ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಹಲವು ಸವಾಲು ಯಶಸ್ವಿಯಾಗಿ ಎದುರಿಸಿದ ಭಾರತ
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿದೆ. ಪ್ರಧಾನಮಂತ್ರಿಗಳನ್ನೇ ಪದಚ್ಯುತಿಗೊಳಿಸಲಾಯಿತ್ತು ಮತ್ತು 45 ನಿಮಿಷಗಳಲ್ಲಿ ಹೊರಡುವಂತೆ ಸೂಚಿಸಲಾಯಿತು. ಇಂತಹ ಸನ್ನಿವೇಶವನ್ನು ಆಫ್ರಿಕಾದ ಕೆಲವು ರಾಷ್ಟ್ರಗಳಲ್ಲಿ ನೋಡಿರಬಹುದು. ಆದರೆ ಬಾಂಗ್ಲಾದೇಶದ ವಿಚಾರದಲ್ಲಿ ಈ ಬೆಳವಣಿಗೆ ಗೋಡೆ ಮೇಲೆ ಬರೆದ ಬರಹವಾಗಿತ್ತು.
ಪ್ರಧಾನಿ ಶೇಖ್ ಹಸೀನಾ 5ನೇ ಅವಧಿಯ ಆರಂಭದ ದಿನಗಳಲ್ಲಿಯೇ ಸರ್ಕಾರದ ವಿರುದ್ಧ ನಡೆದ ಮೀಸಲಾತಿ ವಿರೋಧಿ ಹಿಂಸಾತ್ಮಕ ಪ್ರತಿಭಟನೆಗಳು ಭಾರತದಲ್ಲಿ ನಡೆದ ಕೆಲವು ಪ್ರತಿಭಟನೆ ನೆನಪಿಸುತ್ತದೆ. 80ರ ದಶಕದಲ್ಲಿ ನಡೆದ ಮಂಡಲ್ ಆಯೋಗದ ಪ್ರತಿಭಟನೆಯನ್ನು ನೆನಪಿಸಿತು.

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರವಾಧಿಯಿಂದ ನೋಟುಗಳ ಅಮಾನ್ಯೀಕರಣ ರಿಂದ ರೈತರ ಚಳವಳಿ ತನಕ ಭಾರತದ ಜನರು ಸರ್ಕಾರದ ತೀರ್ಮಾನದ ವಿರುದ್ಧ ಅಸಮಾಧಾನಗಳನ್ನು ನೋಡಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ಈ ಸವಾಲುಗಳನ್ನು ನೇರವಾಗಿ ಎದುರಿಸಿದೆ ಮತ್ತು ಯಶಸ್ಸು ಕಂಡಿದೆ.
ಬಿಜೆಪಿ ನರೇಂದ್ರ ಮೋದಿ ನೇತೃತ್ವದಲ್ಲಿ 2014ರಲ್ಲಿ ಅಧಿಕಾರಕ್ಕೇರಿತು, ಇದಕ್ಕೆ ಜನರ ಭಾರೀ ಬೆಂಬಲ ಸಿಕ್ಕಿತು. ಮತದಾರರು 'ಬ್ರಾಂಡ್ ಮೋದಿ' ಎಂಬುದರ ಮೇಲೆ ನಂಬಿಕೆ ಇಟ್ಟರು. ಆಗಲೇ ಮೋದಿ ಸರ್ಕಾರ ಹಲವು ಸವಾಲುಗಳನ್ನು ಹೊತ್ತುಕೊಂಡಿತು.
ಕೆಲವು ನಿರ್ಧಾರಗಳಿಗೆ ವಿರೋಧ ಪಕ್ಷಗಳ ವ್ಯಾಪಕ ವಿರೋಧದ ನಡುವೆಯೂ ಮೋದಿ ಸರ್ಕಾರ ಚಳವಳಿಯನ್ನು ಜನಾಭಿಪ್ರಾಯವಾಗಿ ಪರಿವರ್ತನೆ ಮಾಡಿತು. ಜನರ ಬೆಂಬಲದ ಜೊತೆಗೆ ಸರ್ಕಾರ ಹಲವು ಪ್ರಕ್ಷುಬ್ಧ ಪರಿಸ್ಥಿತಿಗಳನ್ನು ನಿಭಾಯಿಸಿತು. ಮೋದಿ ಸರ್ಕಾರ ಎದುರಿಸಿದ ಕೆಲವು ನಿರ್ಣಾಯಕ ಪರಿಸ್ಥಿತಿಗಳ ಕಡೆ ಗಮನ ಹರಿಸೋಣ, ಸರ್ಕಾರವನ್ನೇ ಗುರಿಯಾಗಿಸಿದ್ದ ಸಂದರ್ಭದಲ್ಲಿ ಎನ್‌ಡಿಎ ಸರ್ಕಾರ ಹೇಗೆ ಸುರಕ್ಷಿತವಾಗಿ ಸಾಗಿತು ಎಂದು ತಿಳಿಯೋಣ.
ವಿರೋಧ ಪಕ್ಷಗಳ ನಾಯಕರು ಭಾರತ ಮತ್ತು ಬಾಂಗ್ಲಾದೇಶದ ಚಿತ್ರಣವನ್ನು ಸಮಾನಾಂತರವಾಗಿ ಚಿತ್ರಿಸಲು ಪ್ರಯತ್ನಿಸುವ ಸಂದರ್ಭದಲ್ಲಿ ಚರ್ಚೆಗಳು ಆರಂಭವಾಗಿದೆ. ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್, "ಬಾಂಗ್ಲಾದೇಶದಲ್ಲಿ ನಡೆಯುತ್ತಿರುವು ಇಲ್ಲಿಯೂ ನಡೆಯಬಹುದು" ಎಂದು ಮತ್ತು ಎನ್‌ಸಿಪಿ ನಾಯಕ ಫಾರೂಕ್ ಅಬ್ದುಲ್ಲಾ ಭಾರತದ ಸದ್ಯದ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿ, "ವಿದ್ಯಾರ್ಥಿಗಳು ಚಳವಳಿ ಆರಂಭಿಸಿದರೆ ಯಾರೂ ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಇದು ಪಾಠ, ಕೇವಲ ಬಾಂಗ್ಲಾದೇಶಕ್ಕೆ ಮಾತ್ರವಲ್ಲ, ಆದರೆ ಎಲ್ಲಾ ಸರ್ವಾಧಿಕಾರಿಗಳಿಗೆ" ಎಂದು ಹೇಳಿದ್ದಾರೆ.
ದೆಹಲಿ ಕೋಚಿಂಗ್ ಸೆಂಟರ್ ಸಾವು, ಪ್ರತಿಭಟನೆ

ಜುಲೈ ತಿಂಗಳಿನಲ್ಲಿ ಬಾಂಗ್ಲಾದೇಶ ವಿದ್ಯಾರ್ಥಿಗಳ ಪ್ರತಿಭಟನೆ ಎದುರಿಸುತ್ತಿದ್ದರೆ ಇದೇ ಮಾದರಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ದೆಹಲಿಯಲ್ಲಿ ನಡೆಯಿತು. ಯುಪಿಎಸ್‌ಸಿ ಕೋಚಿಂಗ್ ಸೆಂಟರ್‌ನಲ್ಲಿ ನೀರು ತುಂಬಿದ ಕಾರಣಕ್ಕೆ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದರು. ವಿದ್ಯಾರ್ಥಿಗಳು ದೆಹಲಿ ಸರ್ಕಾರ, ದೆಹಲಿ ಮಹಾನಗರ ಪಾಲಿಕೆ, ಕೋಚಿಂಗ್ ಸೆಂಟರ್ ವಿರುದ್ಧ ಆಕ್ರೋಶಗೊಂಡರು. ದೆಹಲಿ ಲೆಫ್ಟಿನೆಂಟ್ ಗೌರ್ನರ್ ಕೋಚಿಂಗ್ ಸೆಂಟರ್‌ಗಳನ್ನು ನಿಯಂತ್ರಿಸಲು ನಿಯಮ ರೂಪಿಸಲು ಆಯೋಗವೊಂದನ್ನು ರಚಿಸಿದರು. ಕೋಚಿಂಗ್ ಸೆಂಟರ್‌ಗಳನ್ನು ಸ್ಥಳಾಂತರ ಮಾಡುವ ಕುರಿತು ಸಲಹೆಗಳಿವೆ. ನರೇಲಾ, ರೋಹಿಣಿ ಮುಂತಾದ ಪ್ರದೇಶಗಳ ಸೆಂಟರ್ ಸ್ಥಳಾಂತರ ವಿದ್ಯಾರ್ಥಿಗಳ ಕೋಪ ತಣ್ಣಗಾಗಿಸಿತು.
ಅಗ್ನಿವೀರ್ ಪ್ರತಿಭಟನೆ

ಎರಡು ವರ್ಷಗಳ ಹಿಂದೆ 2022ರಲ್ಲಿ ಕೇಂದ್ರ ಸರ್ಕಾರ ಅಗ್ನಪಥ್ ಯೋಜನೆ ಪರಿಚಯಿಸಿತು. ಭವಿಷ್ಯದಲ್ಲಿ ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆ ನೇಮಕಾತಿಯಲ್ಲಿ ಸುಧಾರಣೆ ತರುವ ದೂರದೃಷ್ಟಿ ಇದರಲ್ಲಿತ್ತು. ಹಳೆಯ ನೇಮಕಾತಿ ಪದ್ಧತಿಯನ್ನು ಬದಲಾಯಿಸಿ, ಪರಿಣಾಮಕಾರಿ ಮತ್ತು ಹೊಂದಿಕೊಳ್ಳುವ ಪ್ರಕ್ರಿಯೆ ಇದಾಗಿತ್ತು. ನೇಮಕಾತಿ ಹೊಂದಿದ ಶೇ 75ರಷ್ಟು ಅಭ್ಯರ್ಥಿಗಳು ನಾಲ್ಕು ವರ್ಷದ ಬಳಿಕ ದೃಢವಾದ ಆರ್ಥಿಕ ಸೌಲಭ್ಯ ಮತ್ತು ಕೆಲಸದ ಜೊತೆ ನಿವೃತ್ತಿಯಾಗುವ ಯೋಜನೆ ಮೊದಲು ಪ್ರತಿಭಟನೆ ಎದುರಿಸಿತು. ಪ್ರಧಾನಿ ನರೇಂದ್ರ ಮೋದಿ ತೀರ್ಮಾನದಿಂದ ಪ್ರತಿಭಟನೆ ಮತ್ತು ಸವಾಲುಗಳ ಹೊರತಾಗಿಯೂ ಅಕ್ರೋಶ ಶಾಂತವಾಯಿತು. ರಕ್ಷಣಾ ಕ್ಷೇತ್ರದಲ್ಲಿನ ಅಭಿವೃದ್ಧಿ ಮತ್ತು ಸ್ಥಿರತೆಗೆ ಅನುಕೂಲವಾಯಿತು. ಈ ಯೋಜನೆ ಕುರಿತು ಪುನರ್ ಚಿಂತನೆ ಅಗತ್ಯವಿದೆ ಎಂದು ಬಿಜೆಪಿ ಮಿತ್ರಪಕ್ಷಗಳೇ ಹೇಳಿದವು. ಯೋಜನೆಯ ಪರಿಣಾಮ ರಕ್ಷಣಾ ವಲಯ ರಾಜಕೀಯದ ಮೇಲೆಯೂ ಆಯಿತು.
ನೋಟುಗಳ ಅಮಾನ್ಯೀಕರಣ

2016ರ ನೋಟುಗಳ ಅಮಾನ್ಯೀಕರಣ 1.3 ಬಿಲಿಯನ್ ಜನರ ಮೇಲೆ ಪರಿಣಾಮ ಬೀರಿದ ಮೋದಿ ಸರ್ಕಾರದ ಮೊದಲ ದೊಡ್ಡ ತೀರ್ಮಾನ. ಈ ದಿಢೀರ್ ನಿರ್ಧಾರ ದೇಶವೇ ಸ್ತಬ್ಧವಾಗುವಂತೆ ಮಾಡಿತು. ಆದರೆ ದೇಶಕ್ಕಾಗಿ ಎಂಬ ಪ್ರಧಾನಿಗಳ ನಡೆಯಿಂದ ದೇಶದ ಜನರು ಅಮಾನ್ಯೀಕರಣದ ವೇಳೆ ಹಲವು ಸಂಕಷ್ಟ ಎದುರಿಸಿದರು. ಆದರೆ ಸರ್ಕಾರದ ಮೇಲೆ ನಂಬಿಕೆ ಇಟ್ಟರು, ಯಾವುದೇ ಅವ್ಯವಸ್ಥೆ ಆಗದಂತೆ ಪರಿಸ್ಥಿತಿ ನಿಧಾನವಾಗಿ ಸುಧಾರಿಸಿತು.
ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10 ಮೀಸಲಾತಿ

2019ರಲ್ಲಿ ಮೋದಿ ಸರ್ಕಾರ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಲ್ಲಿ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ ವರ್ಗಗಳಿಗೆ ಶೇ.10 ಮೀಸಲಾತಿ ನೀಡುವುದನ್ನು ಪರಿಚಯಿಸಿತು. ಇದಕ್ಕೆ ಸಾಂವಿಧಾನಿಕ ತಿದ್ದುಪಡಿ ಬೇಕಿತ್ತು. ಆದರೂ ಭಾರತದಲ್ಲಿ ಮೀಸಲಾತಿ ಸೂಕ್ಷ್ಮವಾದ ವಿಚಾರ. ಈ ಹೆಜ್ಜೆಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದರೂ ಸಹ ಬೆಂಬಲ ಸಿಕ್ಕಿತು. ಮಂಡಲ್ ಆಯೋಗದ ರೀತಿ ಆಗಬಹುದು ಎಂಬ ನಿರೀಕ್ಷೆ ಇತ್ತು ಆದರೆ ಮೋದಿ ಸರ್ಕಾರ ಪಕ್ಷಗಳನ್ನು ಒಟ್ಟುಗೂಡಿಸಿ, ಯಶಸ್ವಿಯಾಗಿ ಇದನ್ನು ಪರಿಚಯಿಸಿತು.
370ನೇ ವಿಧಿ ರದ್ದು

2019ರ ಆಗಸ್ಟ್ 5ರಂದು ಮೋದಿ ಸರ್ಕಾರ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿತು. ಈ ಅಭೂತಪೂರ್ವ ನಿರ್ಧಾರ ಪ್ರಾದೇಶಿಕ ಪಕ್ಷಗಳ ನಾಯಕರ ಆಕ್ರೋಶಕ್ಕೆ ಕಾರಣವಾಯಿತು. ಬಿಜೆಪಿ ಪಾಕಿಸ್ತಾನ ಪರ ಭಾವನೆಗಳನ್ನು ಹೊಂದಿದೆ ಎಂದು ಆರೋಪಿಸಲಾಯತು. ಈ ಸಮಯದಲ್ಲಿ ಸ್ಥಳೀಯ ಕಾಶ್ಮೀರಿ ಜನರನ್ನು ಸಮಾಧಾನ ಪಡಿಸಲು ಮೋದಿ ಸರ್ಕಾರ ರಾಷ್ಟ್ರೀಯ ಭದ್ರತಾ ಸಲಹೆಗಾಗ ಅಜಿತ್ ದೋವಲ್ ಅವರನ್ನು ಕಳಿಸಿತು. ಕಾಶ್ಮೀರಿ ಜನರ ಬೆಂಬಲ ಮತ್ತು ಬದ್ಧತೆಯಿಂದ ಮೋದಿ ಮತ್ತು ಎನ್‌ಡಿಎ ಸರ್ಕಾರ ಯಶಸ್ವಿಯಾಗಿ ಜಮ್ಮು ಮತ್ತು ಕಾಶ್ಮೀರವನ್ನು ಮುಖ್ಯ ವಾಹಿನಿಗೆ ತಂದಿತು.
ಸುಪ್ರೀಂಕೋರ್ಟ್‌ನ ಬಾಬ್ರಿ ಮಸೀದಿ ತೀರ್ಪು

ನವೆಂಬರ್ 9, 2019ರಂದು ಸುಪ್ರೀಂಕೋರ್ಟ್ ರಾಮಜನ್ಮಭೂಮಿ ವಿವಾದದ ಕುರಿತು ಐತಿಹಾಸಿಕ ತೀರ್ಪು ನೀಡಿತು. ಶಾಂತಿಭಂಗವಾಗುವ ಸಂಭಾವ್ಯ ಪರಿಸ್ಥಿತಿಯಲ್ಲಿಯೂ ಸಹ ಕೇಂದ್ರ ಸರ್ಕಾರ ಶಾಂತಿಯನ್ನು ಕಾಪಾಡಿತು. ಯಾವುದೇ ಅಹಿತಕರ ಘಟನೆಗಳಿಲ್ಲದೇ ತೀರ್ಪನ್ನು ದೇಶಾದ್ಯಂತ ಸ್ವೀಕಾರ ಮಾಡಲಾಯಿತು. ಇದು ಬಹಳ ಹಿಂದಿನ ವಿವಾದವಾಗಿತ್ತು. ಆದರೆ ಇದನ್ನು ಸರ್ಕಾರ ನಿರ್ವಹಣೆ ಮಾಡಿದ ರೀತಿ ವಿರೋಧ ಪಕ್ಷಗಳಲ್ಲೂ ಅಚ್ಚರಿ ಮೂಡಿಸಿತು.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)

2019ರಲ್ಲಿ 370ನೇ ವಿಧಿಯನ್ನು ರದ್ದು, ರಾಮಜನ್ಮಭೂಮಿ ತೀರ್ಪಿನ ನಡುವೆಯೂ ಲೋಕಸಭೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಗೆ ಅನುಮೋದನೆ ನೀಡಿತು. ದೆಹಲಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆ ಕೋಮು ಸಂಘರ್ಷಕ್ಕೆ ಕಾರಣವಾಯಿತು. ಸರ್ಕಾರ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಿತು. ಆದರೆ ಕೋವಿಡ್ ಸಂದರ್ಭದಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿತು. ಪ್ರತಿಭಟನೆ ವೇಳೆ ರಾಜಕೀಯ ಹಿತಾಸಕ್ತಿಗಳಿಂದ ಹಿಂಸಾಚಾರ ನಡೆಯಿತು ಬಳಿಕ ಪರಿಸ್ಥಿತಿ ಶಾಂತವಾಯಿತು.
ರೈತರ ಪ್ರತಿಭಟನೆ

ಕೋವಿಡ್ ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿಯೇ ರೈತ ಸಂಘಟನೆಗಳು ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಮತ್ತು ಇತರ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಿದವು. ಇದು ಭಾರತದಲ್ಲಿ ರಸ್ತೆಯಲ್ಲಿ ನಡೆದ ಬಹುದೊಡ್ಡ ಪ್ರತಿಭಟನೆಯಾಗಿದೆ. 2021ರ ಜನವರಿ 26ರಂದು ಟ್ರಾಕ್ಟರ್ ಮೂಲಕ ಕೆಂಪುಕೋಟೆ ಬಳಿಕ ಹಿಂಸಾಚಾರ ನಡೆಸಲು ಪ್ರಯತ್ನ ಮಾಡಲಾಯಿತು. ಸರ್ಕಾರ ಮತ್ತು ದೆಹಲಿ ಪೊಲೀಸರು ಪ್ರತಿರೋಧದ ನಡುವೆ ಪರಿಸ್ಥಿತಿಯನ್ನು ನಿಭಾಯಿಸಲಾಯಿತು. ಸಿಎಎ ಪ್ರತಿಭಟನೆ ಮತ್ತು ರೈತರ ಚಳವಳಿ ಸಂದರ್ಭದಲ್ಲಿ ಸಮಾಜಘಾತುಕ ಶಕ್ತಿಗಳು ಸಕ್ರಿಯವಾಗಿದ್ದವು, ಆದರೆ ಕಟ್ಟುನಿಟ್ಟಿನ ಕ್ರಮ ಪರಿಸ್ಥಿತಿ ನಿಭಾಯಿಸಲು ಸಹಕಾರಿಯಾಯಿತು. ಮೋದಿ ಸರ್ಕಾರ ಇಂತಹ ಕ್ಲಿಷ್ಟಕರ ಪರಿಸ್ಥಿತಿಯನ್ನು ಸರಿಯಾದ ಯೋಜನೆ ಮತ್ತು ಜನರ ಬೆಂಬಲದಿಂದ ಸಮರ್ಥವಾಗಿ ನಿಭಾಯಿಸಿದೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ












Click it and Unblock the Notifications