ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ನಲ್ಲಿ ಎಎಪಿ ಇಲ್ಲದಿದ್ದರೆ ಕಾಂಗ್ರೆಸ್ಸಿನದ್ದೇ ಗೆಲುವು

|
Google Oneindia Kannada News

ಅಹ್ಮದಾಬಾದ್, ಡಿಸೆಂಬರ್ 16: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷವು ಇಲ್ಲದಿದ್ದರೆ ಆಡಳಿತಾರೂಢ ಬಿಜೆಪಿಯನ್ನು ಕಾಂಗ್ರೆಸ್ ಪಕ್ಷವೇ ಸೋಲಿಸಬಹುದಿತ್ತು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ. ಹಳೆಯ ಪಕ್ಷವಾಗಿರುವ ಕಾಂಗ್ರೆಸ್ ಕಳಪೆ ಪ್ರದರ್ಶನ ತೋರುವಲ್ಲಿ ಎಎಪಿ ಪ್ರಮುಖ ಪಾತ್ರ ವಹಿಸಿದೆ ಎಂದರು.

"ಗುಜರಾತ್‌ನಲ್ಲಿ ಎಎಪಿ ಪ್ರಾಕ್ಸಿಯಾಗಿತ್ತು," ಎಂದು ಅವರು ಹೇಳಿದರು. ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ಬಿಜೆಪಿಯ "ಬಿ ಟೀಮ್" ಎಂಬ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದರು. ಕಾಂಗ್ರೆಸ್‌ಗೆ ಹಾನಿ ಮಾಡುವಲ್ಲಿ ಎಎಪಿ ಪ್ರಮುಖ ಪಾತ್ರವಹಿಸಿದೆ ಎಂದರು. ಆದರೆ ಈ ಆರೋಪಗಳನ್ನು ಎಎಪಿ ತಳ್ಳಿಹಾಕಿದ್ದು, ಗುಜರಾತ್‌ಗೆ ಪ್ರವೇಶಿಸುವುದನ್ನು ತಡೆಯಲು ಬಿಜೆಪಿಯ ಜೊತೆ ನಿಂತಿರುವುದು ಕಾಂಗ್ರೆಸ್ ಎಂದು ಹೇಳಿದೆ.

ಮಹಾತ್ಮ ಗಾಂಧಿ ಜೊತೆಗೆ ಹೋಲಿಕೆ ಮಾಡಬೇಡಿ ಎಂದ ರಾಹುಲ್ ಗಾಂಧಿಮಹಾತ್ಮ ಗಾಂಧಿ ಜೊತೆಗೆ ಹೋಲಿಕೆ ಮಾಡಬೇಡಿ ಎಂದ ರಾಹುಲ್ ಗಾಂಧಿ

ಬಿಜೆಪಿಯು ಭಾರತವನ್ನು ವಿಭಜಿಸುತ್ತಿದ್ದು ದ್ವೇಷವನ್ನು ಹರಡುತ್ತಿದೆ ಎಂದು ಮತ್ತೊಮ್ಮೆ ಆರೋಪಿಸಿದ ರಾಹುಲ್ ಗಾಂಧಿ, ಬಿಜೆಪಿಯ ಮೇಲೆ ವಾಗ್ದಾಳಿ ನಡೆಸಿದರು. ಅವರು ಯಾರು, ಅವರು ಭಾರತವನ್ನು ವಿಭಜಿಸುತ್ತಾರೆ ಎಂಬುದರ ಬಗ್ಗೆ ಬಿಜೆಪಿ ಸ್ಪಷ್ಟವಾಗಿದೆ. ಅವರು ದ್ವೇಷವನ್ನು ಹರಡುತ್ತಾರೆ ಮತ್ತು ಅವರು ಯಾರೆಂಬುದರ ಬಗ್ಗೆ ಅವರು ತುಂಬಾ ಸ್ಪಷ್ಟವಾಗಿದ್ದಾರೆ. ಕಾಂಗ್ರೆಸ್‌ಗೆ ಅದು ಏನು ಅಲ್ಲ ಎಂದು ಅರ್ಥವಾದ ದಿನ, ನಾವು ಎದುರಿಸುವ ಪ್ರತಿ ಚುನಾವಣೆಯನ್ನು ಗೆಲ್ಲುತ್ತೇವೆ," ಎಂದು ರಾಹುಲ್ ಗಾಂಧಿ ಹೇಳಿದರು.

ಪ್ರಾದೇಶಿಕ ಪಕ್ಷಗಳ ಬಗ್ಗೆ ಇದೆಂಥಾ ರಾಗಾ?

ಪ್ರಾದೇಶಿಕ ಪಕ್ಷಗಳ ಬಗ್ಗೆ ಇದೆಂಥಾ ರಾಗಾ?

ಬಿಜೆಪಿಯನ್ನು ಸೋಲಿಸುವುದಕ್ಕೆ ಪ್ರಾದೇಶಿಕ ಪಕ್ಷಗಳಿಂದ ಸಾಧ್ಯವಿಲ್ಲ ಎಂದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪ್ರಾದೇಶಿಕ ಪಕ್ಷಗಳ ಬಗ್ಗೆ ಹೇಳುವುದಾದರೆ ಬಿಜೆಪಿಯನ್ನು ಸೋಲಿಸುವ ದೂರದೃಷ್ಟಿ ಅವರಿಗಿಲ್ಲ ಎಂದು ರಾಹುಲ್ ಗಾಂಧಿ ಕಿಡಿ ಕಾರಿದರು.

ಆಪ್ ಕುರಿತು ಕಿಡಿ ಕಾರಿದ್ದ ಅಶೋಕ್ ಗೆಹ್ಲೋಟ್

ಆಪ್ ಕುರಿತು ಕಿಡಿ ಕಾರಿದ್ದ ಅಶೋಕ್ ಗೆಹ್ಲೋಟ್

ಗುಜರಾತ್‌ನಲ್ಲಿ ಹಳೆಯ ಪಕ್ಷದ ಚುನಾವಣಾ ಉಸ್ತುವಾರಿಯಾಗಿದ್ದ ಅಶೋಕ್ ಗೆಹ್ಲೋಟ್, ಈ ಹಿಂದೆ ಕೂಡ ಅದೇ ರೀತಿ ಹೇಳಿಕೆ ನೀಡಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಗೆ ಎಎಪಿ ಪ್ರಮುಖ ಕಾರಣವಾಗಿತ್ತು. ಎಎಪಿ "ಎಲ್ಲಿ ಹೋದರೂ ಸುಳ್ಳು ಹೇಳುವುದು" ಎಂದು ಆರೋಪಿಸಿದ್ದ ಗೆಹ್ಲೋಟ್, ಅರವಿಂದ್ ಕೇಜ್ರಿವಾಲ್ ಪಕ್ಷವು ಕಾಂಗ್ರೆಸ್ಸಿಗೆ ಹೆಚ್ಚು ಹಾನಿ ಮಾಡಿದ್ದಾರೆ" ಎಂದು ದೂಷಿಸಿದ್ದರು.

"ಚುನಾವಣಾ ಬಾಂಡ್‌ಗಳು ಒಂದು ದೊಡ್ಡ ಹಗರಣವಾಗಿದೆ. ಕಾಂಗ್ರೆಸ್‌ಗೆ ದೇಣಿಗೆ ನೀಡುವವರಿಗೆ ಬೆದರಿಕೆ ಇದೆ. ಬಿಜೆಪಿಯು ಆ ಮೂಲಕ ಏಕಪಕ್ಷೀಯ ಹಣವನ್ನು ಪಡೆಯುತ್ತಿದೆ," ಎಂದು ಅಶೋಕ್ ಗೆಹ್ಲೋಟ್ ಹೇಳಿದರು. ಹೊಸ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆಯಿರುವ ತನ್ನ ಪ್ರಮುಖ ಪ್ರತಿಸ್ಪರ್ಧಿ ಕಾಂಗ್ರೆಸ್ ಅನ್ನು ಬಿಜೆಪಿ ಸೋಲಿಸಿತು, ಗುಜರಾತ್‌ನಲ್ಲಿ ಐತಿಹಾಸಿಕ ಗೆಲುವಿನೊಂದಿಗೆ ಸತತ ಏಳನೇ ಅವಧಿಗೆ ಉಳಿಸಿಕೊಂಡಿತು.

ಗುಜರಾತ್‌ನಲ್ಲಿ ಖಾತೆ ಓಪನ್ ಮಾಡಿದ ಬಿಜೆಪಿ

ಗುಜರಾತ್‌ನಲ್ಲಿ ಖಾತೆ ಓಪನ್ ಮಾಡಿದ ಬಿಜೆಪಿ

ಎಎಪಿ ಬಿಜೆಪಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದು ಸ್ವತಂತ್ರವಾಗಿ ಸರ್ಕಾರ ರಚಿಸುವುದಾಗಿ ಹೇಳಿಕೊಂಡಿತ್ತು. ಇದು ಐದು ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಖಾತೆಯನ್ನು ತೆರೆಯಿತು. ಇದರ ಬೆನ್ನಲ್ಲೇ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ವದಂತಿ ಹಬ್ಬಿತ್ತು.

ಗುಜರಾತ್‌ನಲ್ಲಿ ಬಿಜೆಪಿಗೆ 7ನೇ ಬಾರಿ ಅಧಿಕಾರ

ಗುಜರಾತ್‌ನಲ್ಲಿ ಬಿಜೆಪಿಗೆ 7ನೇ ಬಾರಿ ಅಧಿಕಾರ

ಗುಜರಾತ್‌ನ ಒಟ್ಟು 182 ಸ್ಥಾನಗಳಲ್ಲಿ ಬಿಜೆಪಿಯು 156 ಸ್ಥಾನಗಳನ್ನು ಗೆದ್ದುಕೊಂಡಿತು. ಇದು ಗುಜರಾತ್‌ನ ಚುನಾವಣಾ ಇತಿಹಾಸದಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ಸಿಗದ ಅತ್ಯುತ್ತಮ ಸ್ಥಾನವಾಗಿದೆ. ಇದು 1985ರ ಚುನಾವಣೆಯಲ್ಲಿ ಕಾಂಗ್ರೆಸ್‌ನ 37 ವರ್ಷಗಳ ಹಳೆಯ ದಾಖಲೆಯಾದ 149 ಸ್ಥಾನಗಳನ್ನು ಹಿಂದೆ ಹಾಕಿದೆ. ಇಲ್ಲಿಯವರೆಗೆ ಬಿಜೆಪಿಯ ಅತ್ಯುತ್ತಮ ಸ್ಥಾನಗಳ ಸಂಖ್ಯೆ 127 ಆಗಿತ್ತು. 2002ರಲ್ಲಿ ಬಿಜೆಪಿಯು 127 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದರ ಮಧ್ಯೆ ಕಾಂಗ್ರೆಸ್, ಕೇವಲ 17 ಸ್ಥಾನಗಳನ್ನು ಪಡೆದುಕೊಂಡಿತ್ತು.

English summary
"If AAP Wasn't in Gujarat, We Would Have Beaten BJP In assembly election,"says Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X