ನಾನು ವಾರಕ್ಕೆ 85-90 ಗಂಟೆ ಕೆಲಸ ಮಾಡಿದ್ದೇನೆ, ಇದು ವ್ಯರ್ಥವಾಗಿದೆಯೇ: ತನ್ನನ್ನು ಸಮರ್ಥಿಸಿಕೊಂಡ ಇನ್ಫೋಸಿಸ್‌ ನಾರಾಯಣಮೂರ್ತಿ

ನವದೆಹಲಿ, ಡಿಸೆಂಬರ್‌ 9: ಭಾರತದಲ್ಲಿ ಯುವಕರು ವಾರಕ್ಕೆ ಕನಿಷ್ಠ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ ತಿಂಗಳ ನಂತರ, ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ತಮ್ಮ ಕಂಪನಿಯನ್ನು ಸ್ಥಾಪಿಸುವಾಗ 1994 ರವರೆಗೆ ತಾವು ವಾರಕ್ಕೆ 85 ರಿಂದ 90 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ ಎಂದು ದಿ ಎಕನಾಮಿಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

"ನಾನು ಬೆಳಿಗ್ಗೆ 6:20 ಕ್ಕೆ ಕಚೇರಿಯಲ್ಲಿರುತ್ತಿದ್ದೆ ಹಾಗೂ ರಾತ್ರಿ 8:30 ಕ್ಕೆ ಕಚೇರಿಯಿಂದ ಮನೆಗೆ ಹೊರಡುತ್ತಿದ್ದೆ. ಅಲ್ಲದೆ ವಾರದಲ್ಲಿ ಆರು ದಿನ ಕೆಲಸ ಮಾಡುತ್ತಿದ್ದೆ. ಅಭಿವೃದ್ಧಿ ಹೊಂದಿದ ಪ್ರತಿಯೊಂದು ರಾಷ್ಟ್ರವೂ ಕಠಿಣ ಪರಿಶ್ರಮದ ಮೂಲಕ ಮಾಡಿದೆ ಎಂದು ನನಗೆ ತಿಳಿದಿದೆ " ಎಂದು ತಿಳಿಸಿದ್ದಾರೆ.

I worked 85-90 hours a week, was is it waste: Infosys Narayanamurthy defends himself

ಬಡತನದಿಂದ ಪಾರಾಗುವ ಏಕೈಕ ಮಾರ್ಗವೆಂದರೆ ತುಂಬಾ ಕಷ್ಟಪಟ್ಟು ಕೆಲಸ ಮಾಡುವುದು ಎಂದು ತಮ್ಮ ಪೋಷಕರು ಕಲಿಸಿದರು. ಪ್ರತಿ ಕೆಲಸದ ಸಮಯದಿಂದ ಒಬ್ಬ ವ್ಯಕ್ತಿಯು ಉತ್ಪಾದಕತೆಯನ್ನು ಪಡೆಯುತ್ತಾನೆ. ನನ್ನ ಸಂಪೂರ್ಣ 40 ವರ್ಷಗಳ ವೃತ್ತಿಪರ ಜೀವನದಲ್ಲಿ, ನಾನು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಿದ್ದೇನೆ. ನಾವು ಆರು ದಿನಗಳ ಕಾಲ 1994 ರವರೆಗೆ ಕೆಲಸ ಮಾಡುತ್ತಿದ್ದೆ. ವಾರಕ್ಕೆ ಕನಿಷ್ಠ 85 ರಿಂದ 90 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ. ಅದು ವ್ಯರ್ಥವಾಗಲಿಲ್ಲ" ಎಂದು ಹೇಳಿದರು.

ಅಕ್ಟೋಬರ್‌ನಲ್ಲಿ ಇನ್ಫೋಸಿಸ್ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಅವರೊಂದಿಗೆ 3one4 ಕ್ಯಾಪಿಟಲ್‌ನ ಪಾಡ್‌ಕಾಸ್ಟ್ 'ದಿ ರೆಕಾರ್ಡ್' ನ ಮೊದಲ ಸಂವಾದದಲ್ಲಿ ನಾರಾಯಣ ಮೂರ್ತಿ, ಭಾರತವು ಚೀನಾ ಮತ್ತು ಜಪಾನ್‌ನಂತಹ ವೇಗವಾಗಿ ಬೆಳೆಯುತ್ತಿರುವ ದೇಶಗಳೊಂದಿಗೆ ಸ್ಪರ್ಧಿಸಲು ಬಯಸಿದರೆ ಕೆಲಸದ ಉತ್ಪಾದಕತೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಹೇಳಿದ್ದರು.

I worked 85-90 hours a week, was is it waste: Infosys Narayanamurthy defends himself

"ಎರಡನೆಯ ಮಹಾಯುದ್ಧದ ನಂತರ, ಜರ್ಮನಿ ಮತ್ತು ಜಪಾನ್‌ನ ಜನರು ತಮ್ಮ ದೇಶಕ್ಕಾಗಿ ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡಿದರು. ಭಾರತದಲ್ಲಿನ ಯುವಕರು ಸಹ ದೇಶವನ್ನು ಹೊಂದಿದ್ದಾರೆ ಮತ್ತು ನಮ್ಮ ಆರ್ಥಿಕತೆಯ ಸಲುವಾಗಿ ಶ್ರಮಿಸುತ್ತಾರೆ" ಎಂದು ಹೇಳಿದರು.

ಇದಾದ ನಂತರ ಮೂರ್ತಿ ಅವರ ಹೇಳಿಕೆಯನ್ನು ಬೆಂಬಲಿಸಿದ ಓಲಾ ಸಿಇಒ ಭವಿಶ್ ಅಗರ್ವಾಲ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ ಪೋಸ್ಟ್‌ನಲ್ಲಿ, ಇದು ಕಡಿಮೆ ಕೆಲಸ ಮಾಡುವ ಮತ್ತು ನಮ್ಮನ್ನು ಮನರಂಜಿಸುವ ನಮ್ಮ ಕ್ಷಣವಲ್ಲ. ಮೂರ್ತಿ ಅವರ ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ಕಡಿಮೆ ಕೆಲಸ ಮಾಡುವುದು ಮತ್ತು ಮನರಂಜಿಸುವುದು ನಮ್ಮ ಕ್ಷಣವಲ್ಲ. ಬದಲಿಗೆ ಇತರ ದೇಶಗಳು ಹಲವು ತಲೆಮಾರುಗಳಲ್ಲಿ ನಿರ್ಮಿಸಿದ್ದನ್ನು 1 ತಲೆಮಾರಿನಲ್ಲಿ ನಿರ್ಮಿಸುವ ನಮ್ಮ ಕ್ಷಣವಾಗಿದೆ ಎಂದು ಹೇಳಿದ್ದರು.

ಕೈಗಾರಿಕೋದ್ಯಮಿ ಸಜ್ಜನ್ ಜಿಂದಾಲ್ ಅವರು ಮೂರ್ತಿಯವರ ಹೇಳಿಕೆಯನ್ನು ಬೆಂಬಲಿಸಿ, ಐದು ದಿನಗಳ ವಾರದ ಸಂಸ್ಕೃತಿಯು ಭಾರತದಂತಹ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಅಗತ್ಯವಿಲ್ಲ ಎಂದು ಹೇಳಿದ್ದರು. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಟೆಕ್ ಬಿಲಿಯನೇರ್‌ಗಳ ಈ ಹೇಳಿಕೆಗಳಿಕೆ ಟೀಕೆ ಮಾಡಿದ್ದರಯ. ಚಲನಚಿತ್ರ ನಿರ್ಮಾಪಕ ರೋನಿ ಸ್ಕ್ರೂವಾಲಾ ಅವರು "ಉತ್ಪಾದಕತೆಯನ್ನು ಹೆಚ್ಚಿಸುವುದು ಕೇವಲ ಹೆಚ್ಚು ಗಂಟೆಗಳ ಕೆಲಸವಲ್ಲ" ಎಂದು ಹೇಳಿದ್ದರು.

ಸೋಮವಾರ ಆರಂಭವಾದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿಯೂ ಮೂರ್ತಿ ಅವರ ಸಲಹೆ ಕೇಳಿ ಬಂದಿತ್ತು. ಇನ್ಫೋಸಿಸ್ ಸಹ-ಸಂಸ್ಥಾಪಕರು ನೀಡಿದ ಸಲಹೆಯನ್ನು ಮೌಲ್ಯಮಾಪನ ಮಾಡುತ್ತಿದ್ದೀರಾ ಎಂದು ಮೂರು ಲೋಕಸಭಾ ಸಂಸದರು ನರೇಂದ್ರ ಮೋದಿ ಸರ್ಕಾರವನ್ನು ಕೇಳಿದರು. ಆಗ ಉತ್ತರಿಸಿದ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ, "ಅಂತಹ ಯಾವುದೇ ಪ್ರಸ್ತಾವನೆಯು ಭಾರತ ಸರ್ಕಾರದ ಪರಿಗಣನೆಯಲ್ಲಿಲ್ಲ" ಎಂದು ಉತ್ತರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+