ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಚ್ಚಿತು ಭಾರತೀಯ ವಾಯು ಸೇನೆಯ 'ತೇಜಸ್ಸು'

By Kiran B Hegde
|
Google Oneindia Kannada News

ಬೆಂಗಳೂರು, ಜ. 17: ಅತ್ಯಾಧುನಿಕ ಯುದ್ಧ ಸಾಮಗ್ರಿಗಳ ಆಮದು ಮಾಡಿಕೊಳ್ಳಲು ಭಾರತ ಹಲವು ಸಹಸ್ರ ಕೋಟಿ ರು. ವ್ಯಯಿಸುತ್ತಿದೆ. ಆದ್ದರಿಂದಲೇ ನರೇಂದ್ರ ಮೋದಿ ಅವರು ರಕ್ಷಣಾ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗಬೇಕು ಎಂದು ಹೇಳಿದ್ದರು.

ಈ ನಿಟ್ಟಿನಲ್ಲಿ ಭಾರತೀಯ ಸೇನೆ ಅತ್ಯಂತ ವೇಗವಾಗಿ ಹೆಜ್ಜೆಯಿಡುತ್ತಿದೆ. ದೇಶಿ ನಿರ್ಮಿಸಿತ ಅತ್ಯಾಧುನಿಕ ಲಘು ಯುದ್ಧ ವಿಮಾನ 'ತೇಜಸ್' ಅನ್ನು ಭಾರತೀಯ ವಾಯು ಸೇನೆಗೆ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಶನಿವಾರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಸೇರ್ಪಡೆಗೊಳಿಸಿದರು. [ಎಚ್ಎಎಲ್ ಗೆ ರಕ್ಷಣಾ ಸಚಿವರ ಭೇಟಿ]

ಹೆಸರಿಟ್ಟಿದ್ದು ವಾಜಪೇಯಿ : ಇನ್ನೊಂದು ವಿಷಯ ಗೊತ್ತೇ? ಇದಕ್ಕೆ 'ತೇಜಸ್' ಎಂದು ಹೆಸರಿಟ್ಟಿದ್ದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಇಂತಹ ಒಂದು ವಿಮಾನ ತಯಾರಿಸಲು ಬೀಳುವ ಖರ್ಚು ಬರೋಬ್ಬರಿ 200 ಕೋಟಿ ರು. ಶೇ. 75 ಬಿಡಿ ಭಾಗಗಳು ಭಾರತದಲ್ಲಿಯೇ ತಯಾರಾಗುತ್ತವೆ. ಶೇ. 20ರಷ್ಟು ಬಿಡಿಭಾಗಗಳನ್ನು ಮಾತ್ರ ವಿದೇಶದಿಂದ ತರಿಸಲಾಗುತ್ತದೆ. [ಸಾವನ್ನು ಧಿಕ್ಕರಿಸಿ ಹಾರಾಡಿದ ಬಾಲಕ]

tejas

ಎಲ್ಲ ಪರೀಕ್ಷೆ ಪಾಸ್ : ತೇಜಸ್ ಇಲ್ಲಿಯವರೆಗೆ ಸುಮಾರು 1,800 ಗಂಟೆಗಳ ಕಾಲ ಯಶಸ್ವಿ ಪರೀಕ್ಷಾರ್ಥ ಹಾರಾಟ ನಡೆಸಿದೆ. ವಿಜ್ಞಾನಿಗಳ ಎಲ್ಲ ಪ್ರಾಥಮಿಕ ಪರೀಕ್ಷೆಗಳಲ್ಲಿಯೂ ಪಾಸಾಗಿದೆ. ಇದು ವಾಯು ಸೇನೆಯ 32 ವರ್ಷಗಳ ನಿರಂತರ ಪರಿಶ್ರಮದ ಫಲ. ಎಚ್‌ಎಎಲ್‌, ಎಚ್‌ಎಲ್, ಡಿಆರ್‌ಡಿಓ ಮತ್ತು ಆರ್‌ಡಿಇ ಸಂಸ್ಥೆಗಳು ಜಂಟಿಯಾಗಿ ತೇಜಸ್ ವಿಮಾನವನ್ನು ಅಭಿವೃದ್ಧಿಗೊಳಿಸಿವೆ. [ಹಿಮದಲ್ಲಿ ಸಿಲುಕಿದ್ದ ತಾಯಿ, ಮಗನ ರಕ್ಷಣೆ]

ಇನ್ನೂ 110 ವಿಮಾನಕ್ಕೆ ಬೇಡಿಕೆ : ಇಂದು ಭಾರತೀಯ ವಾಯುಸೇನೆ ಹತ್ತಿರ 20 ತೇಜಸ್ ಯುದ್ಧ ವಿಮಾನಗಳಿವೆ. ಇನ್ನೂ 60 ವಿಮಾನ ಸೇರ್ಪಡೆಗೊಳಿಸಲು ಯೋಜನೆ ರೂಪಿಸಲಾಗಿದೆ. ಇದರ ಜೊತೆಯಲ್ಲಿ ನೌಕಾದಳವೂ 50 ತೇಜಸ್ ವಿಮಾನಗಳಿಗೆ ಬೇಡಿಕೆ ಇಟ್ಟಿದೆ.

ತೇಜಸ್ ವಿಮಾನ ಸೇರ್ಪಡೆ ಕಾರ್ಯಕ್ರಮದಲ್ಲಿ ವಾಯು ಸೇನೆಯ ಮುಖ್ಯಸ್ಥ ಅನೂಪ್ ರಹಾ ಇನ್ನಿತರ ಗಣ್ಯರು ಹಾಜರಿದ್ದರು.

English summary
The Indian Air Force (IAF) was officially handed over the first of the indigenously built Tejas Light Combat Aircraft (LCA), 32 years after the project was sanctioned. The Hindustan Aeronautics Limited (HAL) handed over the Tejas Series Production-1 (LCA-SP1) to Defence Minister Manohar Parrikar and Air Chief Marshal Arup Raha at a quiet ceremony held in Bengaluru on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X