ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಆಸ್ತಿ: ಸಿಬಿಐನಿಂದ ಗೋವಾ ಐಐಟಿ ನಿರ್ದೇಶಕನ ಬಂಧನ

ಅಕ್ರಮ ಆಸ್ತಿ ಪ್ರಕರಣದ ಹಿನ್ನೆಲೆಯಲ್ಲಿ ಗೋವಾದ ಐಐಟಿ ನಿರ್ದೇಶಕರನ್ನು ಸಿಬಿಐ ಬಂಧಿಸಿದೆ. ಈ ಹಿಂದೆ, ಭುವನೇಶ್ವರದ ಐಎಂಎಂಟಿ ಸಂಸ್ಥೆಯ ಮುಖ್ಯಸ್ಥರಾಗಿದ್ದಾಗ ಅಕ್ರಮವೆಸಗಿರುವ ಆರೋಪ ಅವರ ಮೇಲಿದೆ.

By ಅನುಷಾ ರವಿ
|
Google Oneindia Kannada News

ಪಣಜಿ, ಜೂನ್ 21: ಆದಾಯ ಮೀರಿದ ಆಸ್ತಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗೋವಾದ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್ ನ ನಿರ್ದೇಶಕ ಡಾ. ಬರದಾ ಕಾಂತ ಮಿಶ್ರಾ ಅವರನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಬಂಧಿಸಿದ್ದಾರೆ.

ತಮ್ಮ ಆದಾಯಕ್ಕೂ ಮೀರಿದ ಸುಮಾರು 1.14 ಕೋಟಿ ರು.ಗಳಷ್ಟು ಆಸ್ತಿಯನ್ನು ಬರದಾ ಕಾಂತ ಅವರ ಅಕ್ರಮವಾಗಿ ಸಂಪಾದಿಸಿದ್ದಾರೆಂಬುದು ಸಿಬಿಐ ಆರೋಪವಾಗಿದೆ.

IIT-Goa director Dr Barada Kanta Mishra booked by CBI

ಡಾ. ಬರದಾ ಅವರು, ಈ ಹಿಂದೆ ಭುವನೇಶ್ವರದಲ್ಲಿರುವ ಇನ್ಸಿಟಿಟ್ಯೂಟ್ ಆಫ್ ಮಿನರಲ್ಸ್ ಆ್ಯಂಡ್ ಮೆಟೆರಿಯಲ್ಸ್ ಟೆಕ್ನಾಲಜಿಯ (ಐಎಂಎಂಟಿ) ಮುಖ್ಯಸ್ಥರಾಗಿದ್ದಾಗ, ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಅವರು ಈ ಆಸ್ತಿ ಸಂಪಾದಿಸಿದ್ದಾರೆಂಬುದು ಸಿಬಿಐನ ಆರೋಪ.

ಹಾಗಾಗಿ, ಗೋವಾ ಹಾಗೂ ಭುವನೇಶ್ವರದಲ್ಲಿರುವ ಅವರ ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಅನೇಕ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಹೇಳಿದೆ.

ತನ್ನ ಆರೋಪ ಪಟ್ಟಿಯಲ್ಲಿ, 2006ರಲ್ಲಿ 3.39 ಲಕ್ಷ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದ ಡಾ. ಬರವಾ, 2017ರ ಹೊತ್ತಿಗೆ 2.39 ಕೋಟಿ ರು. ಆಸ್ತಿ ಮೌಲ್ಯದ ಒಡೆಯರಾಗಿದ್ದಾರೆ. ಇದರಲ್ಲಿ 1.14 ಕೋಟಿ ರು.ಗಳಷ್ಟು ಆಸ್ತಿ ಅವರ ಆದಾಯ ಮೀರಿದ್ದಾಗಿದೆ ಎಂದು ಸಿಬಿಐ ಹೇಳಿದೆ.

English summary
The Central Bureau of Investigation on Wednesday booked Dr Barada Kanta Mishra, the director of Indian Institute of Technology-Goa over corruption charges. The academician is accused of amassing wealth worth Rs 1.14 crore disproportionate to his known sources of income.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X