ಬಿಡುಗಡೆಗೂ ಮುನ್ನ ನೋಟಿನ ಫೋಟೋ: ತನಿಖೆಗೆ ನಿರ್ಧಾರ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ನವೆಂಬರ್ 11: 2,000 ರುಪಾಯಿ ಮುಖಬೆಲೆಯ ಹೊಸ ನೋಟಿನ ಬಿಡುಗಡೆ ಬಗ್ಗೆ ಪ್ರಧಾನಿ ಮೋದಿ ಘೋಷಣೆ ಮಾಡುವ ಮುನ್ನವೇ ಆ ನೋಟಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಬಗ್ಗೆ ತನಿಖೆ ನಡೆಸಲು ಸರಕಾರ ನಿರ್ಧರಿಸಿದೆ. 500, 1000 ರುಪಾಯಿ ನೋಟು ರದ್ದು ಬಗ್ಗೆ ಪ್ರಧಾನಿ ಘೋಷಣೆಗೂ ಮುನ್ನವೇ 2,000 ರುಪಾಯಿ ನೋಟಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿತ್ತು.

500, 1000 ರುಪಾಯಿ ನೋಟು ರದ್ದು ಮಾಡಬೇಕು ಎಂಬ ನಿರ್ಧಾರವನ್ನು ಕೆಲವು ತಿಂಗಳ ಹಿಂದೆಯೇ ತೆಗೆದುಕೊಳ್ಳಲಾಗಿತ್ತು. ಈ ವಿಚಾರದಲ್ಲಿ ರಹಸ್ಯ ಕಾಯ್ದುಕೊಳ್ಳಲಾಗಿತ್ತು. ಒಂದು ಸಣ್ಣ ಸುಳಿವು ಸಹ ಹೊರಹೋಗದಂತೆ ಸರಕಾರ ನೋಡಿಕೊಂಡಿತ್ತು. ಕೆಲ್ವು ಗುಂಪುಗಳ ಮಧ್ಯೆ ಎರಡು ಸಾವಿರ ನೋಟಿನ ಚಲಾವಣೆ ಬಗ್ಗೆ ಚರ್ಚೆಗಳಾಗಿದ್ದವು, ಫೋಟೋಗಳ ಜತೆಗೆ ಸಂದೇಶಗಳು ಹರಿದಾಡಿದ್ದವು.[ಮುದ್ರಣವಾಗಿದೆಯೇ ರೂ.2 ಸಾವಿರ ಮುಖಬೆಲೆಯ ನೋಟು?]

Currency note

ಫೋಟೋಗಳು ಹೊರಬಂದಿದ್ದರೆ ಅದು ಒಳಗಿನವರ ಕೆಲ್ಸವೇ ಆಗಿರಬೇಕು. ಕೆಲ ತಿಂಗಳ ಹಿಂದೆ ನೋಟು ಮುದ್ರಣ ಆರಂಭವಾದಾಗ ಯಾರೋ ಫೋಟೋ ತೆಗೆದು, ಬಯಲು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ವಿಚಾರದಲ್ಲಿ ತನಿಖೆ ನಡೆಸಲಾಗುವುದು. ನೋಟಿನ ಫೋಟೋ ಬಯಲು ಮಾಡಿದ ವ್ಯಕ್ತಿ ಗಂಭೀರವಾದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸರಕಾರದ ಮೂಲಗಳು ತಿಳಿಸಿವೆ.[ಸದ್ಯದಲ್ಲೆ ಚಲಾವಣೆಗೆ ಬರಲಿದೆ 2,000 ಮುಖಬೆಲೆ ನೋಟು!]

ಈ ವಿಚಾರವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೀವಿ. ಸರಕಾರವು ವ್ಯವಸ್ಥೆಯನ್ನು ಶುದ್ಧೀಕರಿಸುವ ಕೆಲಸಕ್ಕೆ ಮುಂದಾಗಿರುವಾಗ ಈ ರೀತಿ ಕೃತ್ಯಗಳನ್ನು ಮಾಡುವವರನ್ನು ಕ್ಷಮಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The government is probing how images of the new Rs 2,000 note was leaked on the social media even before the Prime Minister made the announcement to ban Rs 500 and Rs 1,000 notes.
Please Wait while comments are loading...