ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಎಸ್ ಅನುರಾಗ್ ತಿವಾರಿ ಸಾವು, ಈಗ ಮರ್ಡರ್ ಕೇಸ್

ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಸಾವನ್ನು ಕೊಲೆ ಪ್ರಕರಣ ಎಂದು ಉತ್ತರಪ್ರದೇಶ ಪೊಲೀಸರು ದಾಖಲಿಸಿಕೊಂಡಿದ್ದಾರೆ.

By Mahesh
|
Google Oneindia Kannada News

ಲಕ್ನೋ, ಮೇ 22: ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಸಾವನ್ನು ಕೊಲೆ ಪ್ರಕರಣ ಎಂದು ಉತ್ತರಪ್ರದೇಶ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಐದು ದಿನಗಳ ಹಿಂದೆ ಹಜರತ್ ಗಂಜ್ ನ ಮೀರಾಭಾಯಿ ಗೆಸ್ಟ್ ಹೌಸ್ ಬಳಿ ಅನುರಾಗ್ ತಿವಾರಿ ಅವರ ಶವ ಪತ್ತೆಯಾಗಿತ್ತು. ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿಯಿಂದ ಕಂಡು ಬಂದಿತ್ತು. [ಇಲಾಖೆ ಭ್ರಷ್ಚಾಚಾರ ಬಯಲಿಗೆಳೆದ್ದಿದ್ದೇ ತಿವಾರಿ ಸಾವಿಗೆ ಕಾರಣವಾಯ್ತೆ?]

IAS officer Anurag Tewari's death to be treated as murder

ಆದರೆ, ಮಾನಸಿಕ ಕಿರುಕುಳ, ಹಿರಿಯ ಅಧಿಕಾರಿಗಳ ಒತ್ತಡದಿಂದ ಸಾವು ಸಂಭವಿಸಿದೆ ಎಂದು ಅನುರಾಗ್ ಅವರ ಸೋದರ ಮಾಯಾಂಕ್ ಅವರು ದೂರು ಸಲ್ಲಿಸಿದ್ದರು. ದೂರು ಸ್ವೀಕರಿಸಿದ ಲಕ್ನೋ ಪೊಲೀಸರು ಐಪಿಸಿ ಸೆಕ್ಷನ್ 302 ಅನ್ವಯ ಪ್ರಕರಣ ದಾಖಲಿಸಿಕೊಂಡು, ಎಫ್ಐಆರ್ ಹಾಕಿ ತನಿಖೆ ಮುಂದುವರೆಸಿದ್ದಾರೆ.

ತಿವಾರಿ ಪ್ರಕರಣದಲ್ಲಿ ತನಿಖೆಗೆ ರಾಜ್ಯ ಸರ್ಕಾರ ಸಿದ್ಧ ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿಯ ಅನುಮಾನಾಸ್ಪದ ಸಾವಿನ ಪ್ರಕರಣ ಕುರಿತಂತೆ ರಾಜ್ಯ ಸರ್ಕಾರ ಯಾವುದೇ ತನಿಖೆಗೂ ಸಿದ್ಧವಿದೆ. ಉತ್ತರ ಪ್ರದೇಶದ ಸಿಎಂಗೆ ಈ ಕುರಿತು ಪತ್ರ ಬರೆದಿದ್ದೇನೆ. ಆಹಾರ ಇಲಾಖೆಯಲ್ಲಿ 2 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆದಿಲ್ಲ. ಅನುರಾಗ್ ತಿವಾರಿ ಅವರು ಕಿರುಕುಳದ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿಲ್ಲ ಎಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

English summary
The Uttar Pradesh police have registered a case of murder over IAS officer Anurag Tewari's death. Five days after his body was found in Hazratganj of Lucknow, an FIR has been filed under section 302 of the IPC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X