Aadhaar: ಆಧಾರ್ ಕಾರ್ಡ್‌ನಲ್ಲಿ ವಿಳಾಸ ಬದಲಾವಣೆಗೆ ಸರಳ ಮಾರ್ಗ
Aadhaar Card: ಯಾವುದಕ್ಕಾದರೂ ಅರ್ಜಿ ಸಲ್ಲಿಸಬೇಕೆಂದರೆ ಆಧಾರ್ ಕಾರ್ಡ್ ಬೇಕೇ ಬೇಕಾಗುತ್ತದೆ. ಇನ್ನು ನಿಮ್ಮ ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ಸುಲಭವಾಗಿ ಬದಲಾಯಿಸಿಕೊಳ್ಳಬೇಕೇ? ಇಲ್ಲಿದೆ ನೋಡಿ ಸರಳ ಮಾರ್ಗ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
* ಆಧಾರ್ ಕಾರ್ಡ್ನಲ್ಲಿರುವ ದಾಖಲಾಗಿರುವ ಬಯೋಮೆಟ್ರಿಕ್ ವಿವರನ್ನು ಅಪ್ಡೇಟ್ ಮಾಡುವುದು ಇದೀಗ ಬಹಳ ಸರಳ. ಮೊದಲು myaadhaar ಎಂಬ ಪೋರ್ಟಲ್ ಆನ್‌ಲೈನ್‌ಗೆ ಭೇಟಿ ನೀಡಿ https://myaadhaar.uidai.gov.in/ ಅಧಿಕೃತ UIDAI ಪೋರ್ಟಲ್ ಮತ್ತು ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ.
* ವಿಳಾಸ ನವೀಕರಣ ಮೇಲೆ ಕ್ಲಿಕ್ ಮಾಡಿ.
* ವಿಳಾಸ-ಅಅಪ್ಡೇಟ್ ಪ್ರಕ್ರಿಯೆಯೊಂದಿಗೆ ಮುಂದುವರೆಯಲು ಆಧಾರ್ ಆನ್‌ಲೈನ್‌ನಲ್ಲಿ ನವೀಕರಿಸಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ಅದಕ್ಕೂ ಮುಂಚೆ ಸೂಚನೆಗಳನ್ನು ಸರಿಯಾಗಿ ಓದಿ. ನಂತರ ಆಧಾರ್ ಅನ್ನು ನವೀಕರಿಸಲು ಮುಂದುವರಿಯಿರಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
* ಹೊಸ ವಿಳಾಸದ ವಿವರಗಳನ್ನು ಜಾತ್ರೆಯಿಂದ ನಮೂದಿಸಿ ಮತ್ತು ಅಗತ್ಯ ಆಧಾರ್ ಕಾರ್ಡ್ ವಿಳಾಸ ಬದಲಾವಣೆ ದಾಖಲೆಗಳನ್ನು ಅಪ್ಲೋಡ್ ಮಾಡಿ.

* 50 ರೂಪಾಯಿ ನಾಮಮಾತ್ರ ಶುಲ್ಕವನ್ನು ಪಾವತಿಸುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
* ಪಾವತಿಸಿದ ನಂತರ, ಸೇವಾ ವಿನಂತಿ ಸಂಖ್ಯೆ ಒದಗಿಸಲಾಗುತ್ತದೆ. ಭವಿಷ್ಯದಲ್ಲಿ ನಿಮ್ಮ ಆಧಾರ್ ವಿಳಾಸ ನವೀಕರಣ ಸ್ಥಿತಿಯನ್ನು ಪರಿಶೀಲಿಸಲು ಇದು ಅತ್ಯಗತ್ಯವಾಗಿದೆ.
* ಪರಿಶೀಲನೆ ಪೂರ್ಣಗೊಂಡ ಬಳಿಕ ನೀವು SMS ಅನ್ನು ಸ್ವೀಕರಿಸುತ್ತೀರಿ.
* ಆನ್ಲೈನ್ನಲ್ಲಿ ಆಧಾರ್ಕಾರ್ಡ್ ವಿಳಾಸ ಬದಲಾಯಿಸಿದಾಗ ತಕ್ಷಣಕ್ಕೆ ಅದು ಬದಲಾಗುವುದಿಲ್ಲ. UIDAI ಪ್ರಕ್ರಿಯೆಗೊಳಿಸಿದ ಬಳಿಕ ದಾಖಲೆಗಳನ್ನು ಪರಿಶೀಲಿಸಿ ವಿಳಾಸವನ್ನು ಬದಲಾಯಿಸುತ್ತದೆ. ಇದಕ್ಕಾಗಿ ಸುಮಾರು 10-15 ದಿನ ತೆಗೆದುಕೊಳ್ಳುತ್ತದೆ. ಮತ್ತೊಂದು ಸಂಗತಿಯೆಂದರೆ, ಸೇವಾ ವಿನಂತಿ ಸಂಖ್ಯೆ ನೆನಪಿನಲ್ಲಿ ಇಟ್ಟುಕೊಳ್ಳುವುದು ತುಂಬಾನೇ ಅಗತ್ಯ. ಇದು UIDAI ವೆಬ್ಸೈಟ್ನಲ್ಲಿ ಆಧಾರ್ ವಿಳಾಸ ಬದಲಾಗಿದೆಯೇ ಎಂದು ಪರಿಶೀಲಿಸಿ.
ಯಾವೆಲ್ಲಾ ದಾಖಲೆಗಳು ಬೇಕು?
* ಪಾಸ್ಪೋರ್ಟ್: ನಿಮ್ಮದು, ನಿಮ್ಮ ಸಂಗಾತಿಯ, ಅಥವಾ ಅಪ್ರಾಪ್ತ ವಯಸ್ಕರಿಗೆ, ಅವರ ಪೋಷಕರದ್ದು.
* ಬ್ಯಾಂಕ್ ಸ್ಟೇಟ್‌ಮೆಂಟ್/ಪಾಸ್‌ಬುಕ್: ಮಾನ್ಯತೆ ಪಡೆದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಿಂದ.
* ಪಡಿತರ ಚೀಟಿ
* ಮತದಾರರ ಗುರುತಿನ ಚೀಟಿ
* ಚಾಲನಾ ಪರವಾನಿಗೆ
* ಪಿಂಚಣಿದಾರರ ಕಾರ್ಡ್ ಅಥವಾ ಅಂಗವಿಕಲರ ಕಾರ್ಡ್
* CGHS/ECHS/ESIC/ಮೆಡಿ-ಕ್ಲೈಮ್ ಕಾರ್ಡ್
* ಯುಟಿಲಿಟಿ ಬಿಲ್‌ಗಳು : ವಿದ್ಯುತ್ ಬಿಲ್‌ಗಳು, ವಾಟರ್ ಬಿಲ್‌ಗಳು ಮತ್ತು ಟೆಲಿಫೋನ್ ಲ್ಯಾಂಡ್‌ಲೈನ್ ಬಿಲ್‌ಗಳು (ಕಳೆದ ಮೂರು ತಿಂಗಳೊಳಗೆ) ಸೇರಿದಂತೆ.
* ವಿಮಾ ಪಾಲಿಸಿ : ಜೀವನ ಮತ್ತು ವೈದ್ಯಕೀಯ ಪ್ರಕಾರಗಳು ಮಾತ್ರ.
* ಆಸ್ತಿ ತೆರಿಗೆ ರಶೀದಿ: ಒಂದು ವರ್ಷಕ್ಕಿಂತ ಒಳಗಿನದ್ದು.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications