ಹಾದಿಯಾ ಪತಿ ಉಗ್ರ ಎಂದ ಆಕೆಯ ತಂದೆ ಅಶೋಕನ್
ನವದೆಹಲಿ, ನವೆಂಬರ್ 28: ಹಾದಿಯಾ ಪತಿ ಶಫಿನ್ ಜಹಾನ್ ಓರ್ವ ಉಗ್ರ ಎಂದು ನಾನು ನಂಬಿದ್ದೇನೆ. ಆದರೆ ಇದನ್ನು ಕೋರ್ಟ್ ಹೇಳಿದಾಗ ಮಾತ್ರ ಸಾಬೀತುಪಡಿಸಲು ಸಾಧ್ಯವಾಗುತ್ತದೆ ಎಂದು ಹಾದಿಯಾ ತಂದೆ ಕೆ.ಎಂ ಅಶೋಕನ್ ಹೇಳಿದ್ದಾರೆ.
ಇದೇ ವೇಳೆ ಸುಪ್ರಿಂ ಕೋರ್ಟ್ ನ ತೀರ್ಮಾನವನ್ನು ಅಶೋಕನ್ ಸ್ವಾಗತಿಸಿದ್ದಾರೆ. ಸಿರಿಯಾಗೆ ಹೋಗಲು ಬಿಡದೆ ಆಕೆಯನ್ನು ಶಿಕ್ಷಣ ಮುಂದುವರಿಸುವಂತೆ ಸುಪ್ರಿಂ ಸೂಚಿಸಿರುವುದರಿಂದ ತಾನು ಸಂತೋಷಗೊಂಡಿದ್ದೇನೆ ಎಂದು ಅಶೋಕನ್ ಹೇಳಿದ್ದಾರೆ.

ಇನ್ನು ಅಂತರ್ ಧರ್ಮೀಯ ವಿವಾಹದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಶೋಕನ್, ನಾನು ಒಂದೇ ಧರ್ಮ, ಒಂದೇ ದೇವರನ್ನು ನಂಬಿದ್ದೇನೆ. ಆದರೆ ಕುಟುಂಬದಲ್ಲಿ ಉಗ್ರಗಾಮಿ ಇರುವುದನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಸೋಮವಾರ ಸುಪ್ರಿಂ ಕೋರ್ಟ್ ಪೋಷಕರ ಬಂಧನದಲ್ಲಿದ್ದ ಹಾದಿಯಾರನ್ನು ಕಾಲೇಜಿಗೆ ಕಳುಹಿಸುವಂತೆ ಸೂಚನೆ ನಿಡಿತ್ತು. ಪತಿ ಜತೆ ಹೋಗುತ್ತೇನೆ ಎಂದು ಹೇಳಿಯೂ ಆಕೆಯನ್ನು ಕಾಲೇಜಿಗೆ ಕಳುಹಿಸುವಂತೆ ಆದೇಶ ನೀಡಿತ್ತು.
ಆಕೆ ತಮ್ಮ ಶಿಕ್ಷಣ ಪೂರೈಸಲು ತಮಿಳುನಾಡಿನ ಸೇಲಂಗೆ ಹೋಗಲಿದ್ದು ಆಕೆಯ ಭದ್ರತೆ ಬಗ್ಗೆ ತಮಗೇನೂ ಚಿಂತೆ ಇಲ್ಲ ಎಂದು ಅಶೋಕನ್ ಹೇಳಿದ್ದಾರೆ. ಜತೆಗೆ ತಾವು ಆಗಾಗ ಹೋಗಿ ಆಕೆಯನ್ನು ಅಲ್ಲಿ ಭೇಟಿಯಾಗುವುದಾಗಿಯೂ ಹೇಳಿದ್ದಾರೆ.












Click it and Unblock the Notifications