'ನೋಟು ನಿಷೇಧದಿಂದ ಉಗ್ರರಿಗೇನೂ ಹಣಕಾಸು ತೊಂದರೆ ಆಗಿಲ್ಲ'

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಡಿಸೆಂಬರ್ 20: ಕಾಶ್ಮೀರಿ ಮುಜಾಹಿದೀನ್ ಗಳಿಗೆ, ಮಾವೋಯಿಸ್ಟ್ ಗಳಿಗೆ ಹಾಗೂ ಖಲಿಸ್ತಾನ್ ಭಯೋತ್ಪಾದಕರಿಗೆ ಹಣಕಾಸಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಡಾಲರ್, ಪೌಂಡ್ ಹಾಗೂ ಯುರೋ ಬದಲಾವಣೆ ಮಾಡಿಕೊಳ್ಳುವ ಮೂಲಕ ಸಣ್ಣ ಮುಖಬೆಲೆಯ ನೋಟುಗಳನ್ನು ಸುಲಭವಾಗಿ ಪಡೀತಿವಿ.

-ಇದು ಜೈಶ್ ಇ ಮೊಹ್ಮದ್ ನ ಮುಖ್ಯಸ್ಥ ಮಸೂದ್ ಅಜರ್ ತನ್ನ ವಾರದ ಲೇಖನದಲ್ಲಿ ಬರೆದುಕೊಂಡಿರುವ ಹೂರಣ. ಇದು ಜೈಶ್ ಉಗ್ರ ಸಂಘಟನೆಯಿಂದ ಪ್ರಕಟವಾಗುವ ಆನ್ ಲೈನ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಖಲಂ ಮತ್ತು ಅಜರ್ ಹೆಸರಿನಲ್ಲಿ ಪ್ರಕಟವಾಗುವ ಆನ್ ಲೈನ್ ನಿಯತಕಾಲಿಕೆಯಲ್ಲಿ 'ಸಾದಿ' ಎಂಬ ಹೆಸರಿನಲ್ಲಿ ಅಜರ್ ಲೇಖನ ಬರೆದಿದ್ದಾನೆ.[ಹಳೆ ನೋಟುಗಳಿಂದ ದಂಡ ಕಟ್ಬಹುದಾ ಅಂತಾನೆ ಯಾಸಿನ್!]

ಭಾರತ ಸರಕಾರದ ಅಪನಗದೀಕರಣ ನಿರ್ಧಾರದ ಬಗ್ಗೆ ಪ್ರಸ್ತಾವ ಮಾಡಿರುವ ಅಜರ್, ನಮಗೆ ಇದರಿಂದ ಯಾವ ತೊಂದರೆಯೂ ಇಲ್ಲ. ಇಂಥ ಯಾವ ತೀರ್ಮಾನದಿಂದಲೂ ಹಣಕಾಸಿನ ಸಮಸ್ಯೆ ಆಗೋದಿಲ್ಲ. ನವೆಂಬರ್ 29ರ ನಗ್ರೋಟಾ ದಾಳಿಯೇ ನಮಗೆ ಆರ್ಥಿಕ ಸಮಸ್ಯೆ ಇಲ್ಲ ಎಂಬುದಕ್ಕೆ ಸಾಕ್ಷಿ ಎಂದು ಆತ ಬರೆದುಕೊಂಡಿದ್ದಾನೆ.

How I beat demonetisation- Jaish chief Maulana Masood

ಗುಪ್ತಚರ ಇಲಾಖೆ ಅಧಿಕಾರಿಯೊಬ್ಬರು ಒನ್ ಇಂಡಿಯಾಗೆ ವಿವರಿಸಿರುವ ಪ್ರಕಾರ, ಉಗ್ರರು ತಮ್ಮ ಬಳಿಯ ವಿದೇಶಿ ಕರೆನ್ಸಿಗಳನ್ನು ತುಂಬ ಕಡಿಮೆ ಬೆಲೆಗೆ ಬದಲಾಯಿಸಿಕೊಳ್ತಾರೆ. ಉದಾಹರಣೆ ಒಂದು ಅಮೆರಿಕನ್ ಡಾಲರ್ ಗೆ 67.87 ರುಪಾಯಿ ಬೆಲೆ ಭಾರತದಲ್ಲಿ ಇದೆ. ಅದನ್ನು 40 ರುಪಾಯಿಗೆ ಬದಲಾಯಿಸಿಕೊಳ್ಳುತ್ತಾರೆ.[ಪಠಾಣ್ ಕೋಟ್ ದಾಳಿ: ಮೌಲಾನಾ ಮಸೂದ್ ವಿರುದ್ಧ ಚಾರ್ಜ್ ಶೀಟ್]

ಇತ್ತೀಚೆಗೆ ತನಿಖೆಗೆ ಸಂದರ್ಭದಲ್ಲಿ ಉಗ್ರರ ಬಳಿ ಸಾಕಷ್ಟು ಹಣ ಪತ್ತೆಯಾಗಿತ್ತು. ಅದರಲ್ಲಿ ಹೊಸ ಎರಡು ಸಾವಿರ ರುಪಾಯಿ ನೋಟು ಸಹ ಇದ್ದವು. ಉಗ್ರರ ಹೊಸ ಕಾರ್ಯಾಚರಣೆ ವಿಧಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕಿದೆ. ಜಮ್ಮು ಮತ್ತು ಕಾಶ್ಮೀರದ ಪೊಲೀಸರಿಗೆ ಉಗ್ರರಿಗೆ ನೆರವು ಒದಗಿಸುವವರ ಮೇಲೆ ಕಣ್ಣಿಟ್ಟಿದ್ದಾರೆ. ಇದರ ಜತೆಗೆ ಅಪನಗದೀಕರಣದ ನಂತರ ಮಾವೋ ಹಾಗೂ ನಕ್ಸಲರಿಗೆ ಹೇಗೆ ಹಣ ಸಿಗುತ್ತಿದೆ ಎಂಬ ಬಗ್ಗೆ ಕೂಡ ಗುಪ್ತಚರ ಇಲಾಖೆ ನಿಗಾವಹಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Kashmiri Mujahideens, Maoists and Khalistani fighters will not suffer any financial hardship. We are able to get the small currency by exchanging dollars, Pounds and Euros easily. This is what Jaish-e-Mohammad chief, Maulana Masood Azhar had to write about in weekly online magazine published by the outfit.
Please Wait while comments are loading...