• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾ ಯುವತಿಯರನ್ನು ಬಳಸಿ ಐಎಸ್ಐನಿಂದ ಭಾರತೀಯರ ಹನಿ ಟ್ರ್ಯಾಪ್

By ವಿಕ್ಕಿ ನಂಜಪ್ಪ
|

ನವದೆಹಲಿ, ಅಕ್ಟೋಬರ್ 12: ಬ್ರಹ್ಮೋಸ್ ಕ್ಷಿಪಣಿ ರಹಸ್ಯದ ಹಸ್ತಾಂತರ ಪ್ರಕರಣ ಆಘಾತ ಸೃಷ್ಟಿಸಿದ ಬೆನ್ನಲ್ಲೇ, ಗುಪ್ತಚರ ಇಲಾಖೆಯು 'ಹನಿ ಟ್ರ್ಯಾಪ್'ಗಳ ಕುರಿತು ಎಚ್ಚರಿಕೆ ಹೊರಡಿಸಿದೆ.

ಕ್ಷಿಪಣಿ ತಂತ್ರಜ್ಞಾನದಲ್ಲಿ ಭಾರತದ ಮಹತ್ವದ ಸಾಧನೆ: ಏನಿದು ಹೈಪರ್‌ಸಾನಿಕ್ ಕ್ಷಿಪಣಿ ವಾಹನ?

ಭಾರತದಲ್ಲಿನ ಮಹತ್ವದ ಮತ್ತು ರಹಸ್ಯ ಮಾಹಿತಿಗಳನ್ನು ಪಡೆದುಕೊಳ್ಳಲು ಅವುಗಳನ್ನು ಬಲ್ಲ ಉನ್ನತ ಶ್ರೇಯಾಂಕದ ಅಧಿಕಾರಿಗಳನ್ನು ಹನಿ ಟ್ರ್ಯಾಪ್‌ನಲ್ಲಿ ಸಿಲುಕಿಸುವ ಸಲುವಾಗಿ ಪಾಕಿಸ್ತಾನ ಮತ್ತು ಚೀನಾದ ಸುಂದರ ಯುವತಿಯರನ್ನು ಪಾಕಿಸ್ತಾನದ ಐಎಸ್‌ಐ ಬಳಸಿಕೊಳ್ಳುತ್ತಿದೆ ಎಂದು ಈ ಎಚ್ಚರಿಕೆ ತಿಳಿಸಿದೆ.

ಭಾರತದ ಪ್ರಮುಖ ಕ್ಷಿಪಣಿ "ಬ್ರಹ್ಮೋಸ್ " ಕುರಿತ ತಾಂತ್ರಿಕ ಮಾಹಿತಿಗಳನ್ನು ಐಎಸ್​ಐ ಉಗ್ರರಿಗೆ ಮತ್ತು ಅಮೆರಿಕದ ಗುಪ್ತಚರ ಏಜೆನ್ಸಿಗಳಿಗೆ ನೀಡುತ್ತಿದ್ದ ಎಂದು ಮಾಹಿತಿ ಮೇರೆಗೆ ಬಲೆ ಬೀಸಿ ನಿಶಾಂತ್ ಅಗರವಾಲ್ ಎಂಬಾತನನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗಿತ್ತು.

ಪಾಕಿಸ್ತಾನಕ್ಕೆ ಕ್ಷಿಪಣಿ ರಹಸ್ಯ ಮಾರಾಟ, ಡಿಆರ್ ಡಿಒ ಸಿಬ್ಬಂದಿ ಬಂಧನ

ಗಡಿಯಲ್ಲಿ ಚೀನಾದ ರಸ್ತೆ: ಭಾರತದ ಆತಂಕಕ್ಕೆ ಕಾರಣವೇನು?

ನಾಗ್ಪುರದ ಡಿಆರ್ ಡಿಒ ಬ್ರಹ್ಮೋಸ್ ಘಟಕದಲ್ಲಿ ಜ್ಯೂನಿಯರ್ ಸೈಂಟಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನಿಶಾಂತ್ ಅಗರವಾಲ್ ಪಾಕಿಸ್ತಾನದ ಐಎಸ್ಐ ಜತೆ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದೆ.

ಕೆನಡಾದಿಂದ ಆಫರ್

ಕೆನಡಾದಿಂದ ಆಫರ್

ಕೆನಡಾ ಮೂಲದ ಸೆಜಲ್ ಕಪೂರ್ ಎಂಬ ಮಹಿಳೆ ಜತೆ ನಿಶಾಂತ್ ಗೆ ಗೆಳೆತನ ಉಂಟಾಗಿತ್ತು. ಲಿಂಕ್ಡಿನ್ ಮೂಲಕ ಮೊದಲಿಗೆ ನಿಶಾಂತ್ ಗೆ ಆಕೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ನಂತರ ಫೇಸ್ ಬುಕ್ ನಲ್ಲಿ ಇಬ್ಬರ ಚಾಟಿಂಗ್ ನಿರಂತರವಾಗಿ ಸಾಗಿತ್ತು. ನಿಶಾಂತ್ ಗೆ ಕೆನಡಾದಲ್ಲಿ ಉದ್ಯೋಗ, ಸರಿ ಸುಮಾರು 30,000 ಡಾಲರ್ ಪ್ರತಿ ತಿಂಗಳು ಸಂಬಳದ ಆಫರ್ ಬಂದಿತ್ತು.

ಸೆಜಲ್ ಕಪೂರ್ ಅಲ್ಲದೆ ಮತ್ತೊಬ್ಬ ಮಹಿಳೆ ಜತೆ ನಿಶಾಂತ್, ಫೇಸ್ ಬುಕ್ ನಲ್ಲಿ ಚಾಟಿಂಗ್ ನಡೆಸಿದ್ದ. ಆಕೆ ಹೆಸರು ನೇಹಾ ಶರ್ಮ ಎಂದಿದ್ದು, ಪಾಕಿಸ್ತಾನದಲ್ಲಿ ಐಪಿ ಅಡ್ರೆಸ್ ಪತ್ತೆ ಆಗಿದೆ.

ನಿಶಾಂತ್‌ನನ್ನು ಹನಿ ಟ್ರ್ಯಾಪ್‌ನಲ್ಲಿ ಸಿಲುಕಿಸಿ ಆತನಿಂದ ರಹಸ್ಯ ಮಾಹಿತಿಗಳನ್ನು ಪಡೆದುಕೊಳ್ಳಲಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬ್ರಹ್ಮೋಸ್ ಸೋರಿಕೆ : ಮಹಿಳೆ ಜತೆ ಗೆಳೆತನ, ವೇತನದ ಬಲೆಯಲ್ಲಿ ನಿಶಾಂತ್

ಎಚ್ಚರಿಕೆ ರವಾನೆ

ಎಚ್ಚರಿಕೆ ರವಾನೆ

ಇಂತಹ ಅನೇಕ ಘಟನೆಗಳು ವರದಿಯಾದ ಹಿನ್ನೆಲೆಯಲ್ಲಿ ಗುಪ್ತಚರ ಸಂಸ್ಥೆಯು ಎಲ್ಲ ಸರ್ಕಾರಿ ಇಲಾಖೆಗಳಿಗೆ ಎಚ್ಚರಿಕೆ ರವಾನಿಸಿದೆ. ಮುಖ್ಯವಾಗಿ ರಕ್ಷಣಾ ದಳಕ್ಕೆ ಸಂಬಂಧಿಸಿದ ಇಲಾಖೆಗಳಲ್ಲಿ ಇಂತಹ 'ಉರುಳಿ'ನ ಬಗ್ಗೆ ತೀವ್ರ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಮತ್ತು ಅಧಿಕಾರಿಗಳಲ್ಲಿ ಇದರ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಅಂತರ್ಜಾಲದಲ್ಲಿ ತಾವು ಏನು ಮಾಡುತ್ತಿದ್ದೇವೆ ಎಂಬುದನ್ನು ಗಮನಿಸುವಂತೆ ಹೇಳಬೇಕು ಎಂದು ಐಬಿ ಹೇಳಿದೆ.

ಪ್ರತಿಭಾವಂತ ಅಗರವಾಲ್ ನಿಂದ ಗೇಮಿಂಗ್ ಕೋಡ್ ಬಳಸಿ ರಹಸ್ಯ ರವಾನೆ

ಚೀನಾ ಯುವತಿಯರ ಬಳಕೆ

ಚೀನಾ ಯುವತಿಯರ ಬಳಕೆ

'ಒನ್ ಇಂಡಿಯಾ'ದೊಂದಿಗೆ ಮಾತನಾಡಿದ ಅಧಿಕಾರಿಯೊಬ್ಬರು, ಇಂತಹ ಜಾಲಗಳನ್ನು ನಿರ್ಮಿಸಲು ಪಾಕಿಸ್ತಾನವು, ಚೀನಾದ ಸುಂದರ ಯುವತಿಯರನ್ನು ಬಳಸಿಕೊಳ್ಳುತ್ತಿದೆ. ಈ ಮಹಿಳೆಯರು ಭಾರತದ ಅಧಿಕಾರಿಗಳನ್ನು ಪತ್ತೆಹಚ್ಚಿ ಅವರೊಂದಿಗೆ ಅಂತರ್ಜಾಲದಲ್ಲಿ ನಂಟು ಬೆಸೆಯುತ್ತಾರೆ ಎಂದು ತಿಳಿಸಿದರು.

ಪ್ರೊಫೈಲ್ ಪುಟಗಳಲ್ಲಿ ಚೀನಾ ಮತ್ತು ಪಾಕಿಸ್ತಾನಿ ಮಹಿಳೆಯರ ಫೋಟೊಗಳನ್ನು ಬಳಸುವ ಐಎಸ್ಐ, ಅಧಿಕಾರಿಗಳನ್ನು ಸಿಲುಕಿಸಲು ಇಂಗ್ಲಿಷ್ ಹಾಗೂ ಉರ್ದು ಮಾತನಾಡುವ ಮಹಿಳೆಯರನ್ನು ನೇಮಿಸಿಕೊಳ್ಳುತ್ತಿದೆ.

ಮಹಿಳೆಯ ಪ್ರೊಫೈಲ್ ಸೃಷ್ಟಿಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಗೆಳೆತನದ ರಿಕ್ವೆಸ್ಟ್ ಕಳುಹಿಸಲಾಗುತ್ತದೆ. ಬಳಿಕ ಆ ಖಾತೆಯನ್ನು ನಿಭಾಯಿಸುವವರು ಚಾಟಿಂಗ್‌ಗೆ ಎಳೆಯುತ್ತಾರೆ.

ಅರುಣ್ ಮರ್ವಾಹ ಘಟನೆ

ಅರುಣ್ ಮರ್ವಾಹ ಘಟನೆ

ಈ ಹಿಂದೆ ಐಎಎಫ್ ಅಧಿಕಾರಿ ಅರುಣ್ ಮರ್ವಾಹ ಅವರನ್ನು ಹನಿ ಟ್ರ್ಯಾಪ್‌ನಲ್ಲಿ ಸಿಲುಕಿಸುವಾಗಲೂ ಇದೇ ತಂತ್ರ ಅನುಸರಿಸಲಾಗಿತ್ತು. ಅವರೊಂದಿಗೆ ಅಶ್ಲೀಲ ಮಾತುಗಳನ್ನು ಆಡುವ ಮೂಲಕ ಮೊದಲು ಅವರನ್ನು ಸಿಲುಕಿಸಲಾಗಿತ್ತು. ಬಳಿಕ ಮಾಹಿತಿ ಒದಗಿಸದೆ ಇದ್ದರೆ ಚಾಟ್‌ನ ವಿವರಗಳನ್ನು ಬಹಿರಂಗಗೊಳಿಸುವುದಾಗಿ ಬೆದರಿಕೆ ಹಾಕಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದರು.

ಅಪ್ಲಿಕಷೇನ್ ಬಳಕೆ

ಅಪ್ಲಿಕಷೇನ್ ಬಳಕೆ

ಹೂಕ್‌ಅಪ್ ಎಂಬ ಚಾಟಿಂಗ್ ಆಪ್ ಬಳಸುತ್ತಿದ್ದ ಅರುಣ್, ಆ ಅಪ್ಲಿಕೇಷನ್ ಮೂಲಕ ಸೂಕ್ಷ್ಮವಾದ ಮಾಹಿತಿಗಳನ್ನು ಕಳುಹಿಸಿದ್ದರು ಎಂದು ಆರೋಪಿಸಲಾಗಿದೆ. ಆದರೆ, ವ್ಯಕ್ತಿಯು ಒಮ್ಮೆ ಲಾಗೌಟ್ ಆದಾಗ ಆತ ನಡೆಸಿದ ಎಲ್ಲ ಸಂಭಾಷಣೆಗಳನ್ನೂ ಅಪ್ಲಿಕೇಷನ್ ಅಳಿಸಿಹಾಕುತ್ತದೆ. ಹೀಗಾಗಿ ಈ ಮಾಹಿತಿಗಳು ಅಧಿಕಾರಿಗಳಿಗೆ ದೊರೆತಿರಲಿಲ್ಲ.

ಇಸ್ಲಾಮಾಬಾದ್‌ನಿಂದ ನಿರ್ವಹಣೆ

ಇಸ್ಲಾಮಾಬಾದ್‌ನಿಂದ ನಿರ್ವಹಣೆ

ಇಂತಹ ಕುಣಿಕೆಗಳನ್ನು ಒಡ್ಡಲು ಆನ್‌ಲೈನ್‌ನಲ್ಲಿ ಸೃಷ್ಟಿಸಿದ ವಿವಿಧ ಪ್ರೊಫೈಲ್‌ಗಳನ್ನು ಪರಿಶೀಲಿಸಿದ ತನಿಖಾಧಿಕಾರಿಗಳು ಚೀನೀ ಮಹಿಳೆಯರ ಅಪಾರ ಸಂಖ್ಯೆಯ ಫೋಟೊಗಳನ್ನು ಪತ್ತೆಹಚ್ಚಿದೆ. ಈ ಎಲ್ಲಾ ವಿಳಾಸಗಳೂ ಐಎಸ್‌ಐನ ಕೇಂದ್ರ ಚಟುವಟಿಕೆ ನಡೆಯುತ್ತಿರುವ ಇಸ್ಲಾಮಾಬಾದ್‌ನಿಂದ ನಿರ್ವಹಣೆಯಾಗುತ್ತಿವೆ. ಅಲ್ಲಿಯೇ ಹನಿ ಟ್ರ್ಯಾಪ್‌ನ ಸಂಚು ರೂಪುಗೊಳ್ಳುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಐಎಸ್‌ಐಗೆ ಬೇಹುಗಾರಿಕೆ ಮಾಡುತ್ತಿದ್ದ ಆರೋಪದಲ್ಲಿ ದೇಶದ 13 ಸೇವೆಯಲ್ಲಿರುವ ಮತ್ತು ನಿವೃತ್ತ ರಕ್ಷಣಾ ಸಿಬ್ಬಂದಿಯನ್ನು ಬಂಧಿಸಲಾಗಿದೆ.

English summary
In the wake of the BrahMos spy case being busted, the Intelligence Bureau has issued an alert against honey traps. The alert states that Pakistan's ISI has been using good looking Pakistani and Chinese girls to set the traps on high ranking officials and those in the know of official secrets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X