Bengaluru to Hyderabad: ಬೆಂಗಳೂರಿನಿಂದ ಹೈದರಾಬಾದ್‌ ಪ್ರಯಾಣ ಇನ್ಮುಂದೆ ಕೇವಲ 2 ಗಂಟೆ ಅಷ್ಟೇ

ಹೈದರಾಬಾದ್ ಮತ್ತು ಬೆಂಗಳೂರು ನಡುವಿನ ಪ್ರತಿದಿನ ಸಾವಿರಾರು ಜನರು ಪ್ರಯಾಣಿಸುತ್ತಾರೆ. ಕೆಲವರು ಸ್ವಂತ ಕಾರುಗಳಲ್ಲಿ, ಇನ್ನು ಕೆಲವರು ಬಸ್ಸುಗಳಲ್ಲಿ, ಇನ್ನು ಕೆಲವರು ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಹೈದರಾಬಾದ್ ಮತ್ತು ಬೆಂಗಳೂರು ನಡುವಿನ ಅಂತರ 618 ಕಿ.ಮೀ. ಇವರಿಗೆ 6 ರಿಂದ 10 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ರೈಲು ಪ್ರಯಾಣಕ್ಕೆ 12 ಗಂಟೆಗಳು ಬೇಕಾಗುತ್ತದೆ. ಒಂದು ಸಿಟಿಯಿಂದ ಇನ್ನೊಂದು ಸಿಟಿಗೆ ಹೋಗಲು ಅರ್ಧ ದಿನ ಬೇಕಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಮಾಸ್ಟರ್‌ ಪ್ಲಾನ್‌ ಮಾಡಿದೆ.

ಹೌದು, ಬೆಂಗಳೂರು, ಹೈದರಾಬಾದ್‌ ಹಾಗೂ ಚೆನ್ನೈ ದಕ್ಷಿಣ ಭಾರತದ ಮೂರು ಮಹಾನಗರಗಳು. ಭಾರತದ ಐಟಿ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯನ್ನೇ ನೀಡುತ್ತಿವೆ. ಹೈದರಾಬಾದ್‌ನಿಂದ ಬೆಂಗಳೂರು ಮತ್ತು ಚೆನ್ನೈಗೆ ವಿಮಾನದಷ್ಟೇ ವೇಗವಾಗಿ ಹೋಗುವ ಎರಡು ರೈಲ್ವೇ ಮಾರ್ಗಗಳನ್ನು ಪರಿಚಯಿಸಲು ಮುಂದಾಗಿದೆ. ಇದರಿಂದ ಪ್ರಯಾಣದ ಸಮಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದ್ದು, ಪ್ರಯಾಣಿಕರಿಗೆ ಭಾರೀ ಅನುಕೂಲವಾಗಲಿದೆ.

Hyderabad To Chennai Bengaluru In Just Over 2 Hours By High-Speed Rail

ತೆಲಂಗಾಣದ ರಾಜಧಾನಿ ಹೈದರಾಬಾದ್‌ನಿಂದ ನಮ್ಮ ಬೆಂಗಳೂರು ಹಾಗೂ ತಮಿಳುನಾಡಿನ ಕ್ಯಾಪಿಟಲ್‌ ಸಿಟಿ ಚೆನ್ನೈಗೆ ವಿಮಾನದಷ್ಟೇ ವೇಗವಾದ ರೈಲು ಮಾರ್ಗ ಬರಲಿದೆ. ಹೈದರಾಬಾದ್‌ನಿಂದ ಎರಡು ನಗರಗಳನ್ನು ಸಂಪರ್ಕಿಸುವ ಎರಡು ಹೈಸ್ಪೀಡ್‌ ರೈಲ್ವೇ ಕಾರಿಡಾರ್‌ ಅನ್ನು ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಗಂಟೆಗೆ 320 ಕಿಮೀ ವೇಗದಲ್ಲಿ ಚಲಿಸುವ ಹೈಸ್ಪೀಡ್‌ ರೈಲುಗಳು ಪ್ರಯಾಣಿಕರನ್ನು ಹೈದರಾಬಾದ್‌ನಿಂದ ಬೆಂಗಳೂರಿಗೆ 2 ಗಂಟೆಗಳಲ್ಲಿ, ಚೆನ್ನೈಗೆ 2 ಗಂಟೆ 20 ನಿಮಿಷದಲ್ಲಿ ತಲುಪಿಸುವ ನಿರೀಕ್ಷೆಯಿದ್ದು, ಇವೆರಡು ದಕ್ಷಿಣ ಭಾರತದ ಮೊದಲ ಹೈಸ್ಪೀಡ್‌ ರೈಲ್ವೇ ಕಾರಿಡಾರ್‌ಗಳಾಗಲಿವೆ.

ಪ್ರಸ್ತುತ ಭಾರತದಲ್ಲಿ ಅತಿವೇಗದ ರೈಲುಗಳು ವಂದೇ ಭಾರತ್ ಎಕ್ಸ್‌ಪ್ರೆಸ್. ಈ ರೈಲುಗಳ ಗರಿಷ್ಠ ವೇಗ ಗಂಟೆಗೆ 160 ಕಿ.ಮೀ. ಆದರೆ, ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಬುಲೆಟ್ ರೈಲಿನ ವೇಗ ಗಂಟೆಗೆ 300 ಕಿ.ಮೀ. ಅಂದರೆ, ವಂದೇ ಭಾರತ್ ರೈಲುಗಳಿಗಿಂತ ಡಬಲ್ ವೇಗದಲ್ಲಿ ಚಲಿಸಲಿವೆ. ಹೈದರಾಬಾದ್ ಮತ್ತು ಬೆಂಗಳೂರು ನಡುವೆಯೂ ಹೈ ಸ್ಪೀಡ್ ರೈಲು ಮಾರ್ಗವನ್ನು ಪ್ರಸ್ತಾಪಿಸಲಾಗಿದೆ. ಗಂಟೆಗೆ 320 ಕಿ.ಮೀ. ವೇಗದಲ್ಲಿ ಚಲಿಸುವ ಈ ಬುಲೆಟ್ ರೈಲು ಲಭ್ಯವಾದರೆ, ಹೈದರಾಬಾದ್‌ನಿಂದ ಬೆಂಗಳೂರಿಗೆ ಕೇವಲ 2 ಗಂಟೆಗಳಲ್ಲಿ ತಲುಪಬಹುದು.

ಕೇಂದ್ರ ಸರ್ಕಾರ ಈ ನಗರಗಳ ನಡುವೆ ಹೈಸ್ಪೀಡ್‌ ರೈಲ್ವೇ ಕಾರಿಡಾರ್‌ ನಿರ್ಮಾಣಕ್ಕೆ ಮುಂದಾಗಿದೆ. ಹೈಸ್ಪೀಡ್‌ ರೈಲ್ವೇ ಮಾರ್ಗ ಶುರುವಾದರೆ ವಿಮಾನದಲ್ಲಿ ಬರುವುದಕ್ಕಿಂತ ಮುಂಚೆಯೇ ರೈಲಿನಲ್ಲಿ ಬಂದು ಮನೆಯನ್ನು ಸೇರಬಹುದಾಗಿದೆ. ಇದು ದಕ್ಷಿಣ ಭಾರತದಲ್ಲಿ ಬುಲೆಟ್‌ ಟ್ರೈನ್‌ ಮಾಡೆಲ್‌ ಕಾರಿಡಾರ್‌ ಆಗಿ ನಿರ್ಮಾಣವಾಗಬಹುದು ಎಂದು ಹೇಳಲಾಗುತ್ತಿದೆ. ಹೈದರಾಬಾದ್‌ ಹಾಗೂ ಚೆನ್ನೈ ಮಾರ್ಗದಲ್ಲಿ 705 ಕಿಮೀ ಹೈಸ್ಪೀಡ್‌ ರೈಲು ಕಾರಿಡಾರ್‌ ಪ್ರಸ್ತಾಪಿಸಿದ್ದರೆ, ಹೈದರಾಬಾದ್‌ - ಬೆಂಗಳೂರಿನ ನಡುವೆ 626 ಕಿಮೀ ಅತಿ ವೇಗದ ರೈಲ್ವೇ ಮಾರ್ಗವನ್ನು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ.

ಎರಡು ಹೈ-ಸ್ಪೀಡ್ ಎಲಿವೇಟೆಡ್ ಕಾರಿಡಾರ್‌ಗಳಿಗೆ ಡಿಪಿಆರ್, ಜೋಡಣೆ ವಿನ್ಯಾಸ, ಸಂಚಾರ, ಅಂದಾಜು ಮೊತ್ತ ಹಾಗೂ ಎಂಜಿನಿಯರಿಂಗ್ ಡಾಕ್ಯುಮೆಂಟ್‌ಗಳನ್ನು ತಯಾರಿಕೆ ಸೇರಿ ಅಂತಿಮ ಸ್ಥಳ ಸಮೀಕ್ಷೆಯನ್ನು ಕೈಗೊಳ್ಳಲು ಟೆಂಡರ್‌ಗಳನ್ನು ಕೂಡ ಆಹ್ವಾನಿಸಲಾಗಿದೆ. ಎಲ್ಲ ಕೆಲಸಗಳು ವೇಗವಾಗಿ ನಡೆಯುತ್ತಿರುವುದರಿಂದ ಶೀಘ್ರದಲ್ಲೇ ಕಾಮಗಾರಿಗೂ ಕೂಡ ಚಾಲನೆ ಸಿಗಲಿದೆ ಎಂದು ಹೇಳಲಾಗುತ್ತಿದೆ.

ಹೈದರಾಬಾದ್‌ ಕಾರಿಡಾರ್‌ ಅನ್ನು 15 ವರ್ಷದೊಳಗೆ ಸಾಕಾರಗೊಳಿಸುವ ಪ್ಲಾನ್‌ ಅನ್ನು ರೈಲ್ವೇ ಇಲಾಖೆ ಹೊಂದಿದೆ. 2041ರೊಳಗೆ ಈ ಕಾರಿಡಾರ್‌ ನಿರ್ಮಾಣ ಆಗಿ ಜನರ ಬಳಕೆಗೆ ಬರುವ ಸಾಧ್ಯತೆ ಹೆಚ್ಚಾಗಿದೆ.
ಇನ್ನು, ಯಾವ ಮಾರ್ಗದಲ್ಲಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಈ ಕಾರಿಡಾರ್‌ ನಿರ್ಮಾಣವಾಗಲಿದೆ ಎಂಬುದನ್ನು ಗಮನಿಸಿದರೆ, ಹೈದರಾಬಾದ್‌, ಶಾದ್‌ನಗರ, ಮಹೆಬೂಬ್‌ನಗರ, ಗದ್ವಾಲ್‌, ಕರ್ನೂಲು, ಗುಂತಕಲ್‌, ಅನಂತಪುರ, ಧರ್ಮಾವರಂ, ಹಿಂದೂಪುರ, ದೊಡ್ಡಬಳ್ಳಾಪುರ, ಯಲಹಂಕ ಮಾರ್ಗವಾಗಿ ಬೆಂಗಳೂರನ್ನು ತಲುಪಲಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+