ಹಿಮಾಚಲ ಪ್ರದೇಶ: ರಾಹುಲ್ ಗಾಂಧಿಗೆ ಮಾನನಷ್ಟಮೊಕದ್ದಮೆ ನೋಟೀಸ್

Posted By:
Subscribe to Oneindia Kannada

ಹಿಮಾಚಲ ಪ್ರದೇಶ, ನವೆಂಬರ್ 08: ಹಿಮಾಚಲ ಪ್ರದೇಶ ಮತ್ತು ಗುಜರಾತಿನಲ್ಲಿ ಇದೇ ಡಿಸೆಂಬರ್ ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲೇ ಬೇಕೆಂಬ ಹಟ ತೊಟ್ಟು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ದಣಿವಿಲ್ಲದೆ ಓಡಾಡುತ್ತಿದ್ದಾರೆ.

ಭಗವದ್ಗೀತೆಗೆ ಬೇರೆಯದೇ ಅರ್ಥ ನೀಡಿದ್ದಾರೆ ಮೋದಿ: ರಾಹುಲ್ ಲೇವಡಿ!

ಆದರೆ ಈಗಿನ್ನೂ ಪ್ರಚಾರ ಆರಂಭಿಸಿರುವ ಅವರಿಗೆ ಆರಂಭದಲ್ಲೇ ವಿಘ್ನ ಬಂದೆರಗಿದೆ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿ ಪ್ರೇಮ್ ಕುಮಾರ್ ಧುಮಾಲ್ ಅವರು, ರಾಹುಲ್ ಗಾಂಧಿ ತಮ್ಮ ಮೇಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.

ನ.6 ರಂದು ಹಿಮಾಚಲ ಪ್ರದೇಶದ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, 'ಪ್ರೇಮ್ ಕುಮಾರ್ ಧುಮಾಲ್ ಕ್ರಿಕೆಟ್ ಹೆಸರಿನಲ್ಲಿ ಸಾಕಷ್ಟು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ, ಇದರಿಂದಾಗಿ ಅವರ ಮಗ ಅನುರಾಗ್ ಠಾಕೂರ್ ಸಂಕಷ್ಟ ಅನುಭವಿಸಬೇಕಾಯಿತು' ಎಂದಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಪ್ರೇಮ್ ಕುಮಾರ್ ಧುಮಾಲ್ ಅವರ ಲಾಯರ್ ರಾಹುಲ್ ಗಾಂಧಿಗೆ ನೋಟೀಸ್ ನೀಡಿದ್ದು, ನ'.9 ರೊಳಗಾಗಿ ಕ್ಷಮೆ ಕೇಳದಿದ್ದಲ್ಲಿ ನಿಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bharatiya Janata Party's chief ministerialcandidate for Himachal Pradesh, Prem Kumar Dhumal, on Nov.7th sent a notice to Congress vice-president Rahul Gandhi accusing him of making defamatory allegations of corruption against him in election rallies.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ