ಹೋಟೆಲ್ ರೂಮ್ ಲಾಕ್ ಮಾಡಿ ಹೋದ ಯುವತಿ; ಮರಳಿ ಬಂದಾಗ ಶಾಕ್! ವೈರಲ್ ಪೋಸ್ಟ್ ಗೆ ನೆಟ್ಟಿಗರ ಅನುಮಾನ
ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಲೇ ಇವೆ. ಲೈಕ್ಸ್ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಕೆಲವರು ಇಲ್ಲ ಸಲ್ಲದೇ ಕಥೆ ಕಟ್ಟಿ ಹೇಳುತ್ತಾರೆ. ಬೇಕು ಅಂತಲೇ ವೈರಲ್ ಮಾಡುವ ಪ್ರವೃತ್ತಿ ಮತ್ತೊಂದು ಕಡೆ ಕಂಡು ಬರುತ್ತಿವೆ. ಇದೀಗ ಅಂಥದ್ದೇ ವಿಚಾರಗಳ ಚರ್ಚೆಗೆ 'ಹೈದರಾಬಾದ್ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿದ್ದಾಗಿ ಹೇಳಿಕೊಂಡ ಯುವತಿಯ ಪೋಸ್ಟ್' ಕಾರಣವಾಗಿದೆ.
ಎಕ್ಸ್ ಪೊಸ್ಟ್ ಪ್ರಕಾರ, ಹೈದರಾಬಾದ್ನ ಹೋಟೆಲ್ನಲ್ಲಿ ಒಬ್ಬಳು ಯುವತಿ ರೂಮ್ ಬುಕ್ ಮಾಡಿದ್ದಾರೆ. ಕಾಯ್ದಿರಿಸಿದ್ದ ರೂಮ್ಗೆ ಪೂರ್ಣ ಹಣ ಪಾವತಿಸಿದಳು. ಅಲ್ಲಿ ಫ್ರೆಶಪ್ ಆದ ಬಳಿಕ ಯುವತಿ ತನ್ನ ಕೊಠಡಿ ಲಾಕ್ ಮಾಡಿ ವೈಯಕ್ತಿಕ ಕೆಲಸಕ್ಕೆ ಹೊರ ತೆರಳಿದ್ದಾಳೆ. ವಾಪಾಸ್ ಬಂದು ನೋಡಿದಾಗ ಆಕೆಗೆ ಆಶ್ಚರ್ಯಗೊಂಡಿದ್ದಾಳೆ. ತಾನು ಲಾಕ್ ಮಾಡುವ ಮುನ್ನ ಇದ್ದ ರೂಮ್ ಮರಳಿ ಬಂದಾಗ ಅದೇ ರೀತಿ ಇರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಬೇರೆಯವರಿಗೆ ಅದೇ ರೂಮ್ ಕೊಟ್ಟರಾ ಸಿಬ್ಬಂದಿ?
ಯುವತಿ ಹೊರಗೆ ಹೋದಾಗ, ಹೋಟೆಲ್ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ಅವಳ ಅನುಮತಿಯಿಲ್ಲದೆ ಅವಳ ಕೋಣೆಯನ್ನು ತೆರೆದಿದ್ದಾರೆ. ಅಲ್ಲದೇ ಆಕೆ ಇಲ್ಲದ ಆ ಸಮಯದಲ್ಲಿ ಬೇರೊಬ್ಬರಿಗೆ ಕೋಣೆಯಲ್ಲಿ ತಂಗಲು ಅವಕಾಶ ನೀಡಿದ್ದಾರೆ ಎಂದು ದೂರಲಾಗಿದೆ. ಆದರೆ ಆ ವ್ಯಕ್ತಿಯು ಬೆಡ್ ಮೇಲೆ, ಕೋಣೆ ತುಂಬ ಎಲ್ಲೆಂದರಲ್ಲಿ ವಸ್ತುಗಳನ್ನು ಬೀಡಾಡಿದ್ದು, ಸರಿಯಾಗಿ ನೋಡಿಕೊಳ್ಳದ ಸ್ಥಿತಿಯಲ್ಲಿ ಕೊಠಡಿ ಇದೆ. @CountryGulshan ಹೆಸರಿನ ಎಕ್ಸ್ ಖಾತೆಯಲ್ಲಿ ಯುವತಿ ಫೋಟೋ ಹಾಗೂ ಕೋಣೆ ಫೋಟೋ ಹಂಚಿಕೊಳ್ಳಲಾಗಿದೆ.
ಅತಿಥಿಗಳ ಭದ್ರತೆ, ಖಾಸಗೀತನದ ಉಲ್ಲಂಘನೆ!
ಒಬ್ಬರು ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿದ ಬಳಿಕ ಆಡಳಿತ ಮಂಡಳಿಯು ಈ ರೀತಿ ಮಾಡುವುದು ಗ್ರಾಹಕರ ಖಾಸಗೀತನದ ಉಲ್ಲಂಘನೆ ಆಗುತ್ತದೆ. ಈ ವಿಚಾರ ಹಲವು ಗಂಭಿರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಅತಿಥಿಯೊಬ್ಬರು ಕೋಣೆ ಬುಕ್ ಮಾಡಿದರೆ ಬೇರೆಯವರಿಗೆ ನೀಡುವಂತಿಲ್ಲ. ಹಾಗೇನಾದರು ಆದಲ್ಲಿ ಅದು ಅತಿಥಿಯ ಗೌಪ್ಯತೆ, ಭದ್ರತೆ ಮತ್ತು ನಂಬಿಕೆಯ ಉಲ್ಲಂಘನೆ ಆಗಿದೆ.
ಅನುಮಾನ ವ್ಯಕ್ತಪಡಿಸಿದ ನೆಟ್ಟಿಗರು
ಈ ಪೋಸ್ಟ್ ನೋಡಿದ ಅನೇಕರು 'ಅತಿಥಿಯ ವೈಯಕ್ತಿಕ ಜಾಗ ಗೌರವಿಸುವುದು ಹೋಟೆಲ್ ಮಂಡಳಿ, ಸಿಬ್ಬಂದಿ ಜವಾಬ್ದಾರಿ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು 'ಇದು ನಿಜವೇ ಆದಲ್ಲಿ ಇದೊಂದು ಗಂಭೀರ ವಿಚಾರ. ಅದರಲ್ಲೂ ಮಹಿಳೆಯರು ಸುರಕ್ಷತೆಗೆ ಬಗ್ಗೆ ಅನುಮಾನ ಉಂಟಾಗುತ್ತದೆ' ಎಂದಿದ್ದಾರೆ.
ಇನ್ನೊಬ್ಬರು 'ಇದು ಬೇಕು ಅಂತಲೂ ಲೈಕ್ಸ್, ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಮಾಡಿರುವ ನಾಟಕ. ಯಾವುದೇ ಹೋಟೆಲ್ನಲ್ಲಿ ಈ ರೀತಿ ಮಾಡುವುದಿಲ್ಲ' ಎಂದಿದ್ದಾರೆ. ಮೂರನೇಯವರು 'ಇದು ಅಸಲಿಗೆ ಗುಜರಾತ್ನ ವಡೋದರಾದ ಛಾನಿಯಲ್ಲಿರುವ ಹೋಟೆಲ್ ನಲ್ಲಿ ನಡೆದ ಘಟನೆಯನ್ನು ಮರು ಸೃಷ್ಟಿ ರೀತಿ ಕಥೆ ಕಟ್ಟಿ ಹರಿಬಿಡಲಾಗಿದೆ' ಅಂತಲೂ ಅನುಮಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಈ ರೂಮ್ ಬುಕಿಂಗ್ ನಿಯಮ, ಮಹಿಳಾ ಸುರಕ್ಷತೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
A girl booked a room at a hotel in Hyderabad and paid for it in full. She stayed there for some time, then locked the room and went out for an important meeting.
— Bharat Mata ke Sewak (@CountryGulshan) August 5, 2026
While she was away, the hotel staff used a master key to open her room without her permission. They allowed another… pic.twitter.com/4BJGhJJfTF


Click it and Unblock the Notifications
