ವಾರ್ಷಿಕ 3.3 ಕೋಟಿ ರೂ. ವೇತನ! Airbnbಯಲ್ಲಿ ಕೆಲಸ ಮಾಡುತ್ತಿರುವ ಯುವತಿಯ ಯಶಸ್ಸಿನ ಗುಟ್ಟು ರಟ್ಟು
ಕೋವಿಡ್ ನಂತರದ ದಿನಗಳಲ್ಲಿ ವರ್ಕ್ ಫ್ರಮ್ ಹೋಮ್ ಅಂದ್ರೆ ಈ ರಿಮೋಟ್ ವರ್ಕ್ ಸಂಸ್ಕೃತಿ ಜಗತ್ತಿನಾದ್ಯಂತ ವಿಸ್ತರಿಸಿದೆ. ಮನೆಯಲ್ಲೇ ಕುಳಿತು ಕೋಟ್ಯಂತರ ರೂಪಾಯಿ ಸಂಪಾದಿಸುವ ಅವಕಾಶವನ್ನ ಇಂದಿನ ತಂತ್ರಜ್ಞಾನ ಒದಗಿಸಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಮ್ಯಾಡಿ ಜಾಂಗ್ (Maddy Zhang) ಎನ್ನುವವರು.
ಏಕೆಂದರೆ, ವಿಶ್ವದ ಜನಪ್ರಿಯ ಸಂಸ್ಥೆ ಏರ್‌ಬಿಎನ್‌ಬಿಯಲ್ಲಿ (Airbnb) ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಇವರು, ವಾರ್ಷಿಕ ಬರೋಬ್ಬರಿ 400k ಡಾಲರ್ ಅಂದ್ರೆ ಸುಮಾರು 3.3 ಕೋಟಿ ರೂಪಾಯಿ ವೇತನ ಪಡೆಯುತ್ತಿದ್ದಾರೆ.

ವಿಶೇಷವೆಂದರೆ, ಇದು ಸಂಪೂರ್ಣ ರಿಮೋಟ್ ಉದ್ಯೋಗ. ಇವರ ಈ ಯಶೋಗಾಥೆಯನ್ನ 'ವಿಕಾಸ್ ಆಲ್ವೇಸ್' ಎಂಬುವವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಎಂಐಟಿ ಪದವೀಧರೆ ವರ್ಷ
ಮ್ಯಾಡಿ ಜಾಂಗ್ ಅವರ ಶೈಕ್ಷಣಿಕ ಮತ್ತು ವೃತ್ತಿಪರ ಹಿನ್ನೆಲೆ ತುಂಬ ಸ್ಟ್ರಾಂಗ್ ಆಗಿದೆ. ಅವರು ಅಮೆರಿಕದ ಪ್ರತಿಷ್ಠಿತ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ (MIT) ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದಿದ್ದಾರೆ. ತಮ್ಮ ವಿದ್ಯಾಭ್ಯಾಸದ ಸಂಧರ್ಭದಲ್ಲೇ ಅವರು ಅಮೆಜಾನ್, ಮೈಕ್ರೋಸಾಫ್ಟ್, ಮಾರ್ಗನ್ ಸ್ಟಾನ್ಲಿ ಮತ್ತು ಐಬಿಎಂನಂತಹ ಬೃಹತ್ ಐಟಿ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಮಾಡಿದ ಅನುಭವ ಹೊಂದಿದ್ದಾರೆ.
ಏರ್‌ಬಿಎನ್‌ಬಿ ಸೇರುವ ಮುನ್ನ ಅವರು ಕ್ಯಾಲಿಫೋರ್ನಿಯಾದಲ್ಲಿರುವ ಗೂಗಲ್ ಕೇಂದ್ರ ಕಚೇರಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಸತತ ನಾಲ್ಕೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಈ ಅಪಾರ ಅನುಭವವೇ ಅವರಿಗೆ ಉನ್ನತ ಮಟ್ಟದ ರಿಮೋಟ್ ಹುದ್ದೆ ಸಿಗಲು ಅಡಿಪಾಯ ಹಾಕಿಕೊಟ್ಟಿತು.
ಹೈ ಪೇಯಿಂಗ್ ರಿಮೋಟ್ ಜಾಬ್ ಪಡೆಯಲು 5 ಪ್ರಮುಖ ತಂತ್ರಗಳು
ಮ್ಯಾಡಿ ಜಾಂಗ್ ಅವರು ಈ ಮಟ್ಟದ ಯಶಸ್ಸು ಸಾಧಿಸಲು ಕೇವಲ ತಾಂತ್ರಿಕ ಜ್ಞಾನ ಮಾತ್ರವಲ್ಲ, ಸೂಕ್ತವಾದ ವೃತ್ತಿಪರ ತಂತ್ರಗಾರಿಕೆಯೂ ಕಾರಣ. ಅಧಿಕ ವೇತನದ ರಿಮೋಟ್ ಉದ್ಯೋಗ ಪಡೆಯಲು ಅವರು ಅನುಸರಿಸಿದ ಐದು ಪ್ರಮುಖ ಹಂತಗಳನ್ನು ವಿಕಾಸ್ ವಿವರಿಸಿದ್ದಾರೆ:
ಹಂತ 1: ರಿಮೋಟ್-ಫಸ್ಟ್ ಕಂಪನಿಗಳ ಶೋಧನೆ : ಎಲ್ಲ ಕಂಪನಿಗಳು ರಿಮೋಟ್ ಕೆಲಸಕ್ಕೆ ಆದ್ಯತೆ ನೀಡುವುದಿಲ್ಲ. ಹೀಗಾಗಿ ಮೊದಲ ಹಂತದಲ್ಲಿಯೇ, ಕಚೇರಿಗೆ ಬರುವ ಬದಲು ಉದ್ಯೋಗಿಗಳಿಗೆ ಎಲ್ಲಿಂದಲಾದರೂ ಕೆಲಸ ಮಾಡಲು ಉತ್ತೇಜಿಸುವ ಕಂಪನಿಗಳ ಪಟ್ಟಿಯನ್ನ ಸಿದ್ಧಪಡಿಸಿಕೊಳ್ಳಿ.
ಹಂತ 2: ಅಸಿಂಕ್-ಪ್ರೂಫ್ ಪೋರ್ಟ್‌ಫೋಲಿಯೋ ನಿರ್ಮಾಣ (Build an Async-Proof Portfolio): ರಿಮೋಟ್ ಕೆಲಸದಲ್ಲಿ ಸದಾ ಮೇಲಧಿಕಾರಿಗಳ ಅಥವಾ ಸಹೋದ್ಯೋಗಿಗಳ ಜೊತೆ ಸಂಪರ್ಕದಲ್ಲಿರಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇತರರ ಸತತ ಮಾರ್ಗದರ್ಶನವಿಲ್ಲದೆ, ಸ್ವತಂತ್ರವಾಗಿ (Asynchronous communication ಮೂಲಕ) ನೀವೇ ಕೆಲಸ ನಿಭಾಯಿಸಬಲ್ಲೆ ಎಂಬುದನ್ನು ಸಾಬೀತುಪಡಿಸುವಂತಹ ಅತ್ಯುತ್ತಮ ಪ್ರಾಜೆಕ್ಟ್‌ಗಳ ಪೋರ್ಟ್‌ಫೋಲಿಯೋವನ್ನ ನಿಮ್ಮ ರೆಸ್ಯೂಮೆಯಲ್ಲಿ ಸೇರಿಸಿ.
ಹಂತ 3: ಅರ್ಜಿಗೆ ಕರಾರುವಕ್ಕಾದ ಸಮಯ: ಯಾವುದೇ ಪ್ರಮುಖ ಕಂಪನಿಯಲ್ಲಿ ಹೊಸ ಉದ್ಯೋಗದ ಪ್ರಕಟಣೆ ಹೊರಬಿದ್ದ 48 ಗಂಟೆಗಳ ಒಳಗೆ ಅರ್ಜಿ ಸಲ್ಲಿಸುವುದು ಅತ್ಯಂತ ಮುಖ್ಯ. ಹೀಗೆ ಮಾಡುವುದರಿಂದ ನಿಮ್ಮ ಪ್ರೊಫೈಲ್ ಎಚ್‌ಆರ್ ಅಥವಾ ಆಯ್ಕೆಗಾರರ ಕಣ್ಣಿಗೆ ಬೇಗ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ.
Meet Maddy Zhang, who completed her Bachelor’s in Computer Science from MIT.Her internships include Amazon, Microsoft, Morgan Stanley, and IBM. Now, she is a Senior Software Engineer at Airbnb, earning 0K a year ... and that too remotely.
— Vikas Alwys (@VikasAlwys) September 25, 2026
She also worked at Google California… pic.twitter.com/9L4zrDyeRr
ಹಂತ 4: ರಿಮೋಟ್ ಸಂದರ್ಶನಕ್ಕೆ ಪ್ರತ್ಯೇಕ ತಯಾರಿ: ಆನ್‌ಲೈನ್ ಮೂಲಕ ನಡೆಯುವ ಸಂದರ್ಶನಗಳನ್ನ ಎದುರಿಸಲು ವಿಶೇಷ ತಯಾರಿ ಅಗತ್ಯ. ಕ್ಯಾಮೆರಾ ಎದುರು ಆತ್ಮವಿಶ್ವಾಸದಿಂದ ಮಾತನಾಡುವುದು, ಡಿಜಿಟಲ್ ವೈಟ್‌ಬೋರ್ಡ್ ಬಳಕೆ ಹಾಗೂ ಆನ್‌ಲೈನ್ ಕೋಡಿಂಗ್ ಪರೀಕ್ಷೆಗಳಿಗೆ ಮುಂಚಿತವಾಗಿಯೇ ಸಿದ್ಧರಾಗಿರಿ.
ಹಂತ 5: ವಾರ್ಮ್ ವಿಸಿಬಿಲಿಟಿ ಲೂಪ್: ಉದ್ಯೋಗ ಅರಸುತ್ತಿರುವಾಗ ಲಿಂಕ್ಡ್‌ಇನ್, ಎಕ್ಸ್ ಮುಂತಾದ ವೃತ್ತಿಪರ ಜಾಲತಾಣಗಳಲ್ಲಿ ಸಕ್ರಿಯರಾಗಿರಿ. ಉದ್ಯಮದ ಪರಿಣತರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಮತ್ತು ನಿಮ್ಮ ಕೌಶಲ್ಯಗಳನ್ನ ಪ್ರದರ್ಶಿಸುವುದು ಪರೋಕ್ಷವಾಗಿ ಉತ್ತಮ ಅವಕಾಶಗಳನ್ನ ತಂದುಕೊಡುತ್ತದೆ.
ಮ್ಯಾಡಿ ಜಾಂಗ್ ಅವರ ಈ ಸಾಧನೆಯು ರಿಮೋಟ್ ಉದ್ಯೋಗ ಅರಸುತ್ತಿರುವ ಪ್ರತಿಯೊಬ್ಬರಿಗೂ ದೊಡ್ಡ ಸ್ಫೂರ್ತಿಯಾಗಿದೆ. ಸರಿಯಾದ ಕೌಶಲ್ಯ ಮತ್ತು ವ್ಯವಸ್ಥಿತ ಯೋಜನೆಯಿದ್ದರೆ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಕನಸಿನ ಉದ್ಯೋಗ ಪಡೆಯಬಹುದು ಎಂಬುದನ್ನ ಇದು ಸಾಬೀತುಪಡಿಸಿದೆ.


Click it and Unblock the Notifications
