ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಲಭೂಷಣ್ ರನ್ನು ಇರಾನಿನಲ್ಲಿ ಅಪಹರಿಸಿ ಐಎಸ್ಐಗೆ ಮಾರಾಟ ಮಾಡಿದ್ದೇಗೆ?

By ವಿಕಾಸ್ ನಂಜಪ್ಪ
|
Google Oneindia Kannada News

ಇಸ್ಲಮಾಬಾದ್, ಜುಲೈ 20: ಕುಲಭೂಷಣ್ ಜಾಧವ್ ರನ್ನು ಉಗ್ರ ಸಂಘಟನೆ ಲಷ್ಕರ್ ಇ ಖೊರಸಾನ್ ಸೆರೆ ಹಿಡಿದಿತ್ತು. ನಂತರ ಪಾಕಿಸ್ತಾನ ಗುಪ್ತಚರ ಸಂಸ್ತೆ ಐಎಸ್ಐಗೆ ಮಾರಾಟ ಮಾಡಿತ್ತು ಎಂಬುದಾಗಿ ಬಲೂಚಿಸ್ತಾನದ ಸಾಮಾಜಿಕ ಕಾರ್ಯಕರ್ತ ಮೆಹ್ರಾವ್ ಸರ್ಜೋವ್ ಹೇಳಿದ್ದಾರೆ.

"ಜಾಧವ್ ಪಾಕಿಸ್ತಾನವನ್ನು ಅವರಾಗಿ ಪ್ರವೇಶವೇ ಮಾಡಿರಲಿಲ್ಲ. ಅವರನ್ನು ಐಎಸ್ಐಗೆ ಮಾರಾಟ ಮಾಡಲಾಗಿತ್ತು. ಜಾಧವ್ ಒಬ್ಬ ಗೂಢಚರ , ಭಯೋತ್ಪಾದನೆಯಲ್ಲಿ ತೊಡಗಿದ್ದ ಎಂಬುದೆಲ್ಲಾ ಸುಳ್ಳು. ಆತನನ್ನು ಇರಾನಿನಿಂದ ಅಪಹರಣ ಮಾಡಿ ಪಾಕಿಸ್ತಾನಕ್ಕೆ ಕರೆತರಲಾಗಿದೆ," ಎಂದು ಅವರು ಹೇಳಿದ್ದಾರೆ.

How Kulbhushan Jadhav was abducted in Iran and sold to ISI

"ಜಾಧವ್ ಗೆ ಕೆಲವರು ಉದ್ಯಮದ ಆಫರ್ ನೀಡಿದ್ದರು. ನಂತರ ಜಾಧವ್ ಇರಾನಿನ ಸರವಣ್ ನಗರಕ್ಕೆ ಬಾಡಿಗೆ ಕಾರಿನಲ್ಲಿ ತೆರಳಿದ್ದರು. ಈ ಕಾರಿಕ್ಕೆ ಬಲೋಚಿಸ್ತಾನದ ಪ್ರತ್ಯೇಕತಾವಾದಿಯೊಬ್ಬ ಹತ್ತಿಕೊಂಡಿದ್ದ. ಹೀಗೆ ಸೆರೆಸಿಕ್ಕ ಜಾಧವ್ ಪಾಕಿಸ್ತಾನಕ್ಕೆ ಬಂದಿದ್ದರು," ಎಂದು ಸರ್ಜೋವ್ ಹೇಳಿದ್ದಾರೆ.

"ವಿದೇಶಿಯರ ಅಪಹರಣದಲ್ಲಿ ನಿಸ್ಸೀಮವಾಗಿರುವ ಲಷ್ಕರ್ ಇ ಖೊರಾಸಾನ್ ಈ ಕೃತ್ಯ ಎಸಗಿದೆ. ಅಪಹರಣ ನಡೆಸಿ ಜಾಧವ್ ರನ್ನು ಝಮಾರಣ್ ನಲ್ಲಿ ಮೂರುವಾರಗಳ ಕಾಲ ಇಡಲಾಗಿತ್ತು. ಕೊನೆಗೆ ಡೀಲ್ ಓಕೆ ಆದ ನಂತರ ಐಎಸ್ಐಗೆ ಮಾರಾಟ ಮಾಡಲಾಯಿತು," ಎಂದು ಅವರು ವಿವರ ನೀಡಿದ್ದಾರೆ.

English summary
Kulbhushan Jadhav was captured by the terrorist group Lashkar-e-Khorasan and then sold to the ISI in Pakistan. This revelation was made Baloch activist, Mehrab Sarjov.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X