ಘೋಷಿತ ಅಪರಾಧಿ ಪಟ್ಟ, ಇಡಿ ಕೈಯಲ್ಲಿ ಮಲ್ಯ ಜುಟ್ಟ!

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜೂನ್. 15: ಘೋಷಿತ ಅಪರಾಧಿ ವಿಜಯ್ ಮಲ್ಯ ಅವರ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ತನ್ನ ಕಾನೂನು ಕುಣಿಕೆಯನ್ನು ಮತ್ತಷ್ಟು ಬಿಗಿ ಮಾಡಲು ಮುಂದಾಗಿದೆ. ಪ್ರಪಂಚದಾದ್ಯಂತ ಹೊಂದಿರುವ ಆಸ್ತಿಗಳನ್ನು ಮಲ್ಯ ಕಳೆದುಕೊಂಡರೂ ಆಶ್ಚರ್ಯವಿಲ್ಲ.

ಮಲ್ಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆರಂಭ ಮಾಡಿದರೆ ಇಂಗ್ಲೆಂಡಿನಿಂದ ಮಲ್ಯ ದೇಶಕ್ಕೆ ಹಿಂದಿರುಗುವ ಸಾಧ್ಯತೆಯೂ ಇದೆ. ಮಲ್ಯ ಒಂದು ವೇಳೆ ಹಿಂದಿರುಗುವ ಸೂಚನೆ ಸಿಕ್ಕರೆ ಅವರನ್ನು ವಶಕ್ಕೆ ಪಡೆದು ಪ್ರಶ್ನೆ ಮಾಡಲು ಸಿದ್ಧತೆ ನಡೆಯುತ್ತಿದೆ.[]

vijay mallya

ಜಾರಿ ನಿರ್ದೇಶನಾಲಯದ ಅಡಿ ಮಲ್ಯರ ಎಲ್ಲ ಆಸ್ತಿ
ಮಲ್ಯರ ಕೋಟೆ ಛಿದ್ರವಾಗಿದ್ದು ಅವರ ಎಲ್ಲ ಆಸ್ತಿಯ ಮೇಲೆ ಇದೀಗ ಜಾರಿ ನಿರ್ದೇಶನಾಲಯ ಹಕ್ಕು ಸ್ಥಾಪನೆ ಮಾಡಿದೆ.
ಇನ್ನು ಮಲ್ಯರನ್ನು ಬ್ರಿಟನ್ ನಿಂದ ಕರೆಸಿಕೊಳ್ಳುವ ಸಾದ್ಯತೆಗಳತ್ತವೂ ಇಡಿ ಗಮನ ಹರಿಸಿದೆ. ಮಲ್ಯರ ಆಸ್ತಿ ಮೇಲೆ ಹಕ್ಕು ಸಾಧಿಸಿದರೆ ಅವರಾಗಿಯೇ ಮನವಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಇಡಿಯ ಅಧಿಕಾರಿಯೊಬ್ಬರು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.

ಘೋಷಿತ ಅಪರಾಧಿ ಪದವನ್ನು ಹಿಡಿದುಕೊಂಡು ಇಡಿ ಬ್ರಿಟನ್ ಗೆ ತೆರಳುವಂತೆ ಇಲ್ಲ. ಇಡಿಯ ವ್ಯಾಪ್ತಿ ಭಾರತಕ್ಕೆ ಸೀಮಿತ. ಮಲ್ಯ ಬರಲಿ ಬಾರದಿರಲಿ ಬ್ಯಾಂಕುಗಳಿಗೆ ಹಣ ಪಾವತಿಯಾಗುವುದು ಮುಖ್ಯವಾದ ಅಂಶ. ಅವರ ಆಸ್ತಿ ಮಾರಾಟ ಮಾಡುವುದರಿಂದ ಹಣ ಸಂಗ್ರಹಣೆ ಆದರೆ ಗೊಂದಲ ಬಗೆಹರಿದಂತೆಯೇ.[ಸಾಲ ಮಾಡಿ ತುಪ್ಪ ತಿಂದವ್ರು ಮಲ್ಯ ಒಬ್ರೇ ಅಲ್ಲ ಸ್ವಾಮೀ!]

ಮಲ್ಯರಿಗೆ 30 ದಿನದ ಅವಕಾಶ
ಮಲ್ಯರಿಗೆ ನ್ಯಾಯಾಲಯದ ಆದೇಶದ ದಿನದಿಂದ(ಜೂನ್ 14) ಮೂವತ್ತು ದಿನಗಳ ಕಾಲಾವಕಾಶ ಸಿಕ್ಕಿದೆ. ಹಾಗಾಗಿ ಇಡಿ ಸಹ ಒಂದು ತಿಂಗಳು ಕಾಯಲು ಮುಂದಾಗಿದೆ. [ಟಿಪ್ಪು ಖಡ್ಗ ತಂದ ಮಲ್ಯರ ಗತಕಾಲದ ವೈಭವ ಹೇಗಿತ್ತು?]

ಒಂದು ವೇಳೆ ಕಾಲಾವಕಾಶ ಮುಗಿದರೂ ಮಲ್ಯ ಹಾಜರಾಗದಿದ್ದರೆ ಇಡಿ ಕಠಿಣ ಕ್ರಮಕ್ಕೆ ಮುಂದಾಗುವುದು ನಿಶ್ಚಿತ. ಇಡಿಯ ಮೊದಲ ಗುರಿ ಮಲ್ಯರ ಎಲ್ಲ ಆಸ್ತಿಗಳ ದಾಖಲೆ ಸಂಗ್ರಹಿಸಿ ತನ್ನ ಸುಪರ್ದಿಗೆ ಪಡೆದುಕೊಳ್ಳುವುದು.(ಒನ್ ಇಂಡಿಯಾ ನ್ಯೂಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
With a proclaimed offender tag against his name, Vijay Mallya now runs the risk of losing all his properties across the world. The Enforcement Directorate's move to declare him a proclaimed offender was more to squeeze Mallya out by attaching all his properties across the world. The ED feels that if all his properties are attached there is a greater chance that he may return to India by himself. On Tuesday, the Special Prevention of Money Laundering Court had declared Mallya a proclaimed offender.
Please Wait while comments are loading...