• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ ವಿರುದ್ಧದ ಟ್ರಂಪ್ ಟೀಕೆ ಬೆನ್ನಲ್ಲೇ ಟ್ರೆಂಡ್ ಆಯ್ತು 'ಹೌಡಿ ಮೋದಿ'!

|

ನವದೆಹಲಿ, ಅಕ್ಟೋಬರ್ 23: ಪ್ರಧಾನಿ ನರೇಂದ್ರ ಮೋದಿ ತಮ್ಮ ಅದ್ಭುತ ಸ್ನೇಹಿತ, ತಮಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯರ ಬೆಂಬಲವಿದೆ ಎಂದು ಶ್ಲಾಘಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ಭಾರತವು ಹೊಲಸು ಗಾಳಿಯಿಂದ ತುಂಬಿದೆ ಎಂದು ಕಿಡಿಕಾರಿರುವುದು ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ತೀವ್ರ ಟೀಕೆಗಳಿಗೆ ಆಹಾರವಾಗಿದೆ.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಹ್ಯೂಸ್ಟನ್‌ನಲ್ಲಿ 'ಹೌಡಿ, ಮೋದಿ!' ಕಾರ್ಯಕ್ರಮದ ಮೂಲಕ ಪ್ರಧಾನಿಗೆ ಸಿಕ್ಕ ಫಲದ ಬಗ್ಗೆ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ವ್ಯಂಗ್ಯವಾಡಿದ್ದಾರೆ. 'ಟ್ರಂಪ್: ಸ್ನೇಹದ ಫಲ. 1) ಭಾರತದ ಕೋವಿಡ್ ಸಾವಿನ ಪ್ರಕರಣಗಳನ್ನು ಪ್ರಶ್ನಿಸಿದರು. 2) ಭಾರತವು ಗಾಳಿಗೆ ಕೊಳಕನ್ನು ಸೇರಿಸುತ್ತಿದೆ... ಭಾರತದ ಗಾಳಿ ಹೊಲಸಾಗಿದೆ ಎಂದರು, 3) ಭಾರತವನ್ನು 'ಟಾರಿಫ್ ರಾಜ' ಎಂದರು... ಹೌಡಿ ಮೋದಿಯ ಫಲಿತಾಂಶಗಳು' ಎಂದು ಸಿಬಲ್ ಟೀಕಾಪ್ರಹಾರ ನಡೆಸಿದ್ದಾರೆ.

ಭಾರತದ ಗಾಳಿ ಕೊಳಕು ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಚಾರದಲ್ಲಿ ಕೊನೆಯ ದಿನದ ಅಧ್ಯಕ್ಷೀಯ ಅಭ್ಯರ್ಥಿಗಳ ಸಂವಾದದಲ್ಲಿ ಡೊನಾಲ್ಡ್ ಟ್ರಂಪ್, ಭಾರತ, ಚೀನಾ ಮತ್ತು ರಷ್ಯಾದ ಗಾಳಿ ಕೊಳಕಾಗಿದೆ ಎಂದು ಟೀಕಿಸಿದ್ದರು. ಹವಾಮಾನ ವೈಪರೀತ್ಯವನ್ನು ನಿಗ್ರಹಿಸಲು ಜಾಗತಿಕ ಸಮುದಾಯವನ್ನು ಜತೆಗೂಡಿಸುವ ಪ್ಯಾರಿಸ್ ಒಪ್ಪಂದದಿಂದ ಹೊರಗೆ ಬಂದ ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳುವಾಗ ಅವರು ಭಾರತವನ್ನು ದೂಷಿಸಿದ್ದರು. ಈ ಹೇಳಿಕೆ ಭಾರತದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಹೌಡಿ ಮೋದಿ ಕಾರ್ಯಕ್ರಮ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ. ಮುಂದೆ ಓದಿ.

ಮೋದಿ ಬೆಂಬಲ ಪರಿಗಣಿಸುತ್ತಾರೆಯೇ?

ಮೋದಿ ಬೆಂಬಲ ಪರಿಗಣಿಸುತ್ತಾರೆಯೇ?

'ಈ ಚರ್ಚೆಗಳಲ್ಲಿ ಭಾರತದ ವಿರುದ್ಧ ಡೊನಾಲ್ಡ್ ಟ್ರಂಪ್ ಹಲವು ಬಾರಿ ಪ್ರಸ್ತಾಪಿಸಿದ ಬಳಿಕ ನರೇಂದ್ರ ಮೋದಿ ಅವರು ಕೆಲವು ದಿನಗಳ ಹಿಂದೆ ಹೌಡಿ ಮೋದಿಯಲ್ಲಿ ಟ್ರಂಪ್ ಅವರ ಉಮೇದುವಾರಿಕೆಯನ್ನು ಬೆಂಬಲಿಸುವಂತೆ ಕಾಣಿಸಿಕೊಂಡಿದ್ದನ್ನು ಮರುಪರಿಗಣಿಸುತ್ತಾರೆಯೇ?' ಎಂದು ಮಿಖಾಯಲ್ ಕುಗೆಲ್ಮನ್ ಪ್ರಶ್ನಿಸಿದ್ದಾರೆ.

ಭಾರತಕ್ಕೆ ಮುಜುಗರದ ಕ್ಷಣ

ಭಾರತಕ್ಕೆ ಮುಜುಗರದ ಕ್ಷಣ

'ಮೋದಿ ಅವರ ಅತ್ಯುತ್ತಮ ಸ್ನೇಹಿತ ಟ್ರಂಪ್ ಹೇಳುತ್ತಾರೆ, ಭಾರತದ ಕಡೆಗೆ ನೋಡಿ, ಅದು ಕೊಳಕಾಗಿದೆ. ನೆನಪಿಸಿಕೊಳ್ಳಿ ಟ್ರಂಪ್ ಅವರ ಭಾರತದ ಭೇಟಿಗಾಗಿ ಮೋದಿ ಅವರು 100 ಕೋಟಿ ರೂ ತೆರಿಗೆದಾರರ ಹಣವನ್ನು ಬಳಸಿದ್ದರು. ಹಾಗೆಯೇ ಹೌಡಿ ಮೋದಿಯಲ್ಲಿ ಅವರ ಪರ ಪ್ರಚಾರ ನಡೆಸಿದ್ದರು. ಇದು ಭಾರತಕ್ಕೆ ಮುಜುಗರದ ಕ್ಷಣ' ಎಂದು ಕೆಲವರು ಕುಟುಕಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರನ್ನೇ ಮರು ಆಯ್ಕೆ ಮಾಡಿ: ಭಾರತೀಯ ಅಮೆರಿಕನ್ನರು

ನಮ್ಮದೇ ತಪ್ಪು

ನಮ್ಮದೇ ತಪ್ಪು

'ದೆಹಲಿಯ ಗಾಳಿ ಗುಣಮಟ್ಟದ ಸೂಚ್ಯಂಕ 567, ವಾಷಿಂಗ್ಟನ್ ಡಿಸಿಯ ಗಾಳಿ ಗುಣಮಟ್ಟ ಸೂಚ್ಯಂಕ 25. ನಾವು ದೂಷಣೆಗೆ ಒಳಗಾಗುತ್ತಿದ್ದೇವೆ. ನಾವು ನಮ್ಮ ದಾರಿಗಳನ್ನು ಬದಲಿಸಬೇಕು. ದೀಪಾವಳಿ ವೇಳೆ ಮಾತ್ರವೇ ಮಾಲಿನ್ಯ ಕಡಿಮೆಯ ಜ್ಞಾನ ಬೋಧನೆ ಮಾಡಬೇಡಿ. ಆ ಜೀವನಶೈಲಿಯನ್ನು ವರ್ಷವಿಡೀ ಪಾಲಿಸಿ' ಎಂದು ಕೆಲವರು ಸಲಹೆ ನೀಡಿದ್ದಾರೆ.

ದುರದೃಷ್ಟಕರ ಹೇಳಿಕೆ

ದುರದೃಷ್ಟಕರ ಹೇಳಿಕೆ

'ಭಾರತದ ಬಗ್ಗೆ ಎಂತಹ ದುರದೃಷ್ಟಕರ ಹೇಳಿಕೆ. ಭಾರತವು ಹವಾಮಾನ ಬದಲಾವಣೆಯ ಗುರಿಗೆ ಬದ್ಧವಾಗಿದ್ದರೆ, ಅಮೆರಿಕವು ಅಮೆರಿಕನ್ನರ ಆಶಯಗಳಿಗೆ ವಿರುದ್ಧವಾಗಿ ಅದರಿಂದ ಹಿಂದೆ ಸರಿಯುವುದನ್ನು ಆಯ್ಕೆ ಮಾಡಿಕೊಂಡಿತು ಧನ್ಯವಾದಗಳು' ಎಂದು ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.

ಜೋ ಬಿಡೆನ್ ಅಮೆರಿಕದ ಅಧ್ಯಕ್ಷರಾದರೆ ಭಾರತಕ್ಕೆ ಒಳ್ಳೆಯದಲ್ಲ: ಟ್ರಂಪ್ ಪುತ್ರ

English summary
US Elections: Social Media users in twitter trends Howdy, Modi! event after President Donald Trump slams Indian air is filthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X