ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಣಬೇಧ ನೀತಿ ಮೆಟ್ಟಿ ನಿಂತ ಮಂಡೇಲಗೆ ಟ್ವೀಟ್ ನಮನ

By Mahesh
|
Google Oneindia Kannada News

ಬೆಂಗಳೂರು, ಡಿ.6: ದಕ್ಷಿಣ ಆಫ್ರಿಕಾದಲ್ಲಿದ್ದ ವರ್ಣಬೇಧ ನೀತಿ ವಿರೋಧಿಸಿ ವಿಶ್ವದ ಕಣ್ಣು ತೆರೆಸಿದ ಮಡಿಬಾ(ತಂದೆ) ಮಂಡೇಲ ಅವರಿಗೆ ವಿಶ್ವದೆಲ್ಲೆಡೆಯಿಂದ ಶ್ರದ್ಧಾಂಜಲಿಯ ಮಹಾಪೂರ ಹರಿದಿದೆ. ಕಪ್ಪು ವರ್ಣದ ವ್ಯಕ್ತಿಯೊಬ್ಬ ದೇಶದ ಉನ್ನತ ಸ್ಥಾನಕ್ಕೇರಬಹುದು ಎಂಬುದನ್ನು ಮೊಟ್ಟ ಮೊದಲ ಬಾರಿಗೆ ತೋರಿಸಿಕೊಟ್ಟ ಮಾನವತಾವಾದಿ ನೆಲ್ಸನ್ ಮಂಡೇಲ ಅವರ ನಿಧನಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ ವಿಶ್ವದ ಹಲವು ಗಣ್ಯರು ಶಾಂತಿದೂತನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ 95 ವರ್ಷದ ನೆಲ್ಸನ್ ಮಂಡೇಲಾ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಅಧ್ಯಕ್ಷ ಜಾಕೋಬ್ ಝುಮಾ ಅವರು ಪ್ರಕಟಿಸಿದ್ದಾರೆ. ಮಂಡೇಲಾ ನಿಧನದ ಬಳಿಕ ದೇಶವನ್ನು ಉದ್ದೇಶಿಸಿ ಮಾಧ್ಯಮಕ್ಕೆ ಮಾತನಾಡಿದ ಝುಮಾ, 'ನಮ್ಮ ದೇಶ ಮಹಾನ್ ಪುತ್ರನನ್ನು ಕಳೆದುಕೊಂಡಿದೆ. ದೇಶದ ರಾಷ್ಟ್ರಪೀತನನ್ನು ನಾವು ಕಳೆದುಕೊಂಡಿದ್ದೆವೆ' ಎಂದು ಹೇಳಿದ್ದಾರೆ.

ದಶಕಗಳ ಕಾಲ ವರ್ಣಭೇದ ನೀತಿಯ ವಿರುದ್ಧ ಹೋರಾಡಿದ್ದ ಮಹಾನ್ ನಾಯಕ ಮಂಡೇಲಾ ಅವರು, ದೇಶ ದ್ರೋಹದ ಆರೋಪದ ಮೇಲೆ 27 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ಬಿಳಿಯರ ಅಲ್ಪಸಂಖ್ಯಾತರ ಆಳ್ವಿಕೆಗೆ ಅಂತ್ಯ ಹಾಡಿದ್ದರು.

1918ರ ಜುಲೈ 18ರಂದು ಈಸ್ಟರ್ನ್ ಕೇಪ್ ಪ್ರಾಂತ್ಯದ ಬುಡಕಟ್ಟು ಜನಾಂಗದ ಕುಟುಂಬವೊಂದರಲ್ಲಿ ಜನಿಸಿದ ನೆಲ್ಸನ್ ರೋಲಿಹ್ಲಾಲಾ ಮಂಡೇಲಾ ಅವರು, 1938ರಲ್ಲಿ ಕರಿಯ ಫೋರ್ಟ್ ಹೇರ್ ವಿವಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾಗ, ವಿದ್ಯಾರ್ಥಿ ಮುಷ್ಕರಕ್ಕಾಗಿ ಕಾಲೇಜಿನಿಂದ ಹೊರಹಾಕಲ್ಪಟ್ಟಿದ್ದರು.

1944ರಲ್ಲಿಯೇ ವರ್ಣಭೇದ ನೀತಿ ವಿರುದ್ಧ ಹೋರಾಟ ಆರಂಭಿಸಿದ್ದ ಮಂಡೇಲಾ, 1954ರಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್‌ನ ಯುವ ಘಟಕ ಸ್ಥಾಪನೆಗೆ ಶ್ರಮಿಸಿದರು. ಭಾರತದೊಡನೆ ಉತ್ತಮ ಬಾಂಧವ್ಯ ಹೊಂದಿದ್ದ ಮಂಡೇಲ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ಕೂಡಾ ನೀಡಿ ಗೌರವಿಸಲಾಗಿತ್ತು. ಸಾಮಾಜಿಕ ಜಾಲ ತಾಣಗಳಲ್ಲಿ ಗುಡ್ ಬೈ ಮಡಿಬಾ, ರಾಷ್ಟ್ರಪಿತನಿಗೆ ನಮನ ಟ್ವೀಟ್ ಗಳು ಹರಿದಾಡುತ್ತಿವೆ.

Array

ನರೇಂದ್ರ ಮೋದಿ ಟ್ವೀಟ್

ಬಿಜೆಪಿ ಪ್ರಧಾನಿ ಅಭ್ಯರ್ಥಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಸಂತಾಪ

ಗಣ್ಯರು ಸಂತಾಪ ವ್ಯಕ್ತಪಡಿದ್ದಾರೆ

ಗಣ್ಯರು ಸಂತಾಪ ವ್ಯಕ್ತಪಡಿದ್ದಾರೆ

ಮಂಡೇಲ ಅವರ ಅಗಲಿಕೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಗುಡ್ ಬೈ ಮಡಿಬಾ, ರಾಷ್ಟ್ರಪಿತನಿಗೆ ನಮನ ಟ್ವೀಟ್ ಗಳು ಹರಿದಾಡುತ್ತಿವೆ

ಪ್ರಧಾನಿ ಟ್ವೀಟ್

ಗಾಂಧಿ ತತ್ವ ಪಾಲಿಸುತ್ತಿದ್ದ ಮಂಡೇಲ ಅವರ ನಿಧನ ದಕ್ಷಿಣಆಫ್ರಿಕಾಕ್ಕೆ ಮಾತ್ರವಲ್ಲ ಭಾರತಕ್ಕೂ ತುಂಬಲಾರದ ನಷ್ಟ

Array

ನಿರುಪಮಾ ರಾವ್ ಕಂಬನಿ

ವಿದೇಶಾಂಗ ರಾಯಭಾರಿ ನಿರುಪಮಾ ರಾವ್ ಅವರು "I wish we could internalize #Madiba 's life message that acts of mercy are far greater than acts of retribution. Somewhere we lost our way." ಎಂದು ಟ್ವೀಟ್ ಮಾಡಿದ್ದಾರೆ.

ಒಮರ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್

ನಟ ರಾಹುಲ್ ಬೋಸ್

ರಗ್ಬಿ ಆಟಗಾರರಿಗೆ ಸ್ಪೂರ್ತಿ ತುಂಬಿ ವರ್ಣ ಬೇಧ ನೀತಿಯಿಂದ ದೇಶ ಇಬ್ಭಾಗ ತಡೆದು ಒಂದಾಗಿಸಿದ ಮಹಾನ್ ಚೇತನ

English summary
South Africa's first elected black president and a global anti-apartheid icon -- Nelson Mandela died at the age of 95President Jacob Zuma, while issuing an official statement on Friday, Dec 6, said, "Fellow South Africans, our beloved...the founding president of our democratic nation, has departed."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X