ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ ಸಂದೇಶದ ಮೂಲಕ ಬ್ಯಾಂಕ್‌ ವಿವರ ಕದಿಯುವವರಿಂದ ಸುರಕ್ಷತೆ ಹೇಗೆ?

|
Google Oneindia Kannada News

ಬೆಂಗಳೂರು, ಅಕ್ಟೋಬರ್‌ 21: ದೀಪಾವಳಿ ಮತ್ತೆ ಬಂದಿದೆ. ಅದರೊಂದಿಗೆ ಉಡುಗೊರೆ ಹೊತ್ತ ಶುಭಾಶಯಗಳ ಸಂದೇಶವೂ ಸಾಮಾಜಿಕ ಜಾಲತಾಣ ವಾಟ್ಸಪ್‌ನಲ್ಲೂ ಹರಿದು ಬರುತ್ತದೆ. ಈ ಹಬ್ಬದ ಋತುವಿನ ಉತ್ತಮ ಪ್ರಯೋಜನವನ್ನು ಪಡೆಯಲು ವಂಚಕರು ನಕಲಿ ದೀಪಾವಳಿ ಕೊಡುಗೆಗಳು ಮತ್ತು ಸಂದೇಶಗಳ ಮೂಲಕ ಜನರನ್ನು ವಂಚಿಸಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ.

ಭಾರತ ಸರ್ಕಾರದ ಸೈಬರ್ ಸೆಕ್ಯುರಿಟಿ ತಂಡವು ನೀಡಿದ ಸಲಹೆಯ ಪ್ರಕಾರ, ಕೆಲವು ವೈರಲ್ ದೀಪಾವಳಿ ಶುಭಾಶಯ ಸಂದೇಶಗಳು ವೈಯಕ್ತಿಕ ಮತ್ತು ಬ್ಯಾಂಕಿಂಗ್ ವಿವರಗಳನ್ನು ಕದಿಯಲು ಬಳಕೆದಾರರನ್ನು ಗುರಿಯಾಗಿಸಿಕೊಂಡಿವೆ. ವೈರಲ್ ಸಂದೇಶಗಳಲ್ಲಿನ ಲಿಂಕ್‌ಗಳು .ಸಿಎನ್‌ ಡೊಮೇನ್ ವಿಸ್ತರಣೆಗಳನ್ನು ಬಳಸುವುದರಿಂದ ಈ ದೀಪಾವಳಿ ಸಂದೇಶಗಳು ಕೆಲವು ಚೀನೀ ವೆಬ್‌ಸೈಟ್‌ಗಳೊಂದಿಗೆ ಲಿಂಕ್‌ಗಳನ್ನು ಹೊಂದಿವೆ ಎಂದು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ ಬಹಿರಂಗಪಡಿಸಿದೆ. ಆದರೆ ಇತರರು .ಎಕ್ಸ್‌ವೈಝಡ್‌ ಮತ್ತು .ಟಿಒಪಿ ನಂತಹ ವಿಸ್ತರಣೆಗಳನ್ನು ಬಳಸುತ್ತಾರೆ.

ವಾಟ್ಸಾಪ್‌ನಲ್ಲಿಯೇ ಊಟ ಆರ್ಡರ್, PNR ಲೈವ್ ಸ್ಟೇಟಸ್ ಚೆಕ್ ಮಾಡಿ: ಹೇಗೆಂದು ತಿಳಿಯಿರಿವಾಟ್ಸಾಪ್‌ನಲ್ಲಿಯೇ ಊಟ ಆರ್ಡರ್, PNR ಲೈವ್ ಸ್ಟೇಟಸ್ ಚೆಕ್ ಮಾಡಿ: ಹೇಗೆಂದು ತಿಳಿಯಿರಿ

ಇತ್ತಿಚೇಗೆ ಬಳಕೆದಾರರಿಂದ ಮಾಹಿತಿಯನ್ನು ಕದಿಯಬಹುದಾದ ಲಿಂಕ್‌ಗಳೊಂದಿಗೆ ಒಂದೆರಡು ವೈರಲ್ ಸಂದೇಶಗಳನ್ನು ಸಹ ಕೆಲವರು ಸ್ವೀಕರಿಸಿದ್ದಾರೆ. ಅಂತಹ ಸಂದೇಶಗಳಲ್ಲಿ ಒಂದನ್ನು ಜನಪ್ರಿಯ ಭಾರತೀಯ ಆಭರಣ ಬ್ರ್ಯಾಂಡ್ ತನಿಷ್ಕ್‌ನಂತೆ ಕಾಣುವಂತೆ ವಿನ್ಯಾಸಗೊಳಿಸಲಾಗಿದೆ. ಕೇಂದ್ರ ಸರ್ಕಾರದ ತಂಡವು ಸಲಹೆಯಲ್ಲಿ ವಿವರಿಸಿದಂತೆ, ನಕಲಿ ಸಂದೇಶಗಳು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ (ವಾಟ್ಸಾಪ್, ಇನ್‌ಸ್ಟಾಗ್ರಾಮ್, ಟೆಲಿಗ್ರಾಮ್ ಇತ್ಯಾದಿ) ಚಲಾವಣೆಯಲ್ಲಿವೆ.

How to be safe from bank details stealers through Deepavali message?

ಅದು ಹಬ್ಬದ ಕೊಡುಗೆಯನ್ನು ಬಳಕೆದಾರರಿಗೆ ಉಡುಗೊರೆ ಲಿಂಕ್‌ಗಳು ಮತ್ತು ಬಹುಮಾನಗಳ ಇವೆ ಎಂಬಂತೆ ಸಂದೇಶ ಕಳಿಸಿ ಆಮಿಷವೊಡ್ಡುತ್ತದೆ. ಈ ಸೋಗು ಹೆಚ್ಚಾಗಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ವಾಟ್ಸಾಪ್, ಟೆಲಿಗ್ರಾಮ್, ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಗೆಳೆಯರೊಂದಿಗೆ ಲಿಂಕ್ ಅನ್ನು ಹಂಚಿಕೊಳ್ಳಲು ಸಲಹೆ ನೀಡುತ್ತದೆ.

Gandhi Jayanti 2022 Wishes : ಗಾಂಧಿ ಜಯಂತಿ ಸಂದೇಶ, ಉಲ್ಲೇಖ ಮತ್ತು ವಾಟ್ಸಪ್ ಮತ್ತು ಫೇಸ್‌ಬುಕ್ ಸ್ಟೇಟಸ್‌ಗಳುGandhi Jayanti 2022 Wishes : ಗಾಂಧಿ ಜಯಂತಿ ಸಂದೇಶ, ಉಲ್ಲೇಖ ಮತ್ತು ವಾಟ್ಸಪ್ ಮತ್ತು ಫೇಸ್‌ಬುಕ್ ಸ್ಟೇಟಸ್‌ಗಳು

ದುರುದ್ದೇಶಪೂರಿತ ಈ ಲಿಂಕ್ ಹೊಂದಿರುವ ದೀಪಾವಳಿ ಶುಭಾಶಯ ಸಂದೇಶವನ್ನು ವ್ಯಕ್ತಿಯೊಬ್ಬರು ಸ್ವೀಕರಿಸಿ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, ಅವರನ್ನು ಜನಪ್ರಿಯ ಬ್ರಾಂಡ್ ಅನ್ನು ಅನುಸರಿಸುವ ನಕಲಿ ವೆಬ್‌ಸೈಟ್‌ನೊಂದಿಗೆ ಸ್ವಾಗತಿಸಲಾಗುತ್ತದೆ. ವಿಶೇಷ ಉಡುಗೊರೆಯನ್ನು ಪಡೆಯುವ ಸಲುವಾಗಿ ಕೆಲವು ವೈಯಕ್ತಿಕ ವಿವರಗಳನ್ನು ತುಂಬಲು ಮತ್ತು ಅವರ ಸಂಪರ್ಕ, ಸಂದೇಶ, ಕರೆ ದಾಖಲೆಗಳಿಗೆ ಅನುಮತಿಯನ್ನು ನೀಡುವಂತೆ ಸಂದೇಶ ಸ್ವೀಕರಿಸಿದ ವ್ಯಕ್ತಿಯನ್ನು ಆಮಿಷಕ್ಕೆ ಒಳಪಡಿಸಲಾಗುತ್ತದೆ.

How to be safe from bank details stealers through Deepavali message?

ಮಾಹಿತಿಯನ್ನು ಸ್ವೀಕರಿಸಿದ ನಂತರ ವಿಶೇಷ ದೀಪಾವಳಿ ಉಡುಗೊರೆಯನ್ನು ಪಡೆಯಲು ನಿರ್ದಿಷ್ಟ ಸಂಖ್ಯೆಯ ಸ್ನೇಹಿತರು ಮತ್ತು ಅವರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳೊಂದಿಗೆ ಸಂದೇಶವನ್ನು ಹಂಚಿಕೊಳ್ಳಲು ಅವರನ್ನು ಕೇಳುತ್ತದೆ. ಅಂತಹ ವಂಚನೆಗಳಿಂದ ಸುರಕ್ಷಿತವಾಗಿರಲು ನೀವು ಎಂದಿಗೂ ನಿಮ್ಮ ಬ್ಯಾಂಕಿಂಗ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು, ವಿಶೇಷವಾಗಿ ಆನ್‌ಲೈನ್‌ನಲ್ಲಿ ಪರಿಶೀಲಿಸದ ಮೂಲದಿಂದ ಲಿಂಕ್ ಅನ್ನು ಸ್ವೀಕರಿಸದೆ. ಯಾವುದೇ ವೆಬ್‌ಸೈಟ್ ತೆರೆಯುವ ಮೊದಲು, ನೀವು ಯುಆರ್‌ಎಲ್‌ ಅನ್ನು ಎಚ್ಚರಿಕೆಯಿಂದ ಓದಬೇಕು ಮತ್ತು ಅನುಮಾನಾಸ್ಪದ ವಿಸ್ತರಣೆಗಳನ್ನು ಸಹ ಗಮನಿಸಬೇಕು ಎಂದು ಸರ್ಕಾರ ಸಲಹೆ ನೀಡಿದೆ.

English summary
Fraudsters have found a new way to cheat people with fake Deepavali offers and messages to take advantage of this festive season on social media with Deepavali greetings messages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X