುನ್ನೆಚ್ಚರಿಕೆ ದೃಷ್ಟಿಯಿಂದ ವಿಜಯವಾಡ ಏರ್ ಪೋರ್ಟ್‌ನಿಂದ ಸಂಚರಿಸಬೇಕಿದ್ದ ತನ್ನೆಲ್ಲ 12 ವಿಮಾನಗಳನ್ನು ರದ್ದುಗೊಳಿಸಿದೆ. 'ಫ್ಲೈ91' (Fly91) ಸಂಸ್ಥೆಯ ಕೆಲವು ವಿಮಾನಗಳ ಸೇವೆಯು ಸ್ಥಗಿತಗೊಳಿಸಲಾಗಿದೆ. ಇನ್ನೂ ಬುಧವಾರವು ಇದೇ ಏರ್ ಪೋರ್ಟ್‌ನಿಂದ ಸಂಚರಿಸಬೇಕಿದ್ದ ಒಟ್ಟು 15 ವಿಮಾನಗಳ ಸಂಚಾರ ರದ್ದಾಗಿದೆ ಎಂದು ಏರ್ ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ವಿಶಾಖಪಟ್ಟಣಂ ನಗರದ ಏರ್ ಪೋರ್ಟ್‌ನಿಂದ ಹೊರಡಬೇಕಿದ್ದ 16 ವಿಮಾನಗಳ ಸಂಚಾರ ಇಂದು ಮಂಗಳವಾರ ರದ್ದುಗೊಂಡಿದೆ. ಬುಧವಾರವು ಇದೇ ರೀತಿ ಹತ್ತಾರು ವಿಮಾನಗಳ ಸಂಚಾರ ರದ್ದಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬುಧವಾರ ನಸುಕಿನ ಜಾವ ಭೂಭಾಗಕ್ಕೆ ಅಪ್ಪಳಿಸುತ್ತೆ ಸೈಕ್ಲೋನ್
ಬುಧವಾರ ಬೆಳಗ್ಗೆ 'ಅರ್ನಾಬ್' ಚಂಡಮಾರುತವು ಭೀಕರ ಬಿರುಗಾಳಿಯೊಂದಿಗೆ ಆಂಧ್ರ ಮತ್ತು ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ. ನಿರೀಕ್ಷೆಗಿಂತ ಮುಂಚಿತವಾಗಿ, ಅಂದರೆ ಬುಧವಾರ ನಸುಕಿನ ಜಾವ 2 ರಿಂದ 4 ಗಂಟೆಯ ನಡುವೆ ಕರಾವಳಿ ಅಪ್ಪಳಿಸುವ ಸಾಧ್ಯತೆ ಇದೆ. ಆಂಧ್ರ ಕರಾವಳಿ, ರಾಯಲ್‌ಸೀಮಾ, ತೆಲಂಗಾಣ, ಒಡಿಶಾ ಭಾಗಗಳಲ್ಲಿ ಅಕ್ಟೋಬರ್ 28ರಿಂದ ಧಾರಾಕಾರ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (IMD) ತಿಳಿಸಿದೆ.
ಕರಾವಳಿ ರಾಜ್ಯಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಸೈಕ್ಲೋನ್ ಭೂಭಾಗಕ್ಕೆ ಸಮೀಪಿಸುತ್ತಿದ್ದಂತೆ ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್‌ಗಢ ಮತ್ತು ಉತ್ತರ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಎಎಂಡಿ ಎಚ್ಚರಿಕೆ ಕೊಡಲಾಗಿದೆ.
ಅಕ್ಟೋಬರ್ 28 ಮತ್ತು 29 ರಂದು ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ, ಜಾರ್ಗ್ರಾಮ್, ಪಶ್ಚಿಮ ಮೇದಿನಿಪುರ, ಹೌರಾ ಮತ್ತು ಕೋಲ್ಕತ್ತಾದಲ್ಲಿ ಸಾಧಾರಣ ಮಳೆ ಎಚ್ಚರಿಕೆ ಕೊಡಲಾಗಿದೆ. ಉತ್ತರ ಬಂಗಾಳದ ಡಾರ್ಜಿಲಿಂಗ್, ಕಾಲಿಂಪಾಂಗ್, ಅಲಿಪುರ್‌ದುವಾರ್ ಮತ್ತು ಜಲ್ಪೈಗುರಿ ಜಿಲ್ಲೆಗಳಲ್ಲಿ ಭಾರೀ ಮಳೆ ಅಗಲಿದೆ.


Click it and Unblock the Notifications
