IAS Pooja Khedkar: ಐಎಎಸ್ ಪೂಜಾ ಖೇಡ್ಕರ್ ಗೂಂಡಾಗಿರಿ- ಪಿಸ್ತೂಲು ಹಿಡಿದು ರೈತರಿಗೆ ಬೆದರಿಕೆ!
ಪುಣೆ ಜುಲೈ 13: ಪ್ರೊಬೆಷನರಿ ಐಎಎಸ್ ಪೂಜಾ ಖೇಡ್ಕರ್ ಅವರು ಗೂಂಡಾಗಿರಿ ನಡೆಸುತ್ತಿರುವ ದೂರುಗಳು ಬೆಳಕಿಗೆ ಬಂದಿವೆ. ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದರಲ್ಲಿ ಆಕೆ ತನ್ನ ಕೈಯಲ್ಲಿ ಬಂದೂಕು ಹಿಡಿದು ಸ್ಥಳೀಯರಿಗೆ ಬೆದರಿಕೆ ಹಾಕುತ್ತಿರುವುದು ಕಂಡು ಬಂದಿದೆ.
ಹೌದು... ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ಬಂದೂಕು ತೋರಿಸಿ ಬೆದರಿಕೆ ಹಾಕಿ ಅಧಿಕಾರ ದುರ್ಬಳಕೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ವೇಳೆ ಕ್ರಮ ಕೈಗೊಳ್ಳಲು ಹೋದ ಪೊಲೀಸರಿಗೂ ಪೂಜಾ ಖೇಡ್ಕರ್ ತಾಯಿ ಮನೋರಮಾ ಖೇಡ್ಕರ್ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ರೈತರಿಗೆ ಬೆದರಿಕೆ ಹಾಕಿದ ಬೆನ್ನಲ್ಲೆ ಪೂಜಾ ಹಾಗೂ ಅವರ ತಾಯಿ ವಿರುದ್ಧ ಸೆಕ್ಷನ್ 323, 504, 506, 143, 144, 147, 148, 149 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Manorama Khedkar, mother of the infamous IAS officer Pooja Khedkar, was witnessed arrogantly challenging police personnel and reporters, while also making legal threats, following her attempt to take over land using a gun and private hired bouncers. It appears that the entire… pic.twitter.com/ZkuQnNRfNJ
— Vaibhav Kokat (@ivaibhavk) July 12, 2024
ಮಹಾರಾಷ್ಟ್ರದ ಪುಣೆಯ ಮುಲ್ಶಿ ತಹಸಿಲ್‌ನಲ್ಲಿ ರೈತರ ಜಮೀನನ್ನು ಬಲವಂತವಾಗಿ ಕಬಳಿಸುವ ಪ್ರಯತ್ನದಲ್ಲಿ ಪೂಜಾ ಖೇಡ್ಕರ್ ಹಾಗೂ ಅವರ ತಾಯಿ ಮನೋರಮಾ ಖೇಡ್ಕರ್ ಅವರು ರೈತರಿಗೆ ಪಿಸ್ತೂಲ್‌ನಿಂದ ಬೆದರಿಸಿದ್ದಾರೆ.
ವರದಿಗಳ ಪ್ರಕಾರ, ಪೂಜಾ ಖೇಡ್ಕರ್ ಅವರ ತಂದೆ ಮಾಜಿ ಸರ್ಕಾರಿ ಅಧಿಕಾರಿ ದಿಲೀಪ್ ಖೇಡ್ಕರ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಕೋಟ್ಯಂತರ ಮೌಲ್ಯದ ಸಂಪತ್ತನ್ನು ಸಂಪಾದಿಸಿದ್ದಾರೆ. ಈ ಅವಧಿಯಲ್ಲಿ ಮುಲ್ಶಿ ತಹಸಿಲ್‌ನಲ್ಲಿ 25 ಎಕರೆ ಜಮೀನನ್ನು ಖರೀದಿಸಿದ್ದರು.
ಬಲವಂತವಾಗಿ ಭೂಮಿ ಕಬಳಿಕೆ ಆರೋಪ
ಆದರೆ ಖೇಡ್ಕರ್ ಕುಟುಂಬ ನೆರೆಯ ರೈತರಿಂದ ಬಲವಂತವಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ತಮ್ಮ ಭೂಮಿಯನ್ನು ವಿಸ್ತರಿಸಲು ಪ್ರಯತ್ನಿಸಿದೆ ಎಂದು ಆರೋಪಿಸಲಾಗಿದೆ.
ರೈತರು ಪ್ರತಿಭಟನೆ ನಡೆಸಿದಾಗ, ಬೌನ್ಸರ್‌ಗಳೊಂದಿಗೆ ಮನೋರಮಾ ಖೇಡ್ಕರ್ ರೈತರಿಗೆ ಪಿಸ್ತೂಲ್ ತೋರಿಸಿದರು. ಎರಡು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಅನಗತ್ಯ ಒತ್ತಡದಿಂದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಪ್ರಯತ್ನ ವಿಫಲವಾಗಿದೆ ಎಂದು ಸ್ಥಳೀಯ ರೈತರು ಹೇಳುತ್ತಾರೆ.
ಐಎಎಸ್ ಪೂಜಾ ವಿವಾದ
ಮನೋರಮಾ ಖೇಡ್ಕರ್ ತನ್ನ ಪಿಸ್ತೂಲ್ ತೋರಿಸುತ್ತಾ ರೈತರಿಗೆ ಬೆದರಿಕೆ ಹಾಕುತ್ತಿರುವುದನ್ನು ವಿಡಿಯೋ ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗಿದೆ. ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಮತ್ತು ಅವರ ಕುಟುಂಬ ಸದಸ್ಯರು ಅಧಿಕಾರ ಮತ್ತು ಪ್ರಭಾವದ ದುರುಪಯೋಗದ ಬಗ್ಗೆ ಕಳವಳ ವ್ಯಕ್ತವಾಗಿದೆ.
ಬೀಸುವ ಪಿಸ್ತೂಲು
ಘಟನೆಯಿಂದ ಸ್ಥಳೀಯ ರೈತರು ಮತ್ತು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದು, ಸಮಗ್ರ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ವೀಡಿಯೊ ವೇಗವಾಗಿ ಹರಡುತ್ತಿದ್ದಂತೆ, ಈ ಆರೋಪಗಳನ್ನು ಪರಿಹರಿಸಲು ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚುತ್ತಿದೆ.
ವಿವಾದದಲ್ಲಿ ಸಿಲುಕಿದ ಐಎಎಸ್ ಪೂಜಾ
UPSC ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ತರಬೇತಿ ಸಮಯದಲ್ಲಿ ಪುಣೆ ಕಲೆಕ್ಟರೇಟ್‌ನಲ್ಲಿ ಅಸಮಂಜಸವಾದ ಬೇಡಿಕೆಗಳು ಮತ್ತು ಅಸಭ್ಯ ವರ್ತನೆಯಿಂದ ಪೂಜಾ ಖೇಡ್ಕರ್ ಪ್ರಸ್ತುತ ದೇಶದಲ್ಲಿ ಸುದ್ದಿಯಲ್ಲಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿ ಹಾಗೂ ಪ್ರಧಾನಮಂತ್ರಿ ಕಾರ್ಯಾಲಯ ಕೂಡ ಅವರ ಈ ನಡೆಯನ್ನು ಖಂಡಿಸಿದೆ.
ಹೀಗಾಗಿ ರೈತರು ಪೂಜಾ ಖೇಡ್ಕರ್ ಅವರ ವಿರುದ್ಧ ಕ್ರಮ ಕೈಗೊಳ್ಳಲು ಪುಣೆ ಪೊಲೀಸರ ಮೊರೆ ಹೋಗಿದ್ದಾರೆ. ಈ ವೇಳೆ ಪೂಜಾಳ ತಾಯಿ ಮನೋರಮಾ ಖೇಡ್ಕರ್ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಕೆಲ ಹೊತ್ತು ಗೇಟ್ ಬಳಿ ಬಂದ ಪೊಲೀಸರು ಅವರನ್ನು ಕರೆದುಕೊಂಡು ಹೋಗಲಿಲ್ಲ. ಪೊಲೀಸರು ಪೂಜಾಳ ತಾಯಿಯನ್ನು ಗೇಟ್ ತೆರೆಯುವಂತೆ ಕೇಳಿದ್ದಾರೆ. ಆದರೆ ಬಲವಂತವಾಗಿ ಒಳಗೆ ಬರಲು ಯತ್ನಿಸಿದರೆ ನಿಮ್ಮೆಲ್ಲರನ್ನೂ ಜೈಲಿಗೆ ಹಾಕುತ್ತೇವೆ ಎಂದು ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ಇವರಿಬ್ಬರ ವಿರುದ್ಧ ದೂರು ದಾಖಲಾಗಿದೆ.












Click it and Unblock the Notifications