ರಸ್ತೆಯಲ್ಲಿ ನಮಾಜ್, ಪೊಲೀಸ್ ಠಾಣೆ ಜನ್ಮಾಷ್ಟಮಿ: ಯೋಗಿ ಏನಂದ್ರು?

By: ವಿಕಾಸ್ ನಂಜಪ್ಪ
Subscribe to Oneindia Kannada

ಈದ್ ಸಂದರ್ಭದಲ್ಲಿ ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ತಡೆಯಲು ನನ್ನಿಂದ ಸಾಧ್ಯವಿಲ್ಲ ಅಂತಾದರೆ, ಪೊಲೀಸ್ ಠಾಣೆಗಳಲ್ಲಿ ಜನ್ಮಾಷ್ಟಮಿ ಆಚರಿಸುವುದನ್ನು ತಡೆಯುವ ಹಕ್ಕೂ ನನಗಿಲ್ಲ.- ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆಯಿದು.

ಗೋರಖಪುರ ದುರಂತ: ಯುಪಿ ಸರಕಾರಕ್ಕೆ ಮಾನವ ಹಕ್ಕು ಆಯೋಗದಿಂದ ನೋಟಿಸ್

ಈಚೆಗೆ ಕನ್ವಾರ ಯಾತ್ರೆಯಲ್ಲಿ ಮೈಕ್ರೋಫೋನ್, ಡಿಜೆ ಹಾಗೂ ಮ್ಯೂಸಿಕ್ ಸಿಸ್ಟಮ್ ಬಳಕೆ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಯೋಗಿ ಆದಿತ್ಯನಾಥ್, ಎಲ್ಲ ಕಡೆಯೂ ಮೈಕ್ರೋಫೋನ್ ಬಳಕೆ ನಿಷೇಧಿಸಲಾಗಿದೆ ಎಂಬುದನ್ನು ಖಾತ್ರಿ ಪಡಿಸಿ. ಎಲ್ಲ ಕಡೆಯೂ ಮಾಡಲಿಕ್ಕೆ ಆಗಲಿಲ್ಲ ಅಂದರೆ ಯಾತ್ರೆಯಲ್ಲಿ ಈ ಹಿಂದೆ ಹೇಗೆ ಕಾರ್ಯಕ್ರಮ ನಡೆಯುತ್ತಿತ್ತೋ ಹಾಗೇ ನಡೆಯಲಿ ಎಂದಿದ್ದಾರೆ.

If I can't stop namaz on the streets, how can I stop Janmashtami at police stations: Yogi

ಇದು ಕನ್ವಾರ ಯಾತ್ರೆಯೋ ಅಥವಾ ಅಂತ್ಯಸಂಸ್ಕಾರವೋ? ಕುಣಿದು-ಕುಪ್ಪಳಿಸಿ, ಹಾಡು ಹಾಡದಿದ್ದರೆ, ಮೈಕ್ ಬಳಸದಿದ್ದರೆ ಅದೆಂಥ ಕನ್ವಾರ ಯಾತ್ರೆ ಎಂದು ಯೋಗಿ ಪ್ರಶ್ನೆ ಮಾಡಿದ್ದಾರೆ.

ದೇಶದಲ್ಲಿ ಎಲ್ಲರಿಗೂ ಹಬ್ಬ ಆಚರಿಸುವ ಸ್ವಾತಂತ್ರ್ಯ ಇದೆ. ಕ್ರಿಸ್ ಮಸ್ ಆಚರಿಸುತ್ತೀರಾ ಆಚರಿಸಿ. ನಮಾಜ್ ಮಾಡ್ತೀರಾ ಮಾಡಿ. ಆದರೆ ಎಲ್ಲವೂ ಕಾನೂನು ವ್ಯಾಪ್ತಿಯೊಳಗೆ ಇರಬೇಕು ಎಂದು ಆದಿತ್ಯನಾಥ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
If I cannot stop namaz on the roads during Eid, I have not right to stop Janmashtami celebrations are police stations. This statement was made by Uttar Pradesh Chief Minister Yogi Adityanath.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ