2 ದಿನದಲ್ಲಿ ವರದಿ ಸಲ್ಲಿಸಲು ರಾಜ್ಯಕ್ಕೆ ಕೇಂದ್ರದ ಸೂಚನೆ
ಬೆಂಗಳೂರು, ಮಾ. 19: ಡಿ.ಕೆ. ರವಿ ಸಾವು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು ರಾಜ್ಯ ಸರ್ಕಾರ ಕೇಂದ್ರಕ್ಕೆ ಇನ್ನೆರಡು ದಿನಗಳಲ್ಲಿ ವರದಿಯೊಂದನ್ನು ಸಲ್ಲಿಸಬೇಕಿದೆ. ಡಿ.ಕೆ. ರವಿ ಸಾವಿನ ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದರ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಬೇಕಿದೆ.
ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಆದೇಶ ನೀಡಿದ್ದಾರೆ. ಇದಕ್ಕೆ ಉತ್ತರಿಸಿರುವ ಸಿದ್ದರಾಮಯ್ಯ ಎರಡು ದಿನದಲ್ಲಿ ತನಿಖೆಯ ಹಾದಿಯ ಬಗ್ಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ'. ಒಂದು ವೇಳೆ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಶಿಫಾರಸು ಮಾಡಿದರೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಬಹುದು ಎಂದು ಹೇಳಲಾಗಿದೆ.[ಡಿಕೆ ರವಿ ಪ್ರಕರಣ ಸಿಬಿಐ ತನಿಖೆ ಇಲ್ಲ : ಜಾರ್ಜ್]

ಈ ಬಗ್ಗೆ ರಾಜ್ಯ ಸಭೆಯಲ್ಲಿ ಗುರುವಾರ ಮಾತನಾಡಿದ ರಾಜ್ ನಾಥ್ ಸಿಂಗ್ , ರಾಜ್ಯ ಸರ್ಕಾರ ಒಪ್ಪಿದರೆ ಸಿಬಿಐ ತನಿಖೆ ಮಾಡಲು ಯಾವುದೆ ಅಡ್ಡಿ ಇಲ್ಲ ಎಂದು ತಿಳಿಸಿದ್ದಾರೆ. [ಸಿಬಿಐ ತನಿಖೆ ಸರಕಾರ ಏಕೆ ಬೇಡ ಎನ್ನುತ್ತಿದೆ ಎಂದರೆ...]
ಆದರೆ ಸಂಪುಟ ಸಭೆ ನಡೆಸಿರುವ ರಾಜ್ಯ ಸರ್ಕಾರ ಸಿಬಿಐ ತನಿಖೆಯ ಬಗ್ಗೆ ಯಾವ ಸಾಧ್ಯತೆಯಿಲ್ಲ ಎಂದು ಹೇಳಿದೆ. ಒಟ್ಟಿನಲ್ಲಿ ರವಿ ಸಾವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬ ಕೂಗು ದೇಶಾದ್ಯಂತ ಕೇಳಿ ಬರುತ್ತಿದ್ದು ಇನ್ನು ಯಾವ ತಿರುವುಗಳನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications