ಭಾರತದ ಶೇಷ್ಠತೆಯನ್ನು ಹಾಡಿ ಹೊಗಳಿದ ಉಜ್ಬೇಕಿಸ್ತಾನದ ಅಧ್ಯಕ್ಷ
ನವದೆಹಲಿ, ಅಕ್ಟೋಬರ್ 1: ಭಾರತದ ಇತಿಹಾಸ, ಧಾರ್ಮಿಕ ಸಂಸ್ಕೃತಿ, ರಾಜಕೀಯ, ಆರ್ಥಿಕ ಮತ್ತು ಬೌದ್ಧಿಕ ಸಾಮರ್ಥ್ಯದ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ಅದನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲು ಬಯಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಜತೆಗಿನ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಉಜ್ಬೇಕಿಸ್ತಾನದ ಅಧ್ಯಕ್ಷ ಸೋಮವಾರ ಇಲ್ಲಿ ಹೇಳಿದರು.
ಭಾರತ ಹಾಗೂ ಉಜ್ಬೇಕಿಸ್ತಾನ ಮಧ್ಯದ ಹಲವು ಒಪ್ಪಂದವನ್ನು ಇದೇ ವೇಳೆ ವಿನಿಮಯ ಮಾಡಿಕೊಳ್ಳಲಾಯಿತು. ಪ್ರಧಾನಿ ಮೋದಿ ಮಾತನಾಡಿ, ಇದು ನಮ್ಮ ನಾಲ್ಕನೇ ಭೇಟಿ. ನೀವು (ಉಜ್ಬೇಕ್ ಅಧ್ಯಕ್ಷ) ನಮ್ಮ ವಿಶೇಷ ಸ್ನೇಹಿತರು ಅನ್ನಿಸುತ್ತದೆ. ತುಂಬ ಅರ್ಥಪೂರ್ಣ ಚರ್ಚೆ ನಮ್ಮ ಮಧ್ಯೆ ಆಗಿವೆ. ಇದರಿಂದ ನಮ್ಮ ಮಧ್ಯೆ ಇನ್ನಷ್ಟು ಗಟ್ಟಿ ನಂಟು ಬೆಳೆಯಲು ಸಹಕಾರಿ ಆಗುತ್ತದೆ ಎಂದರು.

ಭದ್ರತೆ, ಶಾಂತಿ, ಸಂಪತ್ತು ಹಾಗೂ ಸಹಕಾರದ ವಿಚಾರದಲ್ಲಿ ದೀರ್ಘಾವಧಿ ದೃಷ್ಟಿಕೋನವನ್ನು ನಾವು ಗಮನದಲ್ಲಿ ಇಟ್ಟುಕೊಂಡಿದ್ದೇವೆ ಎಂದು ಮೋದಿ ಹೇಳಿದರು.












Click it and Unblock the Notifications