ದ್ವೇಷ ಹೊಸಕಿ, ಪ್ರೀತಿಯಿಂದ ಹೊಸ ರಾಜಕೀಯ ಭಾಷ್ಯ ಬರೆಯುತ್ತಾರಂತೆ ರಾಹುಲ್ ಗಾಂಧಿ!

Recommended Video

      ದ್ವೇಷ ಕಳಚಿ ಪ್ರೀತಿಯಿಂದ ಹೊಸ ರಾಜಕೀಯ ಭಾಷೆಯನ್ನ ಬರೆಯುತ್ತಾರಂತೆ ರಾಹುಲ್ ಗಾಂಧಿ

      ನವದೆಹಲಿ, ಮೇ 14 : ಪ್ರೀತಿ ಪ್ರೇಮದ ಮೂಲಕವೇ ಚುನಾವಣೆ ಗೆಲ್ಲುತ್ತೇನೆ. ದ್ವೇಷಿಸುವ ವಿರೋಧಿಗಳಲ್ಲೂ ಪ್ರೀತಿಯ ಬೀಜ ಬಿತ್ತುತ್ತೇನೆ ಎಂದು ಹೇಳುತ್ತಲೇ 'ಚೌಕಿದಾರ್ ಚೋರ್ ಹೈ' ಎಂದು ಕಿಡಿಕಾರುವ ರಾಹುಲ್ ಗಾಂಧಿ ಅವರು ದೇಶದ ರಾಜಕೀಯದ ಭಾಷ್ಯವನ್ನೇ ಬದಲಿಸುತ್ತೇನೆ ಎಂದು ಘೋಷಿಸಿದ್ದಾರೆ.

      ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

      "ನಾವು ಯಾವುದೇ ವಿಷಯದ ಬಗ್ಗೆ ಬಡಿದಾಡೋಣ. ಸಿದ್ಧಾಂತಗಳ ಕುರಿತು ಪರಸ್ಪರ ಹೋರಾಡೋಣ. ಆದರೆ...

      ಯಾರ ವಿರುದ್ಧವೂ ದ್ವೇಷದ ಮಾತು ಆಡುವುದು ಬೇಡ ಮತ್ತು ಪರಸ್ಪರ ಅಹಿಂಸೆಯ ಮಾರ್ಗ ಅನುಸರಿಸುವುದು ಬೇಡ. ಅದು ನಮ್ಮ ಭಾರತಕ್ಕೆ ತಕ್ಕುದಲ್ಲ" ಎಂದು ವೇದಾಂತಿಯಂತೆ ಮಾತನ್ನಾಡಿದ್ದಾರೆ.

      ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈ ಮಾತುಗಳನ್ನು ಆಡಿದ್ದೇನೋ ಸರಿ. ಆದರೆ, ದ್ವೇಷ, ಸಿಟ್ಟು, ಆಕ್ರೋಶ, ಹದ್ದು ಮೀರಿದ ಹಿಂಸಾತ್ಮಕ ಮಾತುಗಳನ್ನು ಆಡುತ್ತಿರುವ ತಮ್ಮದೇ ಪಕ್ಷದ ನಾಯಕರನ್ನು ಏಕೆ ಹದ್ದುಬಸ್ತಿನಲ್ಲಿಡಲು ರಾಹುಲ್ ಅವರಿಗೆ ಸಾಧ್ಯವಾಗುತ್ತಿಲ್ಲ?

      Im pushing for a new language in politics : Rahul Gandhi

      ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿಯವರ ಜಾತಿಯನ್ನು ಕೆದಕಿ 'ನೀಚ್' ಅಂದಿದ್ದ ಮಣಿ ಶಂಕರ್ ಅಯ್ಯರ್ ಅವರು ಮತ್ತೆ ತಮ್ಮ ದ್ವೇಷದ ಮಾತನ್ನು ಸಮರ್ಥಿಸಿಕೊಂಡಿದ್ದಾರೆ. 77 ವರ್ಷ ಹಿರಿಯರಾದಿ ಮಣಿ ಶಂಕರ್ ಅಯ್ಯರ್ ಅವರಿಗೆ ರಾಹುಲ್ ಗಾಂಧಿ ಏನು ಕಿವಿಮಾತು ಹೇಳುತ್ತಾರೆ? ಅವರನ್ನೇಕೆ ಪಕ್ಷದಿಂದ ಮತ್ತೆ ಕಿತ್ತು ಬಿಸಾಡಿಲ್ಲ ಎಂದು ಟ್ವಿಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ.

      'ಹುವಾ ತೋ ಹುವಾ' ಎಂದು ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿ, 1984ರ ಸಿಖ್ ವಿರೋಧಿ ದಂಗೆಯ ಬಗ್ಗೆ ಕೇವಲವಾಗಿ ಮಾತನಾಡಿ, ಮತ್ತೆ ಸಾಮರಸ್ಯವನ್ನು ಹಾಳು ಮಾಡಲು ಯತ್ನಿಸಿದ ಆತ್ಮೀಯ ಸ್ಯಾಮ್ ಪಿತ್ರೋಡಾ ಅವರನ್ನು ಪಕ್ಷದಿಂದ ಏಕೆ ಉಚ್ಚಾಟಿಸುವ ಮಾತನ್ನಾಡುವುದಿಲ್ಲ ರಾಹುಲ್ ಗಾಂಧಿ? ಎಂದು ಮಗದೊಬ್ಬರು ರಾಹುಲ್ ಅವರಿಗೆ ಪ್ರಶ್ನೆಯನ್ನಿತ್ತಿದ್ದಾರೆ.

      ಮೇ 23ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ, 2014ರ ಲೋಕಸಭೆ ಚುನಾವಣೆ ಫಲಿತಾಂಶಕ್ಕಿಂತ (44) ಹೆಚ್ಚು ಸೀಟನ್ನು ಕಾಂಗ್ರೆಸ್ ಗಳಿಸಿದರೆ ನರೇಂದ್ರ ಮೋದಿಯವರು ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧರಿದ್ದಾರಾ ಎಂದು ನಾಲಿಗೆ ಹರಿಯಬಿಟ್ಟಿರುವ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ರಾಹುಲ್ ಒಂದೇ ಒಂದು ಮಾತನ್ನು ಏಕೆ ಆಡಿಲ್ಲ? ಇವು ನರೇಂದ್ರ ಮೋದಿಯವರ ಮೇಲೆ ಪ್ರೀತಿಯಿಂದ ಆಡಿರುವ ಮಾತುಗಳಾ?

      ಅದೇ ರೀತಿ, ರಾಹುಲ್ ಗಾಂಧಿ ಅವರ ಈ ನಾಟಕೀಯ ಮಾತುಗಳು ತಮಾಷೆಗೆ, ವಿಡಂಬನೆಗೆ, ಕಟಕಿಗೆ ಆಹಾರವಾಗಿದೆ. ನೀವು ಮಣಿ ಶಂಕರ್ ಅಯ್ಯರ್, ಮಲ್ಲಿಕಾರ್ಜುನ ಖರ್ಗೆ, ಸ್ಯಾಮ್ ಪಿತ್ರೋಡಾ, ನವಜೋತ್ ಸಿಂಗ್ ಸಿಧು ಅಂಥವರಿಗೆ ಏಕೆ ಈ ಟ್ವೀಟನ್ನು ಟ್ಯಾಗ್ ಮಾಡಿಲ್ಲ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+