ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಸಿಐಸಿಐ ಬ್ಯಾಂಕ್ ಹಗರಣ: ಬೆಳಗ್ಗೆ 4ರ ತನಕ ಚಂದಾ ಕೊಚ್ಚರ್ ವಿಚಾರಣೆ

|
Google Oneindia Kannada News

ಮುಂಬೈ, ಮಾರ್ಚ್ 2: ಐಸಿಐಸಿಐ ಬ್ಯಾಂಕ್ ನ ಮಾಜಿ ಸಿಇಒ ಚಂದಾ ಕೊಚ್ಚರ್ ಅವರನ್ನು ಶನಿವಾರ ನಸುಕಿನ ನಾಲ್ಕು ಗಂಟೆ ತನಕ ಸಾಲ ಪ್ರಕರಣದ ವಿಚಾರವಾಗಿ ಜಾರಿ ನಿರ್ದೇಶನಾಲಯ ವಿಚಾರಣೆ ಮಾಡಿತ್ತು. ಶನಿವಾರ ಮಧ್ಯಾಹ್ನವೇ ಮತ್ತೆ ತನಿಖಾ ಸಂಸ್ಥೆಯ ಕಚೇರಿಗೆ ಮಧ್ಯಾಹ್ನ ಮತ್ತೆ ಬಂದ ಅವರು, ಅರ್ಧ ಗಂಟೆಯ ನಂತರ ಹಿಂತಿರುಗಿದ್ದಾರೆ.

ಆಕೆ ವಾಪಸ್ ತೆರಳಿದರೂ ಕೊಚ್ಚರ್ ಪತಿ ದೀಪಕ್ ಹಾಗೂ ವಿಡಿಯೋಕಾನ್ ನ ಕಾರ್ಯನಿರ್ವಾಹಕ ನಿರ್ದೇಶಕ ವೇಣುಗೋಪಾಲ್ ಧೂತ್ ಅವರು ಬಹಳ ಹೊತ್ತು ತನಿಖಾ ಕಚೇರಿಯಲ್ಲೇ ಇದ್ದರು ಎಂದು ಮೂಲಗಳು ತಿಳಿಸಿವೆ.

ಐಸಿಐಸಿಐ ಮಾಜಿ ಸಿಇಒ ಚಂದಾ ಕೊಚ್ಚಾರ್ ಮನೆ ಮೇಲೆ 'ಇಡಿ' ದಾಳಿಐಸಿಐಸಿಐ ಮಾಜಿ ಸಿಇಒ ಚಂದಾ ಕೊಚ್ಚಾರ್ ಮನೆ ಮೇಲೆ 'ಇಡಿ' ದಾಳಿ

ತನಿಖಾ ಸಂಸ್ಥೆಗಳಿಂದ ಚಂದಾ ಕೊಚ್ಚರ್ ಹಾಗೂ ವೇಣುಗೋಪಾಲ್ ರ ಮನೆ ಹಾಗೂ ಕಚೇರಿಗಳ ಶೋಧ ನಡೆಸಿದ ನಂತರ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿಯಾಗಿತ್ತು. ಶುಕ್ರವಾರ ರಾತ್ರಿ ಎಂಟು ಗಂಟೆ ತನಕ ಕೊಚ್ಚರ್ ಅವರಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಯಿತು. ವೇಣುಗೋಪಾಲ್ ರನ್ನು ಶುಕ್ರವಾರ ರಾತ್ರಿ ಹನ್ನೊಂದರ ತನಕ ವಿಚಾರಣೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.

ICICI bank former CEO Chanda Kochhar, questioned till 4 AM

ಸಿಬಿಐನಿಂದ ಚಂದಾ ಕೊಚ್ಚರ್ ಲುಕ್ ಔಟ್ ಸುತ್ತೋಲೆ ಹೊರಡಿಸಲಾಗಿತ್ತು. ಆಕೆಯ ಪತಿ ದೀಪಕ್ ಹಾಗೂ ವೇಣುಗೋಪಾಲ್ ಗೆ ಮತ್ತೊಮ್ಮೆ ನೀಡಲಾಗಿತ್ತು. ಸಾಧಾರಣವಾಗಿ ತನಿಖೆ ಎದುರಿಸುತ್ತಿರುವವರ ಚಲನ-ವಲನದ ಮೇಲೇ ವಿಮಾನ ನಿಲ್ದಾಣಗಳಲ್ಲಿ ಕಣ್ಣಿರಿಸಲು ಈ ಸುತ್ತೋಲೆ ಹೊರಡಿಸಲಾಗುತ್ತದೆ.

ಐಸಿಐಸಿಐ ಬ್ಯಾಂಕ್ ನಿಂದ ವಿಡಿಯೋಕಾನ್ ಗೆ ಸಾಲ ನೀಡಿದ ಪ್ರಕ್ರಿಯೆಯಲ್ಲಿ ನೇತೃತ್ವ ವಹಿಸಿದ್ದ ಚಂದಾ ಕೊಚ್ಚರ್, ಆಕೆಯ ಪತಿ ದೀಪಕ್ ಹಾಗೂ ವಿಡಿಯೋಕಾನ್ ನ ವೇಣುಗೋಪಾಲ್ ಮಧ್ಯದ ವ್ಯವಹಾರ ನಂಟಿನ ಬಗ್ಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಐಸಿಐಸಿಐ-ವಿಡಿಯೋಕಾನ್ ಕೇಸ್ : ಚಂದಾ ಕೊಚ್ಚರ್ ಗೆ ಲುಕ್ ಔಟ್ ನೋಟಿಸ್ಐಸಿಐಸಿಐ-ವಿಡಿಯೋಕಾನ್ ಕೇಸ್ : ಚಂದಾ ಕೊಚ್ಚರ್ ಗೆ ಲುಕ್ ಔಟ್ ನೋಟಿಸ್

ಐಸಿಐಸಿಐ ಬ್ಯಾಂಕ್ ನಿಂದ ವಿಡಿಯೋಕಾನ್ ಗೆ ಇನ್ನೂರು ಕೋಟಿ ರುಪಾಯಿ ಸಾಲ ಮಂಜೂರು ಮಾಡಿದ ಮರುದಿನವೇ ದಿ ಕೊಚ್ಚರ್ ರ ಪತಿ ಆರಂಭಿಸಿದ ಕಂಪನಿಯಲ್ಲಿ ವೇಣುಗೋಪಾಲ್ ಅರವತ್ನಾಲ್ಕು ಕೋಟಿ ಹೂಡಿಕೆ ಮಾಡಿದ್ದಾರೆ. ಈ ಸಾಲ ಮೊತ್ತವು ವಿಡಿಯೋಕಾನ್ ಬ್ಯಾಂಕ್ ಗಳ ಒಕ್ಕೂಟಗಳ ಬಲಿ ಅರ್ಜಿ ಹಾಕಿಕೊಂಡಿದ್ದ ನಲವತ್ತು ಸಾವಿರ ಕೋಟಿ ರುಪಾಯಿ ಸಾಲದ ಮೊತ್ತದಲ್ಲಿ ಒಂದು ಭಾಗವಾಗಿತ್ತು.

ಸಾಲ ನೀಡುವ ಸಲುವಾಗಿ ಇಪ್ಪತ್ತು ಬ್ಯಾಂಕ್ ಗಳು ಸೇರಿ ಮಾಡಿಕೊಂಡಿದ್ದ ಒಕ್ಕೂಟದ ನೇತೃತ್ವವನ್ನು ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ವಹಿಸಿತ್ತು. ಮೂರು ಸಾವಿರದ ಇನ್ನೂರಾ ಐವತ್ತು ಕೋಟಿ ರುಪಾಯಿ ಐಸಿಐಸಿಐ ಬ್ಯಾಂಕ್ ಗೆ ಅನುತ್ಪಾದಕ ಆಸ್ತಿ (ಎನ್ ಪಿಎ) ಆಯಿತು. ಕಳೆದ ತಿಂಗಳು ಮೂವರು ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸಿದ ಮೇಲೆ, ಸದ್ಯಕ್ಕೆ ಮನೆ ಹಾಗೂ ಕಚೇರಿಗಳಲ್ಲಿ ಸಿಕ್ಕಂಥ ಸಾಕ್ಷಿಗಳನ್ನು ಪರೀಕ್ಷಿಸಲಾಗುತ್ತಿದೆ.

ಐಸಿಐಸಿಐ-ವಿಡಿಯೋಕಾನ್ ವಿವಾದ: ಸೇವೆಯಿಂದ ಚಂದಾ ಕೊಚ್ಚಾರ್ ವಜಾಐಸಿಐಸಿಐ-ವಿಡಿಯೋಕಾನ್ ವಿವಾದ: ಸೇವೆಯಿಂದ ಚಂದಾ ಕೊಚ್ಚಾರ್ ವಜಾ

ಅಕ್ರಮ ಹಣ ವರ್ಗಾವಣೆ ಆಯಾಮದಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಎಫ್ ಐಆರ್ ದಾಖಲಿಸಲಾಗಿದೆ. ವಿಡಿಯೋಕಾನ್ ಗೆ ಸಾಲ ನೀಡುವ ಪ್ರಕ್ರಿಯೆಯಲ್ಲಿ ಅವರಿಗೆ ಅನುಕೂಲವಾಗಿ ನಡೆದುಕೊಂಡ ಆರೋಪದಲ್ಲಿ ಕಳೆದ ವರ್ಷ ಅಕ್ಟೋಬರ್ ನಲ್ಲಿ ಐಸಿಐಸಿಐ ಬ್ಯಾಂಕ್ ನ ಸಿಇಒ ಹಾಗೂ ಎಂ.ಡಿ. ಹುದ್ದೆಯನ್ನು ಚಂದಾ ಕೊಚ್ಚರ್ ತ್ಯಜಿಸಿದ್ದರು.

English summary
Hours after the Enforcement Directorate questioned former ICICI Bank chief executive Chanda Kochhar till 4 am this morning in a loan case, she was back at the probe agency's office at noon today. She left half-an-hour later. Her husband Deepak Kochhar and Videocon managing director Venugopal Dhoot are still at the Enforcement Directorate's office, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X