ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಈ ರಾಜ್ಯದಲ್ಲಿ ಉದ್ಯೋಗಿಗಳಿಗೆ ರಜೆಯೋ ರಜೆ!

|
Google Oneindia Kannada News

ದೀಸ್ಪುರ್, ಡಿಸೆಂಬರ್ 09: ಸಾಮಾನ್ಯವಾಗಿ ಸರ್ಕಾರಿ ಉದ್ಯೋಗಿಗಳು ತಮ್ಮ ಪ್ರೀತಿಪಾತ್ರರ ಜೊತೆಗೆ ಗುಣಮಟ್ಟದ ಸಮಯವನ್ನು ಕಳೆಯುವುದರ ಜೊತೆಗೆ ಕಠಿಣ ಪರಿಶ್ರಮಕ್ಕಾಗಿ ಸಮಯವನ್ನು ವಿನಿಯೋಗಿಸುವುದು ಅಷ್ಟೇ ಮುಖ್ಯವಾಗಿರುತ್ತದೆ. ಈ ಹಿನ್ನೆಲೆ ಅಸ್ಸಾಂ ಸರ್ಕಾರವು ಈಗ ತನ್ನ ರಾಜ್ಯದ ಸರ್ಕಾರಿ ಉದ್ಯೋಗಿಗಳಿಗೆ ತಮ್ಮ ಪೋಷಕರೊಂದಿಗೆ ಸಮಯ ಕಳೆಯಲು ವಿಶೇಷ ಕ್ಯಾಶುಯಲ್ ರಜೆಯನ್ನು ನೀಡುತ್ತಿದೆ.

ಸರ್ಕಾರಿ ಉದ್ಯೋಗಿಗಳು ಮುಂದಿನ ವರ್ಷ ಫೆಬ್ರವರಿ 9 ಮತ್ತು 10 ರಂದು ಎರಡು ದಿನಗಳ ವಿಶೇಷ ರಜೆ ಪಡೆಯಬಹುದು ಎಂದು ಅಧಿಕೃತ ಪ್ರಕಟಣೆ ಶುಕ್ರವಾರ ತಿಳಿಸಿದೆ. ಈ ವಿಶೇಷ ರಜೆಗಳನ್ನು ಅನ್ವಯವಾಗಬೇಕಾದರೆ ಮತ್ತು ಪಡೆಯಲು ವಿವರವಾದ ನಿಯಮಗಳು ಮತ್ತು ವಿಧಾನಗಳನ್ನು ವಿಶೇಷ ವೆಬ್ ಪೋರ್ಟಲ್ ಮೂಲಕ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಸರ್ಕಾರಿ ನೌಕರಿ: 10 ಸಾವಿರ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಆಹ್ವಾನ, ಅರ್ಜಿ ಲಿಂಕ್ ಇಲ್ಲಿದೆಸರ್ಕಾರಿ ನೌಕರಿ: 10 ಸಾವಿರ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಆಹ್ವಾನ, ಅರ್ಜಿ ಲಿಂಕ್ ಇಲ್ಲಿದೆ

ಈ ವಿಶೇಷ ರಜೆಗಳನ್ನು ಮುಂದಿನ ಎರಡು ದಿನಗಳಲ್ಲಿ ಎರಡನೇ ಶನಿವಾರ ಮತ್ತು ಭಾನುವಾರದ ನಿಯಮಿತ ರಜಾದಿನಗಳೊಂದಿಗೆ ಜೋಡಣೆ ಮಾಡಲಾಗಿದೆ. ಹೀಗಾಗಿ ಉದ್ಯೋಗಿಗಳಿಗೆ ಒಟ್ಟು ನಾಲ್ಕು ದಿನಗಳ ಕಾಲ ರಜೆ ಸಿಗಲಿದೆ.

How State Government Employees To Get Special Casual Leaves In Assam

ಸಿಎಲ್ ಬಗ್ಗೆ ಘೋಷಿಸಿದ್ದ ಸಿಎಂ ಹಿಮಂತ್ ಶರ್ಮಾ:

ಕಳೆದ 2021ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಸ್ವಾತಂತ್ರ್ಯ ದಿನದಂದು ತಮ್ಮ ಮೊದಲ ಭಾಷಣದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ರಾಜ್ಯ ಸರ್ಕಾರಿ ನೌಕರರು ತಮ್ಮ ಪೋಷಕರು ಮತ್ತು ಮಾವಂದಿರೊಂದಿಗೆ ಸಮಯ ಕಳೆಯಲು ಕ್ಯಾಶುವಲ್ ರಜೆಯ ಬಗ್ಗೆ ಘೋಷಿಸಿದ್ದರು. ನಂತರ ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲಾಯಿತು. ಅಂತಹ ಮೊದಲ ರಜೆಗಳನ್ನು ಈ ವರ್ಷ ಜನವರಿ 6 ಮತ್ತು 7ರಂದು ನೀಡಲಾಗಿದೆ.

ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರನ್ನು ಹೊರತುಪಡಿಸಿ ಸಚಿವರು ಸೇರಿದಂತೆ ಎಲ್ಲರೂ ಈ ರಜೆಗಳನ್ನು ಪಡೆಯಬಹುದು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

English summary
How State Government Employees To Get Special Casual Leaves In Assam. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X