ಟ್ವಿಟ್ಟರ್‌ನಲ್ಲಿ ಮಾಧ್ಯಮಗಳಿಗೆ ತಿರುಗೇಟು ನೀಡಿದ ಮಲ್ಯ!

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 11 : 'ನಾನು ಅಂತರಾಷ್ಟ್ರೀಯ ಉದ್ಯಮಿ. ನಾನು ಆಗಾಗ ವಿದೇಶ ಪ್ರವಾಸ ಮಾಡುತ್ತಿರುತ್ತೇನೆ. ನಾನು ಭಾರತದಿಂದ ಓಡಿ ಹೋಗಿಲ್ಲ' ಎಂದು ಉದ್ಯಮಿ ವಿಜಯ್ ಮಲ್ಯ ಅವರು ಟ್ವಿಟ್ವರ್ ಮೂಲಕ ಸ್ಪಷ್ಟಪಡಿಸಿದ್ದಾರೆ.

ವಿಜಯ್ ಮಲ್ಯ ಅವರು ಭಾರತದಲ್ಲಿಲ್ಲ. ಅವರು ಲಂಡನ್‌ನಲ್ಲಿರಬಹುದು ಎಂದು ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳ ಬಗ್ಗೆ ಮಲ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಭಾರತ ದೇಶದ ಕಾನೂನುಗಳ ಬಗ್ಗೆ ನನಗೆ ಅಪಾರವಾದ ಗೌರವವಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. [ಟಿಪ್ಪು ಖಡ್ಗ ತಂದ ಮಲ್ಯರ ಗತಕಾಲದ ವೈಭವ ಹೇಗಿತ್ತು?]

ಶುಕ್ರವಾರ ಬೆಳಗ್ಗೆ ಉದ್ಯಮಿ ವಿಜಯ್ ಮಲ್ಯ ಅವರು ಸರಣಿ ಟ್ವಿಟ್ ಮಾಡಿದ್ದು, 'ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿರುವ ಮಾಧ್ಯಮಗಳು ಹಿಂದೆ ನನ್ನಿಂದ ಪಡೆದ ಸಹಕಾರವನ್ನು ಮರೆಯತಿಲ್ಲ ಎಂದು ಭಾವಿಸುತ್ತೇನೆ. ನಾನು ಹಲವು ವರ್ಷ ನೀಡಿದ ಸಹಕಾರ ದಾಖಲೆ ರೂಪದಲ್ಲಿದೆ' ಎಂದು ಹೇಳಿದ್ದಾರೆ. [ವಿಜಯ್ ಮಲ್ಯ ವಿದೇಶಕ್ಕೆ ಹೋಗಿದ್ದು ಹೇಗೆ?]

ವಿಜಯ್ ಮಲ್ಯ ಅವರ ಪಾಸ್‌ಪೋರ್ಟ್ ಜಪ್ತಿ ಮಾಡುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಬ್ಯಾಂಕ್ ಗಳ ಒಕ್ಕೂಟಕ್ಕೆ ಹಿನ್ನಡೆ ಉಂಟಾಗಿತ್ತು. ವಿಜಯ್ ಮಲ್ಯ ಅವರು ಈಗ ಭಾರತದಲ್ಲಿಲ್ಲ, ಮಾರ್ಚ್ 02ರಂದೇ ಲಂಡನ್‌ಗೆ ಹಾರಿದ್ದಾರೆ ಎಂದು ಸುಪ್ರೀಂಕೋರ್ಟಿಗೆ ಆಟರ್ನಿ ಜನರಲ್ ಆಫ್ ಇಂಡಿಯಾ ಮುಕುಲ್ ರೋಹ್ಟಗಿ ಹೇಳಿಕೆ ನೀಡಿದ್ದರು..... ಮಲ್ಯ ಟ್ವಿಟ್ಟರ್‌ನಲ್ಲಿ ಹೇಳಿದ್ದೇನು? [ವಿಜಯ್ ಮಲ್ಯ ಭಾರತದಲ್ಲಿಲ್ಲ, ಲಂಡನ್ನಿಗೆ ಪರಾರಿ!]

'ಕಾನೂನುಗಳ ಬಗ್ಗೆ ನನಗೆ ಅಪಾರವಾದ ಗೌರವವಿದೆ'

'ಕಾನೂನುಗಳ ಬಗ್ಗೆ ನನಗೆ ಅಪಾರವಾದ ಗೌರವವಿದೆ'

'ಸಂಸದನಾಗಿ ಭಾರತ ದೇಶದ ಕಾನೂನುಗಳ ಬಗ್ಗೆ ನನಗೆ ಅಪಾರವಾದ ಗೌರವವಿದೆ' ಎಂದು ವಿಜಯ್ ಮಲ್ಯ ಅವರು ಟ್ವೀಟ್ ಮಾಡಿದ್ದಾರೆ.

ವಿದೇಶ ಪ್ರವಾಸ ಮಾಡುತ್ತಿರುತ್ತೇನೆ.

'ನಾನು ಅಂತರಾಷ್ಟ್ರೀಯ ಉದ್ಯಮಿ. ನಾನು ಆಗಾಗ ವಿದೇಶ ಪ್ರವಾಸ ಮಾಡುತ್ತಿರುತ್ತೇನೆ'

ಮಾಧ್ಯಮಗಳ ವರದಿಗೆ ಗರಂ

ಮಾಧ್ಯಮಗಳ ವರದಿಗೆ ಗರಂ

'ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿರುವ ಮಾಧ್ಯಮಗಳು ಹಿಂದೆ ನನ್ನಿಂದ ಪಡೆದ ಸಹಕಾರವನ್ನು ಮರೆಯತಿಲ್ಲ ಎಂದು ಭಾವಿಸುತ್ತೇನೆ. ನಾನು ಹಲವು ವರ್ಷ ನೀಡಿದ ಸಹಕಾರ ದಾಖಲೆ ರೂಪದಲ್ಲಿದೆ' ಎಂದು ಮಲ್ಯ ಹೇಳಿದ್ದಾರೆ.

ಸತ್ಯ ಬೂದಿಯಾಗುತ್ತದೆ

ಮಾಧ್ಯಮಗಳು ಬೆನ್ನು ಬಿದ್ದರೆ ಸತ್ಯ ಬೂದಿಯಾಗುತ್ತದೆ

ಬ್ಯಾಂಕ್‌ಗಳಿಗೆ ನನ್ನ ಆಸ್ತಿ ವಿವರ ಗೊತ್ತಿಲ್ಲವೇ

ಬ್ಯಾಂಕ್‌ಗಳಿಗೆ ನನ್ನ ಆಸ್ತಿ ವಿವರ ಗೊತ್ತಿಲ್ಲವೇ

'ಮಾಧ್ಯಮಗಳ ವರದಿ ನನ್ನ ಆಸ್ತಿ ವಿವರ ಬಹಿರಂಗಕ್ಕೆ ಒತ್ತಾಯಿಸುತ್ತಿವೆ. ಬ್ಯಾಂಕ್‌ನವರಿಗೆ ನನ್ನ ಆಸ್ತಿ ವಿವರ ತಿಳಿದಿಲ್ಲವೇ?' ಎಂದು ಮಲ್ಯ ಪ್ರಶ್ನಿಸಿದ್ದಾರೆ.

ಖಡಕ್ ಪ್ರತಿಕ್ರಿಯೆ ನೀಡಿದ ಮಲ್ಯ

'ಮಾಧ್ಯಮಗಳ ವರದಿಗೆ ಮಲ್ಯ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ'

ನನ್ನಿಂದ ಪಡೆದ ಸಹಕಾರ ಮರೆಯಬೇಡಿ

ಮಾಧ್ಯಮಗಳಿಗೆ ಕಿವಿಮಾತು ಹೇಳಿದ ಮಲ್ಯ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vijay Mallya on Friday, March 11th 2016 hit back at the media reports that he has fled the country to avoid legal action against him. 'As an Indian MP I fully respect and will comply with the law of the land. Our judicial system is sound and respected' said Mallya on Twitter.
Please Wait while comments are loading...