ರೈತರ ಆದಾಯವು ದ್ವಿಗುಣವಾಗುವುದು ಹೇಗೆ? ಮನಮೋಹನ್ ಸಿಂಗ್ ಪ್ರಶ್ನೆ

ನವದೆಹಲಿ, ಫೆಬ್ರವರಿ 1: ಅರುಣ್ ಜೇಟ್ಲಿಯವರ ಕೇಂದ್ರ ಬಜೆಟ್-2018ನ್ನು ಮಾಜಿ ಹಣಕಾಸು ಸಚಿವ ಮನಮೋಹನ್ ಸಿಂಗ್ ಟೀಕಿಸಿದ್ದಾರೆ.

ಮುಂಬರುವ ಖಾರಿಫ್ ಋತುವಿನಿಂದ ರೈತರಿಗೆ ಶೇ. 50ರಷ್ಟು ಉತ್ಪಾದನಾ ವೆಚ್ಚವನ್ನು ಹಿಂದಿರುಗಿಸಲು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು ನಿಗದಿಪಡಿಸುವ ಸ್ವಾಮಿನಾಥನ್ ಸೂತ್ರವನ್ನು ಅನುಷ್ಠಾನಗೊಳಿಸುವ ಭರವಸೆಯನ್ನು ಬಜೆಟ್ ನಲ್ಲಿ ಜೇಟ್ಲಿ ನೀಡಿದ್ದಾರೆ.

ಈ ಸಂಬಂಧ ಜೇಟ್ಲಿಯನ್ನು ಟೀಕಿಸಿರುವ ಸಿಂಗ್, "ರೈತರ ಆದಾಯವು ದ್ವಿಗುಣವಾಗುವುದು ಹೇಗೆ? ಈ ಭರವಸೆಗಳು ಹೇಗೆ ಇಡೇರಿಸಲಾಗುತ್ತದೆ?" ಎಂದು ಪ್ರಶ್ನಿಸಿದ್ದಾರೆ.

How will farmers income be doubled? Manmohan Singh

ಇದೇ ವೇಳೆ ಅವರು ಹಣಕಾಸಿನ ಅಂಕಗಣಿತ ತಪ್ಪಾಗಿದೆ ಎಂದು ಹೇಳಿದ್ದಾರೆ. "ಚುನಾವಣೆಯಲ್ಲಿ ಗೆಲ್ಲುವ ಮೂಲಕ ಬಜೆಟನ್ನು ಜನರು ಬೆಂಬಲಿಸುತ್ತಿದ್ದಾರೆ ಎಂಬ ಕಾರಣಕ್ಕೆ ನಾನು ಬಜೆಟನ್ನು ದೂಷಿಸುವುದಿಲ್ಲ. ಆದರೆ ಹಣಕಾಸಿನ ಅಂಕಗಣಿತವು ದೋಷಪೂರಿತವಾಗಿದೆ" ಎಂದು ಅವರು ಹೇಳಿದ್ದಾರೆ.

"ಈ ಬಜೆಟ್ ಪ್ರಕಾಶಮಾನವಾದ ಭವಿಷ್ಯದ ಚಿತ್ರವನ್ನು ತೋರಿಸುವುದರಲ್ಲಿ ಹೆಚ್ಚಿನ ಪಾಲು ತೊಡಗಿಸಿಕೊಂಡಿದೆ. ಆದರೆ ಅದನ್ನು ಸಾಧಿಸಲು ಹೇಗೆ ಸಾಧ್ಯ?" ಎಂದು ಮನಮೋಹನ್ ಸಿಂಗ್ ಜೇಟ್ಲಿಯವರನ್ನು ಪ್ರಶ್ನಿಸಿದ್ದಾರೆ.

ಇನ್ನು ಬಜೆಟ್ ಸುಧಾರಣಾವಾದಿ ಎಂದಿದ್ದಕ್ಕೆ ಸಿಂಗ್, 'ಸುಧಾರಣೆ' ಶಬ್ದವನ್ನು ಹಲವು ಬಾರಿ ಬಳಸಲಾಗಿದೆ ಮತ್ತು ಅದರ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದಿದ್ದಾರೆ. 'ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ,' ಎಂದು ಸಿಂಗ್ ಹೇಳಿದ್ದಾರೆ.

"ನಿಜ ಸಮಸ್ಯೆ ಏನೆಂದರೆ ಕೃಷಿ ಬಿಕ್ಕಟ್ಟು ಹಿಂದಿನ ವಿಷಯವೇ ಎಂಬುದು. ಇಲ್ಲವಾದರೆ, ಕೃಷಿ ಬಿಕ್ಕಟ್ಟನ್ನು ನಿಭಾಯಿಸುವ ತಂತ್ರವೇನು" ಎಂದು ಸಿಂಗ್ ಕೇಂದ್ರ ಸರಕಾರವನ್ನು ಪ್ರಶ್ನೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+