ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ 02 'ಬಾಹುಬಲಿ' ಉಡಾವಣೆ, LIVE ನೋಡೋದು ಹೇಗೆ?

|
Google Oneindia Kannada News

ಬೆಂಗಳೂರು, ಜುಲೈ 20: ಬಹುನಿರೀಕ್ಷಿತ ಚಂದ್ರಯಾನ-2 ಯೋಜನೆಗೆ ಹೊಸ ಕ್ಷಣಗಣನೆ ದಿನಾಂಕ ನೀಡಲಾಗಿದೆ.ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 22 ಮಧ್ಯಾಹ್ನ 2:43ಕ್ಕೆ ಚಂದ್ರಯಾನ-2 ಉಡಾವಣೆಯಾಗಲಿದೆ. ಶ್ರೀಹರಿಕೋಟಾದಿಂದ ಅತ್ಯಂತ ತೂಕವನ್ನು ಹೊರಬಲ್ಲ MkIII ರಾಕೆಟ್ ಮೂಲಕ ಅಧ್ಯಯನ ನೌಕೆಯನ್ನು ಉಡಾವಣೆ ಮಾಡಲಾಗುವುದು. ಈ ಮಹತ್ವದ ವಿದ್ಯಮಾನವನ್ನು ಕಣ್ತುಂಬಿಸಿಕೊಳ್ಳುವ ಬಗೆ ಹೇಗೆ? ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಚಂದ್ರಯಾನ-2: ಆ ಅಮೋಘ ಕ್ಷಣಕ್ಕೆ ನೀವೂ ಪ್ರತ್ಯಕ್ಷ ಸಾಕ್ಷಿಯಾಗಬಹುದು!ಚಂದ್ರಯಾನ-2: ಆ ಅಮೋಘ ಕ್ಷಣಕ್ಕೆ ನೀವೂ ಪ್ರತ್ಯಕ್ಷ ಸಾಕ್ಷಿಯಾಗಬಹುದು!

ಈ ಮುಂಚೆ ಕಳೆದ ಭಾನುವಾರ ಬೆಳಗ್ಗೆ 6.51ರಿಂದ ಕ್ಷಣಗಣನೆ ಆರಂಭವಾಗಿದ್ದು, ಜುಲೈ 15ರ ಬೆಳಗ್ಗೆ 2.51ಕ್ಕೆ ಚಂದ್ರನತ್ತ ಪ್ರಯಾಣ ಆರಂಭಗೊಳ್ಳಬೇಕಾಗಿತ್ತು. ಆದರೆ, ತಾಂತ್ರಿಕ ತೊಂದರೆಯಿಂದ 56 ನಿಮಿಷಕ್ಕೂ ಮೊದಲೆ ಉಡಾವಣೆಯನ್ನು ನಿಲ್ಲಿಸಲಾಯಿತು. ಆದೆರ್, ಮತ್ತೊಮ್ಮೆ ಅದೇ ಹುರುಪಿನಿಂದ ವಿಜ್ಞಾನಿಗಳು ಸಜ್ಜಾಗಿದ್ದು, ಈ ಅಮೋಘ ಕ್ಷಣವನ್ನು ಕಣ್ತುಂಬಿಸಿಕೊಳ್ಳುವ ಅವಕಾಶವನ್ನು ಇಸ್ರೋ ಜನಸಾಮಾನ್ಯರಿಗೂ ನೀಡಿದೆ. ಹೌದು, ನೀವೂ ಬಾಹುಬಲಿ ಉಡ್ಡಯನಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಬಹುದು!

ನಭಕ್ಕೆ ಚಿಮ್ಮದ 'ಬಾಹುಬಲಿ': ಚಂದ್ರಯಾನ-2 ಗೆ ತಾಂತ್ರಿಕ ಅಡಚಣೆ ನಭಕ್ಕೆ ಚಿಮ್ಮದ 'ಬಾಹುಬಲಿ': ಚಂದ್ರಯಾನ-2 ಗೆ ತಾಂತ್ರಿಕ ಅಡಚಣೆ

ಭಾರತದ ಅತಿ ಭಾರದ ರಾಕೆಟ್ 'ಬಾಹುಬಲಿ' ಎಂದು ಹೆಸರಿಸಲಾದ ಜಿಎಸ್​ಎಲ್​ವಿ ಎಂಕೆ-3, ಒಟ್ಟು 14 ವೈಜ್ಞಾನಿಕ ಉಪಕರಣಗಳನ್ನು ಹೊತ್ತೊಯ್ಯಲಿದೆ. ಉಡಾವಣೆ ಯಶಸ್ವಿಯಾದರೆ, ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಪ್ರಥಮ ದೇಶ ಎಂಬ ಕೀರ್ತಿ ಭಾರತಕ್ಕೆ ಸಲ್ಲಲಿದೆ. ಬಾಹುಬಲಿ ಹೊತ್ತೊಯ್ಯಲಿರುವ ಉಪಕರಣಗಳ ಪೈಕಿ ನಾಸಾದ ಒಂದು ಉಪಕರಣವೂ ಇದೆ. ಈ ಹಿಂದೆ ಚಂದ್ರಯಾನ-1 ಮತ್ತು ಮಂಗಳಯಾನದ ಉಪಗ್ರಹ ವನ್ನು ಪಿಎಸ್​ಎಲ್​ವಿ ಕ್ಲಾಸ್​ನ ರಾಕೆಟ್​ನಿಂದ ಉಡಾವಣೆ ಮಾಡಲಾಗಿತ್ತು.

ಚಂದ್ರನ ದಕ್ಷಿಣ ಧ್ರುವಕ್ಕೆ ಅಧ್ಯಯನ ನೌಕೆ

ಚಂದ್ರನ ದಕ್ಷಿಣ ಧ್ರುವಕ್ಕೆ ಅಧ್ಯಯನ ನೌಕೆ

ಅಧ್ಯಯನ ನೌಕೆ: ಐದು ಕಾಲುಗಳುಳ್ಳ ಗ್ರಹನೌಕೆ 'ವಿಕ್ರಂ' ಅಧ್ಯಯನ ನೌಕೆ ಚಂದಿರನ ಅಂಗಳದಲ್ಲಿ ಸೆಪ್ಟೆಂಬರ್ 6ರ ಸುಮಾರಿಗೆ ಇಳಿಯಲಿದೆ. ಅದರ ಜತೆಗೆ ರೊಬೊಟಿಕ್ ರೋವರ್ 'ಪ್ರಗ್ಯಾನ್', ಚಂದ್ರನ ಪ್ರದೇಶದಲ್ಲಿ ಸುತ್ತುಹೊಡೆದು ಅಧ್ಯಯನ ನಡೆಸಲಿದೆ.

2008ರ ಅಕ್ಟೋಬರ್‌ನಲ್ಲಿ ಇಸ್ರೋ ತನ್ನ ಮೊದಲ ಯೋಜನೆ ಚಂದ್ರಯಾನ-1ಅನ್ನು ಪಿಎಸ್‌ಎಲ್‌ವಿ ಮೂಲಕ ಉಡಾವಣೆ ಮಾಡಿತ್ತು. ಅದರಲ್ಲಿ 11 ಅಧ್ಯಯನ ಉಪಕರಣಗಳಿದ್ದವು. ಅಮೆರಿಕದ ಒಂದು ಅಧ್ಯಯನ ಉಪಕರಣವನ್ನೂ ಇದು ಒಳಗೊಂಡಿತ್ತು. ಈ ನೌಕೆಯು ಚಂದ್ರನಲ್ಲಿ ಹಿಮದ ನೀರು ಇರುವುದನ್ನು ಖಚಿತಪಡಿಸಿತ್ತು.

ಯಾರೂ ಅಧ್ಯಯನ ನಡೆಸಿರದ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಲು ಇಸ್ರೋ ಆಯ್ಕೆಮಾಡಿದೆ. ಮೊದಲ ಇಳಿಕೆಯ ಪ್ರಯತ್ನದಲ್ಲಿ ಸಫಲವಾದರೆ ದಕ್ಷಿಣ ಧ್ರುವವನ್ನು ಸ್ಪರ್ಶಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಇಸ್ರೋ ಪಾತ್ರವಾಗಲಿದೆ. ಚಂದ್ರಯಾನ-2, ಚಂದ್ರ ಉಪಗ್ರಹದಲ್ಲಿ ಭಾರತದ ಎರಡನೆಯ ಅಧ್ಯಯನವಾಗಲಿದೆ.

ಕೊನೆಕ್ಷಣದ ಸಿದ್ಧತೆಗಳು ಬಹುತೇಕ ಪೂರ್ಣ

ಕೊನೆಕ್ಷಣದ ಸಿದ್ಧತೆಗಳು ಬಹುತೇಕ ಪೂರ್ಣ

ಚಂದ್ರಯಾನ-2 ಮಿಷನ್​ನ ಕೊನೆಕ್ಷಣದ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. 20 ಗಂಟೆಗಳ ಹೊಸ ಕೌಂಟ್ ಡೌನ್ ನೀಡಲಾಗುತ್ತದೆ, ಸೋಮವಾರ(ಜುಲೈ 22) ಮಧ್ಯಾಹ್ನ 2:43ಕ್ಕೆ ಉಡಾವಣೆ ನಡೆಯಲಿದೆ. ಚಂದ್ರಯಾನ-2 ಗಗನನೌಕೆಯ ಫುಲ್ ಡ್ರೆಸ್ ರಿಹರ್ಸಲ್(ಎಫ್​ಡಿಆರ್) ಮತ್ತು ಉಡಾವಣಾ ರಿಹರ್ಸಲ್​ಮೊದಲಿಗೆ ನಡೆಸಲಾಯಿತು. ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್​ನ ವಿಜ್ಞಾನಿಗಳು ಎಫ್​ಡಿಆರ್​ನಲ್ಲಿ ಲ್ಯಾಂಡರ್ ಮತ್ತು ಆರ್ಬಿಟರ್ ನಡುವಿನ ಲಿಂಕ್, ಸಿಗ್ನಲ್ ಮತ್ತು ಸಂವಹನ ಲಿಂಕ್​ಗಳನ್ನು ಪರೀಕ್ಷಿಸಲಾಗಿದೆ. ರಾಕೆಟ್ ಜಿಎಸ್​ಎಲ್​ವಿ - ಎಂಕೆ3ಯ ವ್ಯವಸ್ಥೆಯನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ.

ಬಾಹ್ಯಾಕಾಶದಲ್ಲಿ ತನ್ನದೇ ನಿಲ್ದಾಣ ಸ್ಥಾಪಿಸಲಿದೆ ಇಸ್ರೋ ಬಾಹ್ಯಾಕಾಶದಲ್ಲಿ ತನ್ನದೇ ನಿಲ್ದಾಣ ಸ್ಥಾಪಿಸಲಿದೆ ಇಸ್ರೋ

ಸಾರ್ವಜನಿಕರಿಗೂ ಮುಕ್ತ ಅವಕಾಶ

ಸಾರ್ವಜನಿಕರಿಗೂ ಮುಕ್ತ ಅವಕಾಶ

ಇಸ್ರೋದಿಂದ ನೌಕೆಗಳು, ಉಪಗ್ರಹಗಳನ್ನು ಉಡಾವಣೆ ಮಾಡುವ ಸಂದರ್ಭದಲ್ಲಿ ಕೆಲವು ಸೀಮಿತ ಗಣ್ಯರಿಗೆ ಅದನ್ನು ವೀಕ್ಷಿಸುವ ಅವಕಾಶ ನೀಡಲಾಗುತ್ತಿತ್ತು. ಸಾರ್ವಜನಿಕರು ಟಿವಿ ವಾಹಿನಿಗಳು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಲಭ್ಯವಿದ್ದರೆ ಮಾತ್ರ ವೀಕ್ಷಿಸಬಹುದಾಗಿತ್ತು. ಆದರೆ, ಈ ವಿಶೇಷ ಗಳಿಗೆಯನ್ನು ಸಂಸ್ಥೆಯ ವಿಜ್ಞಾನಿಗಳು ಮಾತ್ರವಲ್ಲ, ಸಾರ್ವಜನಿಕರೂ ಕಣ್ತುಂಬಿಕೊಳ್ಳಲು ಇಸ್ರೋ ಅವಕಾಶ ನೀಡುತ್ತಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 15ರಂದು ನಸುಕಿನ 2.51ಕ್ಕೆ ಚಂದ್ರಯಾನ-2 ಉಡಾವಣೆಯಾಗಲಿದೆ. ಇಲ್ಲಿನ ಗ್ಯಾಲರಿಯಲ್ಲಿ 5000 ಮಂದಿ ಕುಳಿತುಕೊಂಡು ವೀಕ್ಷಿಸಬಹುದಾದ ಸಾಮರ್ಥ್ಯವಿದೆ. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡವರಿಗೆ ಇಲ್ಲಿ ಕುಳಿತು ನೇರವಾಗಿ ಉಡಾವಣೆಯ ಪ್ರಕ್ರಿಯೆಯನ್ನು ವೀಕ್ಷಿಸಲು ಅವಕಾಶ ನೀಡಲಾಗುತ್ತದೆ.

ನೋಂದಣಿ ಮಾಡಿವರಿಗೆ ಅವಕಾಶ

ನೋಂದಣಿ ಮಾಡಿವರಿಗೆ ಅವಕಾಶ

ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಸಿಕೊಳ್ಳಲು ಬಯಸುವವರು ಈ ಲಿಂಕ್(https://www.shar.gov.in/VSCREGISTRATION/index.jsp) ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಆಸಕ್ತರು ಜುಲೈ 19 ರಂದು ಸಂಜೆ 6 ಗಂಟೆಯ ಒಳಗೆ ತಮ್ಮ ಹೆಸರನ್ನು ನೋಂದಾಯಿಸಲು ಕೋರಲಾಗಿತ್ತು.
* ಇದಲ್ಲದೆ ಇಡೀ ಚಂದ್ರಯಾನ 2ನ ಸಂಪೂರ್ಣ ನೇರ ಪ್ರಸಾರವನ್ನು ದೂರದರ್ಶನದಲ್ಲಿ ಲೈವ್ ಆಗಿ ನೋಡಬಹುದು.
* ಡಿಡಿ ಯೂಟ್ಯೂಬ್ ಚಾನೆಲ್ ನಲ್ಲೂ ಲಭ್ಯವಿರಲಿದೆ.
* ರಿಲಯನ್ಸ್ ಜಿಯೋ ಗ್ರಾಹಕರು ಜಿಯೋ ಟಿವಿಯಲ್ಲಿ ನೋಡಬಹುದು.
* ಬಾಹ್ಯಾಕಾಶ ಸಂಸ್ಥೆ ಇಸ್ರೋದ ಸಾಮಾಜಿಕ ಜಾಲ ತಾಣ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಲೈವ್ ನೋಡಬಹುದು

English summary
The Indian Space Research Organisation (ISRO) has announced a new launch date for its ambitious second Moon landing mission Chandrayaan-2. It will now be launched on July 22. Here is steps how to watch LIVE Launch of Chandrayaan 2 Launch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X