• search

ಸಮಸ್ಯೆಗೆ ಹೊಸ ಕಟ್ಟುಕಥೆಯೇ ಪರಿಹಾರ : ರಾಹುಲ್ ವ್ಯಂಗ್ಯ

By Prasad
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಬಿಜೆಪಿಗೆ ವ್ಯಂಗ್ಯವಾಡಿದ ರಾಹುಲ್ | Rahul Gandhi mocks BJP | Oneindia Kannada

    ನವದೆಹಲಿ, ಮಾರ್ಚ್ 22 : ತಮ್ಮ ಬುಡಕ್ಕೇ ತರುವಂಥ ಯಾವುದಾದರೂ ಸಮಸ್ಯೆ ಎದುರಾಯಿತಾ? ತಕ್ಷಣ, ಚರ್ಚೆಯ ದಿಕ್ಕನ್ನೇ ಬೇರೆಡೆ ತಿರುಗಿಸುವಂಥ ಹೊಸ ಕಟ್ಟುಕಥೆಯನ್ನು ಹೆಣೆದುಬಿಡಿ. ಅಲ್ಲಿಗೆ ಚರ್ಚೆಯ ದಿಕ್ಕನ್ನೂ ತಪ್ಪಿಸಿದಂತೆ ಆಯಿತು, ಸಮಸ್ಯೆಗೆ ಪರಿಹಾರವನ್ನೂ ಕಂಡುಹಿಡಿದಂತಾಯಿತು!

    ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

    ಇದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಹೊಸದಾಗಿ ಹುಟ್ಟಿಕೊಂಡಿರುವ ಡೇಟಾ ಕಳ್ಳತನದ ಬಗ್ಗೆ ಭಾರತೀಯ ಜನತಾ ಪಕ್ಷ ಕಾಂಗ್ರೆಸ್ ಮೇಲೆ ಮಾಡುತ್ತಿರುವ ಆರೋಪಕ್ಕೆ ಪ್ರತಿಯಾಗಿ ಕಂಡುಹಿಡಿದಿರುವ ವ್ಯಾಖ್ಯಾನ ಮತ್ತು ವ್ಯಂಗ್ಯ.

    ಫೇಸ್ ಬುಕ್ ಮಾಹಿತಿ ಸೋರಿಕೆ; ರವಿಶಂಕರ್ ಪ್ರಸಾದ್ ವರ್ಸಸ್ ರಮ್ಯಾ

    ಸಿರಿಯಾದಲ್ಲಿ 39 ಅಪಹೃತ ಭಾರತೀಯರು ಸಾವಿಗೀಡಾಗಿರುವ ಸಂಗತಿ ಕೇಂದ್ರ ಸರಕಾರದ ಕೊರಳಿಗೆ ಸುತ್ತಿಕೊಳ್ಳುತ್ತಿದ್ದಂತೆ, ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿರುವ ಬಿಜೆಪಿ ಸರಕಾರ, ಜನರ ಗಮನವನ್ನು ಬೇರೆಡೆ ಸೆಳೆಯಲು ಕೇಂಬ್ರಿಜ್ ಅನಾಲಿಟಿಕಾ ಜೊತೆ ಸೇರಿಕೊಂಡು ಕಾಂಗ್ರೆಸ್ ಡೇಟಾ ಕಳ್ಳತನ ಮಾಡುತ್ತಿದೆ ಎಂದು ಆರೋಪಿಸಿದೆ ಎಂದು ದೂರಿದ್ದಾರೆ.

    If there is problem, BJP invents story : Rahul mocks BJP

    2019ರ ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ನಿಟ್ಟಿನಲ್ಲಿ, ಕೋಟ್ಯಂತರ ಹಣವನ್ನು ವ್ಯಯಿಸಿ, ಕಾಂಗ್ರೆಸ್ ಪಕ್ಷ ಕೇಂಬ್ರಿಜ್ ಅನಾಲಿಟಿಕಾ ಸೇವೆಯನ್ನು ಪಡೆದುಕೊಂಡು, ಡೇಟಾ ಕಳ್ಳತನ ಮಾಡುತ್ತಿರುವುದಲ್ಲದೆ, ರಾಹುಲ್ ಅವರನ್ನು ಪ್ರಧಾನಿಯಾಗಿ ಬಿಂಬಿಸಲು ಎಲ್ಲ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

    ಚಿತ್ರಗಳು : ಶೃಂಗೇರಿಯ ಭಾರತೀ ತೀರ್ಥ ಸ್ವಾಮೀಜಿ ಆಶೀರ್ವಾದ ಪಡೆದ ರಾಹುಲ್

    ಕಾಂಗ್ರೆಸ್ ಕೂಡ ಆರೋಪ ಮಾಡುವಲ್ಲಿ ಹಿಂದೆ ಬಿದ್ದಿಲ್ಲ. 2014ರ ಲೋಕಸಭೆ ಚುನಾವಣೆಯಲ್ಲಿ ಬಹುಮತ ಗಳಿಸಲು ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆಯ ಸಹಾಯವನ್ನು ಪಡೆದುಕೊಂಡು, ಜನರನ್ನು ಮರಳು ಮಾಡಿ ಮತಗಳನ್ನು ಗಿಟ್ಟಿಸಿಕೊಂಡಿತು ಎಂದು ಕಾಂಗ್ರೆಸ್ ಕೂಡ ಗಹನವಾಗ ಆರೋಪ ಮಾಡಿದೆ. ಎರಡೂ ಪಕ್ಷಗಳು ಆರೋಪ ಪ್ರತ್ಯಾರೋಪಗಳನ್ನು ಅಲ್ಲಗಳೆದಿವೆ.

    ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಬ್ರಹ್ಮಾಸ್ತ್ರ!

    ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ ಬೆಂಬಲಿಗರು, 39 ಭಾರತೀಯರ ಹತ್ಯೆಯನ್ನು ಮುಚ್ಚಿಹಾಕಲು ಬಿಜೆಪಿ ಕಟ್ಟುಕಥೆ ಹೆಣೆದಿಲ್ಲ. ಬದಲಾಗಿ, 2017ರ ಅಕ್ಟೋಬರ್ ನಲ್ಲಿಯೇ ರಾಹುಲ್ ಗಾಂಧಿಯವರು ಕೇಂಬ್ರಿಜ್ ಅನಾಲಿಟಿಕಾ 'ಬ್ರಹ್ಮಾಸ್ತ್ರ'ವನ್ನು ಪ್ರಯೋಗಿಸಲು ಸಕಲ ಸಜ್ಜು ನಡೆಸಿದ್ದರು ಎಂಬ ಸಂಗತಿಯನ್ನು ಬಯಲು ಮಾಡಿದ್ದಾರೆ.

    ಕೇಂಬ್ರಿಜ್ ಅನಾಲಿಟಿಕಾ ಎಂಬ ಹೊಸ ಅಸ್ತ್ರದ ಸುತ್ತಮುತ್ತ

    ಕೇಂಬ್ರಿಜ್ ಅನಾಲಿಟಿಕಾ ಭಾರತೀಯ ರಾಜಕೀಯದಲ್ಲಿ ಸಾಕಷ್ಟು ರಾಡಿ ಎಬ್ಬಿಸಿದೆ. ಒಬ್ಬರಿಗೊಬ್ಬರು ವಾಗ್ಬಾಣ ಬಿಡುತ್ತಿದ್ದಾರೆ. ಈ ನಡುವೆ, ಭಾರತೀಯರ ಮಾಹಿತಿ ಸೋರಿಕೆಯಾಗದಂತೆ, ಕಳ್ಳತನವಾಗದಂತೆ ವಾಗ್ದಾನ ನೀಡುವುದಾಗಿ ಫೇಸ್ ಬುಕ್ ಜನಕ ಮಾರ್ಕ್ ಝುಕರ್ಬರ್ಗ್ ಅವರು ಹೇಳಿದ್ದಾರೆ. ಫೇಸ್ ಬುಕ್ಕನ್ನು ಕೋಟ್ಯಂತರ ಭಾರತೀಯರು ದಿನನಿತ್ಯ ಬಳಸುತ್ತಿದ್ದಾರೆ. ಈಗ ನಮ್ಮ ಖಾಸಗಿತನವೇ ಹರಾಜಾಗುತ್ತಿರುವ ಸಂದರ್ಭ ಬಂದಾಗ, ಬಳಸುವುದೋ ಬೇಡವೋ ಎಂಬ ಜಿಜ್ಞಾಸೆಯಲ್ಲೂ ಕೆಲವರಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    AICC president Rahul Gandhi has mocked BJP by saying, if there is problem and BJP is caught lying, then it invents story on Congress to hide their failure. BJP has made allegations that Congress has taken help from Cambridge Analytica for stealing data.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more