ಹೈದರಾಬಾದ್: ವರದಕ್ಷಿಣೆಯಲ್ಲಿ 'ಹಳೆಯ' ಪೀಠೋಪಕರಣ ಎಂದು ಮದುವೆ ನಿಲ್ಲಿಸಿದ ಭೂಪ, ಪ್ರಕರಣ ದಾಖಲು
ಹೈದರಾಬಾದ್‌ನಲ್ಲಿ ವರದಕ್ಷಿಣೆಯಲ್ಲಿ 'ಹಳೆಯ' ಪೀಠೋಪಕರಣ ಎಂದು ಮದುವೆ ನಿಲ್ಲಿಸಿದ ಮದುಮಗ ಮತ್ತು ಕುಟುಂಬಕ್ಕೆ ಆಗಿದ್ದು ಹೀಗೆ..ಮುಂದೆ ಓದಿ..
ಹೈದರಾಬಾದ್, ಫೆಬ್ರವರಿ. 21: ವಧುವಿನ ಮನೆಯವರು ವರದಕ್ಷಿಣೆಯಾಗಿ ಹಳೆಯ ಪೀಠೋಪಕರಣಗಳನ್ನು ನೀಡಿದ್ದಾರೆ ಎಂದು ಮದುಮಗ ತನ್ನ ಮದುವೆಯನ್ನು ರದ್ದುಗೊಳಿಸಿಸಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಮಗಳ ಮದುವೆ ಸಮಾರಂಭಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿದ ನಂತರ ವರನ ಕುಟುಂಬದವರು ಮದುವೆಯನ್ನು ಥಟ್ಟನೆ ರದ್ದುಗೊಳಿಸಿದರು ಎಂದು ವಧುವಿನ ತಂದೆ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ವರನ ಮನೆಯವರನ್ನು ಪ್ರಶ್ನಿಸಲು ಹೋದಾಗ ವರನ ತಂದೆ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ. ಬಳಿಕ ವಧುವಿನ ತಂದೆ ನಂತರ ಪೊಲೀಸ್ ಠಾಣೆಗೆ ಹೋಗಿ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

ಮೌಲಾಲಿಯಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿರುವ 25 ವರ್ಷದ ಮೊಹಮ್ಮದ್ ಜಕಾರಿಯಾ (25) ಎಂಬುವವರು ಹೀನಾ ಫಾತಿಮಾ (22) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಭಾನುವಾರ ವಿವಾಹ ಕಾರ್ಯಕ್ರಮ ನಡೆಯಬೇಕಿತ್ತು. ವಧುವಿನ ಪೋಷಕರು ಮದುವೆಗೆ ಮೊದಲು ಭೋಜನವನ್ನು ಏರ್ಪಡಿಸಿದ್ದರು. ಆದರೆ, ಮದುಮಗ ಮೊಹಮ್ಮದ್ ಜಕಾರಿಯಾ ಮದುವೆಯ ಸ್ಥಳಕ್ಕೆ ಬಂದಿಲ್ಲ.
ಹೀಗಾಗಿ, ವಧುವಿನ ತಂದೆ ನೇರವಾಗಿ ವರನ ಮನೆಗೆ ಹೋಗಿ ಏಕೆ ವಿಳಂಬ ಎಂದು ಪ್ರಶ್ನಿಸಿದಾಗ, ಅವರು ವರದಕ್ಷಿಣೆಯಲ್ಲಿ ನೀಡಿರುವ ಪೀಠೋಪಕರಣಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅನುಚಿತವಾಗಿ ವರ್ತಿಸಿದರು ಎಂದು ಆರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ವಧುವಿನ ತಂದೆ, "ನನ್ನ ಮಗಳ ಮದುವೆ ನಡೆಯಬೇಕಿತ್ತು. ಮದುವೆಗೆ ಎಲ್ಲಾ ವ್ಯವಸ್ಥೆ ಮಾಡಿದ್ದೆ, ಆದರೆ ವರ ಬರಲಿಲ್ಲ. ನಾನು ಅವರ ಮನೆಗೆ ಹೋದಾಗ, ಅವರ ತಂದೆ ನನ್ನೊಂದಿಗೆ ಅನುಚಿತವಾಗಿ ವರ್ತಿಸಿ, ನನ್ನನ್ನು ನಿಂದಿಸಿದರು. ಅವರ ಕುಟುಂಬವು ಕೆಲವು ವರದಕ್ಷಿಣೆ ಬೇಡಿಕೆಗಳನ್ನು ಸಲ್ಲಿಸಿತ್ತು. ನಾವು ನೀಡಿದ ವಸ್ತುಗಳನ್ನು ಅವರು ಇಷ್ಪಡಲಿಲ್ಲ" ಎಂದು ಹೇಳಿದ್ದಾರೆ.
ಘಟನೆ ಬಳಿಕ ವಧುವಿನ ತಂದೆ ಚಂದ್ರಾಯನಗುಟ್ಟ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆಗಾಗಿ ಶಿಕ್ಷೆ) ಮತ್ತು 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ನೀಡಲು ಪ್ರೇರೇಪಿಸುವುದು) ಮತ್ತು ವರದಕ್ಷಿಣೆ ನಿಷೇಧ ಕಾಯಿದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications