ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಮುಕ್ತ ಹೋಮ್ ಡೆಲಿವರಿ:ಹೇಗೆ ಸಾಧ್ಯ?

|
Google Oneindia Kannada News

ಬೆಂಗಳೂರು, ಏಪ್ರಿಲ್ 3: ಇಡೀ ವಿಶ್ವವನ್ನೇ 'ಕೊರೊನಾ ವೈರಸ್' ಎಂಬ ಮಹಾಮಾರಿ ಕಾಡುತ್ತಿದೆ.

Recommended Video

ಮೂಕ ಪ್ರಾಣಿಗಳಿಗೆ ನೇರವಾದ ಕನ್ನಡದ ಯುವಕರು | Oneindia Kannada

ಈ ಆತಂಕದ ಮಧ್ಯೆ ಕೊರೊನಾ ವೈರಸ್ ಹೇಗೆ ಬರಬಹುದು ಕೈಕುಲುಕುವುದರಿಂದ ಬರುವುದೇ, ತಬ್ಬಿಕೊಳ್ಳುವುದರಿಂದ, ಕೆಮ್ಮುವುದರಿಂದ, ಸೀನುವುದರಿಂದ ಬರುವುದೇ ಎಂಬ ಸಾಕಷ್ಟು ಪ್ರಶ್ನೆಗಳು ಜನರನ್ನು ನಿತ್ಯ ಕಾಡುತ್ತಿದೆ.

ಅದರ ಮಧ್ಯೆಯೇ ಆಹಾರದಿಂದಲೂ ಕೂಡ ಬರಬಹುದಲ್ಲವೇ, ನಿತ್ಯ ಮಹಾನಗರಗಳಲ್ಲಂತೂ ಜನರು ಫಾಸ್ಟ್‌ಫುಡ್ ಅಥವಾ ಅಥವಾ ಇನ್ಯಾವುದೇ ವಸ್ತುಗಳ ಖರೀದಿಗೆ ಮೊಬೈಲ್ ಅಪ್ಲಿಕೇಷನ್‌ಗಳ ಮೊರೆ ಹೋಗಿರುವುದು ನಿಮಗೆ ತಿಳಿದೇ ಇದೆ.

How To Make Your Home Delivery Coronavirus Free

ಹಾಗಾದರೆ ಹೊರಗಡೆಯಿಂದ ಮನೆಗೆ ಡೆಲಿವರಿಯಾಗುವ ಆಹಾರದ ಮೂಲಕವೂ ರೋಗಾಣು ಬರಬಹುದಲ್ಲವೇ. ಹೌದು ಬರಬಹುದು ಆದರೆ ಆಹಾರದ ಮೂಲಕ ಕೊರೊನಾ ವೈರಸ್ ಹರಡುವ ಬಗ್ಗೆ ಯಾವುದೇ ನಿರ್ದಿಷ್ಟ ವರದಿ ಬಂದಿಲ್ಲ. ಅದರಿಂದಲೂ ಹರಡಬಹುದು ಜಾಗೃತರಾಗಿ ಎಂದಷ್ಟೇ ವೈದ್ಯರು ಹೇಳಿದ್ದಾರೆ.

ಆಹಾರದಿಂದ ಯಾವುದೇ ವೈರಸ್‌ಗಳು ಬರುವುದಿಲ್ಲ ಎಂದು ರೆಡಿ ಟ ಈಟ್‌ ಆಹಾರವನ್ನು ನೀಡುತ್ತಿರುವ ಕಂಪನಿಗಳು ಸುಮ್ಮನೆ ಕೂರಬಾರದು. ಯಾವುದೇ ರಿಸ್ಕ್‌ನ್ನು ತೆಗೆದುಕೊಳ್ಳಲು ಸಿದ್ಧವಿರದಂತೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಬೇಕಿದೆ.

ಪ್ಯಾಕೇಜ್ಡ್‌ ಆಹಾರಗಳನ್ನು 72 ಗಂಟೆಗಳ ಒಳಗೆ ಸೇವಿಸಬೇಕು, ಅದಾದ ಬಳಿಕ ಸೇವಿಸಿದರೆ ಆರೋಗ್ಯದ ಮೇಲೆ ನಾನಾ ರೀತಿಯ ತೊಂದರೆಗಳಾಗುತ್ತವೆ. ವೈರಸ್‌ಗಳು ಕೂಡ 72 ಗಂಟೆಗಳ ಕಾಲ ಗಾಳಿಯಲ್ಲಿ ಇರಬಲ್ಲದು ಎನ್ನುವ ಮಾಹಿತಿಯೂ ಇದೆ.

ರೆಡಿ ಟು ಈಟ್ ಆಹಾರವನ್ನು ಪ್ಯಾಕ್ ಮಾಡಿದ ಬಳಿಕ ರೆಡಿ ಟು ಈಟ್ ಕಂಟೇನರ್, ಪ್ಯಾಕೇಜಿಂಗ್ ಘಟಕವನ್ನು ಶುಚಿಗೊಳಿಸಬೇಕು. ಕಂಟೈನರ್‌ಗೆ ಬ್ಲೀಚ್ ಬಾಟಲಿಗಳಲ್ಲಿ ಬರೆದಂತೆಯೇ ಅದನ್ನು ಸ್ವಚ್ಛಗೊಳಿಸಬೇಕು.

ವಾರ್‌ವಿಕ್ ಮೆಡಿಕಲ್ ಕಾಲೇಜಿನ ಡಾ. ಜೇಮ್ಸ್ ಗಿಲ್ ಹೇಳುವ ಪ್ರಕಾರ' ಮನೆಯ ನೆಲವನ್ನು ಸಾಮಾನ್ಯ ಬ್ಲೀಚ್‌ನಿಂದ ಶುಚಿಗೊಳಿಸುವುದರಿಂದ ಒಂದೇ ನಿಮಿಷದಲ್ಲಿ ವೈರಸ್‌ಗಳು ಸಾಯುತ್ತವೆ'.

ನಿಮ್ಮ ಮನೆ ಬಾಗಿಲಿಗೆ ಯಾರಾದರೂ ಆಹಾರ ಡೆಲಿವರಿ ಮಾಡಲು ಬಂದರೆ, ಕಾಲಿಂಗ್ ಬೆಲ್ ಒತ್ತಿ ಆಹಾರವನ್ನು ಅಲ್ಲಿಯೇ ಇಟ್ಟು ತೆರಳುವಂತೆ ತೆರಳಬೇಕು. ಮನೆಯ ಮಾಲೀಕರು ನಂತರ ಆಹಾರವನ್ನು ತೆಗೆದುಕೊಳ್ಳಬೇಕು.

ಊಟ ಮಾಡುವ ಮುನ್ನ 20 ಸೆಕೆಂಡುಗಳ ಕಾಲ ಕೈಯನ್ನು ಸೋಪು ಅಥವಾ ಯಾವುದೇ ಹ್ಯಾಂಡ್‌ವಾಶ್‌ನಿಂದ ತೊಳೆದುಕೊಳ್ಳಿ. ಪಿಜ್ಜಾ ಯಾವುದೇ ರೀತಿಯ ಆಹಾರವನ್ನು ಆರ್ಡರ್ ಮಾಡಿದ್ದಲ್ಲಿ ಮನೆಗೆ ಬಂದ ಬಳಿಕ ಅವುಗಳನ್ನು ಮತ್ತೊಂದು ಬಾರಿ ಬಿಸಿ ಮಾಡಿ ಸೇವಿಸುವುದು ಉತ್ತಮ.

English summary
How To Make Your Home Delivery Coronavirus Free. Here Is the Answer For All Home Delivery and Ready To Eat Food Delivery Related Questions. But There Is No Evidence The Coronavirus is Transmitted Through Food. If You Don't Want To Take a Risk Read The story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X